ಜಿಲ್ಲೆ

ಇನ್ನರ್ ವೀಲ್  ಕ್ಲಬ್ ಆಫ್ ಗದಗ ಮಿಡ್ ಟೌನ್  ವತಿಯಿಂದ ಸೀರೆ ಉಡುಗೊರೆ

Gadag - Shivanand Hiremath

ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್ ವತಿಯಿಂದ ಗದಗ್ ನಗರದ ತರಕಾರಿ ಮಾರ್ಕೆಟ್ ನಲ್ಲಿ ,ಹೂವು, ಹಣ್ಣು ತರಕಾರಿ   ಮಾರುವ ಮಹಿಳೆಯರಿಗೆ,   ಪೌರಕಾರ್ಮಿಕ ಮಹಿಳೆಯರಿಗೆ  ಹಾಗೂ ಗಡಗಿ ಮಾರುವ ಮಹಿಳೆಯರಿಗೆ  ಅಂತರಾಷ್ಟ್ರೀಯ ಅಮ್ಮಂದಿರ ದಿನಾಚರಣೆಯ ಅಂಗವಾಗಿ  

ಸೀರೆಗಳನ್ನು ಉಡುಗೊರೆಯಾಗಿ ಕೊಡಲಾಯಿತು. ಇದರ ಪ್ರಾಯೋಜಕತ್ವವನ್ನು ಗದಗ್  ಸೂರ್ಯ ನಗರದ ನಿವಾಸಿಯಾದ ಶ್ರೀಮತಿ ಜಯಶ್ರೀ. ಗಿರಡ್ಡಿ ಅವರು ವಹಿಸಿಕೊಂಡಿದ್ದರು.   ಅಮ್ಮ.... ಈ ಒಂದು ಪದವೇ ಅಮೃತ, ಅಮ್ಮ ಉಸಿರು ನೀಡಿದ ದೇವತೆ, ಅಮ್ಮ ಮಮತೆಯ ಮೂರ್ತಿ, ಅತ್ತಾಗ ಕಣ್ಣೀರು ಒರೆಸಿದ ದೇವತೆ, ಬಿದ್ದಾಗ ಎತ್ತಿ ಮುನ್ನಡೆಸಿದ ಮಾತೆ ಅಮ್ಮನ ಪ್ರೀತಿ ಆಗಸ,ಕಾಳಜಿ ಭೂಮಿಗಿಂತಲೂ ವಿಸ್ತಾರ, ಅಮ್ಮನೇ ಅದ್ಭುತ ಪ್ರಪಂಚ, ಕುಟುಂಬದ ಆಧಾರ, ರಜೆ ಸಂಬಳವೇ ಇಲ್ಲದೆ ಕೆಲಸ ಮಾಡುವ ಶ್ರಮಜೀವಿ, ಬದುಕಿನ ಶಕ್ತಿ. ಇಂತಹ ಎಲ್ಲ  ಅಮ್ಮಂದಿರಿಗೆ ನಮ್ಮ ಹೃದಯಪೂರ್ವಕ  ನಮಸ್ಕಾರಗಳು.ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್, ಖಜಾಂಚಿ ಶ್ರೀಮತಿ ರಾಣಿ  ಚಂದಾವರಿ, ಸೂರ್ಯ ನಗರದ ನಿವಾಸಿಯಾದ ಶ್ರೀಮತಿ ಜ್ಯೋತಿ ಕಳಸಗೊಂಡ ಉಪಸ್ಥಿತರಿದ್ದರು.