ವಿಜಯವಾಣಿ ಸುದ್ದಿಜಾಲ ಗದಗ
ಜನಸಾಮಾನ್ಯರ ಸಮಸ್ಯೆಗೆ ಸದಾ ಸ್ಪಂದಿಸುವ, ಯಾರ ಬಗ್ಗೆಯೂ ಲುವಾಗಿ ಮಾತನಾಡದ ಗಂಭಿರ ವ್ಯಕ್ತಿತ್ವದ ಅಪರೂಪ ರಾಜಕಾರಣಿ ಕೃಷ್ಣ ಬೈರೇಗೌಡ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಮಂಗಳವಾರ ಸಂಜೆ ನಗರದ ತೋಂಟದಾರ್ಯ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಲೆ$್ಮಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಕೊಡಮಾಡುವ ಮಹಾಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಸಿ ಮಾತನಾಡಿದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸಚಿವ ಸಂಪುಟದಲ್ಲಿ ಅನೇಕ ಜಟಿಲ ವಿಷಯಗಳಿಗೆ ಪರಿಹಾರ ಸೂಚಿಸಿ ಗಮನ ಸೆಳೆದಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೆ ಕೃಷ್ಣ ಭೈರೇಗೌಡ ಅವರನ್ನು ಸಲಹೆ ಕೇಳುವಷ್ಟು ಪಾಂಡಿತ್ಯ ಸಂಪಾದಿಸಿದ್ದಾರೆ. ಅವರ ಸಾಮರ್ಥ್ಯದ ಹಿಂದಿನ ಶಕ್ತಿ ಅವರ ಧರ್ಮ ಪತ್ನಿ ಮೀನಾಕ್ಷಿ ಮುಖ್ಯ ಕಾರಣ. ಅಂಥ ದಂಪತಿಗೆ ಮಹಾ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ನೀಡಿರುವುದು ಸೂಕ್ತವಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ರಾಜಕೀಯ ಜೀವನ ಸವಾಲುಗಳಿಂದ ಕೂಡಿದೆ. ನಾನು ಸಹ ಹೊಂದಾಣಿಕೆ ಮಾಡಿಕೊಂಡಿದ್ದೇನೆ. ನಾನೇನು ರ್ಪೂಣ ಪ್ರಾಮಾಣಿಕ, ಅಪರಂಜಿ ಅಲ್ಲವೇ ಅಲ್ಲ. ಆ ಕಾರಣಕ್ಕಾಗಿ ನಾನು ಬಿಳಿ ಬಟ್ಟೆ ಖಾದಿ ಹಾಕಲ್ಲ. ಅದನ್ನು ಹಾಕುವ ಅರ್ಹತೆಯೂ ಇಲ್ಲ. ನನ್ನ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ನನಗೆ ಅವಕಾಶ ಸಿಕ್ಕಿವೆ. ಪಕ್ಷ, ಕ್ಷೇತ್ರದ ಜನರ ನನಗೆ ಅವಕಾಶ ಕೊಟ್ಟಿದ್ದಾರೆ. ಆ ಕಾರಣಕ್ಕಾಗಿ ನಾನು ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸುವುದಿಲ್ಲ. ಆದರೆ ತೋಂಟದ ಸಿದ್ಧರಾಮ ಶ್ರೀಗಳ ಒತ್ತಾಯ, ಗದಗ ಜನರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣಕ್ಕೆ ಈ ಪ್ರಶಸ್ತಿ ಸ್ವೀಕರಿಸಿದ್ದೇನೆ ಎಂದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಅವರ ಪತ್ನಿ ಮೀನಾಕ್ಷಿ ಅವರಿಗೆ ಮಹಾ ಮಾನವತಾವಾದಿ ಬಸವೇಶ್ವರ ಪ್ರಶಸ್ತಿಯನ್ನು ಗಾಂಧಿವಾದಿ, ನಾಡೋಜ ವೂಡೇ ಪಿ. ಕೃಷ್ಣ ಪ್ರದಾನ ಮಾಡಿದರು. ಪ್ರಶಸ್ತಿ 1 ಲಕ್ಷ ರೂ. ಹಾಗೂ ಸ್ಮರಣಿಕೆ ಒಳಗೊಂಡಿದೆ.
ತೋಂಟದ ಸಿದ್ಧರಾಮ ಶ್ರೀಗಳು, ವಿಜಯಪುರ ಷಣ್ಮುಖರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ. ಆರ್. ಪಾಟೀಲ, ಜಿ. ಎಸ್. ಗಡ್ಡದೇವರಮಠ, ಸಚಿವ ಎಸ್. ಎಸ್. ಪಾಟೀಲ, ಮಾಜಿ ಸಂಸದ ಐ. ಜಿ. ಸನದಿ, ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ, ಲಿಂಬಯ್ಯಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಹಾಗೂ ಪ್ರತಿಷ್ಠಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೋಟ್
ತೋಂಟದಾರ್ಯ ಮಠ ಮತ್ತು ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನ ನೀಡಿದ ಮಹಾ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಸ್ವೀಕರಿಸಿರುವುದು ಖುಷಿ ತಂದಿದೆ. ಪ್ರಶಸ್ತಿಯ ಮೊತ್ತವನ್ನು ಬ್ಯಾಟರಾಯನಪುರ ಕ್ಷೇತ್ರದ ಕೊಳಚೆ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಕೆ ಮಾಡುತ್ತೇವೆ.
ಮೀನಾಕ್ಷಿ ಕೃಷ್ಣ ಭೈರೇಗೌಡ