ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ. ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ಸೆಮಿಸ್ಟರ್ ಹಾಗೂ ತೃತೀಯ ಸೆಮಿಸ್ಟರ್ ನ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ವಿಶ್ವವಿದ್ಯಾಲಯವು ಪ್ರಕಟಿಸಿದ್ದು, ಪ್ರಥಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಕು. ಯುಕ್ತಿ ಕಟ್ನಳ್ಳಿ ಶೇ 89.16, ದ್ವಿತೀಯ ಸ್ಥಾನ ಕು. ಮಂಜುಳಾ ಹರಿಜನ ಶೇ 88.83, ತೃತೀಯ ಸ್ಥಾನ ಕು. ಶ್ರೀಕಾಂತ ಕರಡಿ ಶೇ 88.16 ಹಾಗೂ ನಾಲ್ಕನೇ ಸ್ಥಾನವನ್ನು ಕು. ಹಜರತ್ಬಿ ನದಾಫ್ ಶೇ 87.66 ರಷ್ಟು ಅಂಕಗಳನ್ನು ಪಡೆದಿದ್ದಾರೆ ಹಾಗೆಯೇ ತೃತೀಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಕು. ಬೃಂದಾ ಮಲಗೌಡರ ಶೇ 90.66, ದ್ವಿತೀಯ ಸ್ಥಾನ ಕು. ಶ್ರವಣಕುಮಾರ ರಾಥೋಡ್ ಶೇ 90.50, ತೃತೀಯ ಸ್ಥಾನ ಕು. ಶಾರದಾ ನಾಗಾವಿ ಶೇ 90.00 ಹಾಗೂ ನಾಲ್ಕನೇ ಸ್ಥಾನವನ್ನು ಕು. ಅಕ್ಷತಾ ಹಿರೇಮಠ ಶೇ 89.66 ರಷ್ಟು ಅಂಕಗಳನ್ನು ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
ಅತಿ ಹೆಚ್ಚು ಅಂಕ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ಪ್ರಶಿಕ್ಷಣಾರ್ಥಿಗಳನ್ನು ವಿದ್ಯಾದಾನ ಸಮಿತಿಯ ಅಧ್ಯಕ್ಷರಾದ ಶ್ರೀ ಡಿ. ಬೀ. ಹುಯಿಲಗೋಳ, ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ. ಬೀ. ಹುಯಿಲಗೋಳ, ಆಡಳಿತ ಮಂಡಳಿಯ ಸರ್ವ ಸದಸ್ಯರು, ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ, ಮಹಾವಿದ್ಯಾಲಯದ ಎಲ್ಲಾ ಬೋಧಕ- ಬೋಧಕೇತರು ಹಾಗೂ
ಸಿಬ್ಬಂದಿ ವರ್ಗದವರು ಅಭಿನಂದಿಸಿ ಶ್ಲಾಘಿಸಿದ್ದಾರೆ.