ಜಿಲ್ಲೆ

ಅಧ್ಯಕ್ಷರ ವಾರ್ಡ್​ನಲ್ಲೇ ಮಾನ್ವಿ ಹಳ್ಳ ಒತ್ತುವರಿ!

Gadag - Shivanand Hiremath

ಒತ್ತುವರಿ ಜಾಗಕ್ಕೆ ಭೇಟಿ ನೀಡಿದ ಪೌರಾಯುಕ್ತ ಪ್ರಶಾಂತ

ವಿಜಯವಾಣಿ ಸುದ್ದಿಜಾಲ ಗದಗ
ನಗರಸಭೆ ಅಧ್ಯಕ್ಷರ ವಾರ್ಡ್​ನಲ್ಲೇ ಕೋಟ್ಯಂತರ ರೂ. ಮೌಲ್ಯದ ಮಾನ್ವಿ ಹಳ್ಳ ಒತ್ತುವರಿ ನಡೆದ ಕುರಿತು ವಿಜಯವಾಣಿ ಸರಣಿ ವರದಿ ಪ್ರಕಟಿಸುತ್ತಿದ್ದಂತೆ ಒತ್ತುವರಿ ತೆರವಿಗೆ ನಗರಸಭೆ ಮುಂದಾಗಿದೆ.
ಶುಕ್ರವಾರ ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಪೌರಾಯುಕ್ತ ಪ್ರಶಾಂತ ವರಗಪ್ಪನ್ನವರ, ಉಷಾ ದಾಸರ ಸ್ಥಳ ಪರಿಶೀಲನೆ ನಡೆಸಿದರು. ಮಾನ್ವಿ ಹಳ್ಳ ಒತ್ತುವರಿ ನಡೆಸಿ ನಿವೇಶನ ಸೃಷ್ಟಿಸಿರುವುದು ಪ್ರಾಥಮಿಕ ಹಂತದಲ್ಲಿ ಸ್ಪಷ್ಟವಾಗಿದ್ದು ಕಂಡು ಬಂದಿದೆ. ಸರ್ವೇ ನಂ 150ರ ಪಕ್ಕದಲ್ಲಿ ಹರಿದಿರುವ ಮಾನ್ವಿ ಹಳ್ಳದ ಜಮೀನನ್ನು ಬೂ ಕಬಳಿಕೆದಾರರು ಕಬಳಿಸಿ ಸ್ಥಳದಲ್ಲಿ ವಿದ್ಯುತ್​ ಕಂಬ, ನಿವೇಶನ ಕಂಬಗಳನ್ನು ಹಾಕಿದ್ದಾರೆ. ಅಕ್ರಮ ಸಂಕ್ರಮ ಲೇಔಟ್​ ನಿರ್ಮಾಣ ಮಾಡಿದ್ದಾರೆ ಎಂದು ಅಧಿಕಾರಿಗಳು ವಿಜಯವಾಣಿಗೆ ತಿಳಿಸಿವೆ. ಮಾನ್ವ ಹಳ್ಳು ಸಮೀೆ ನಡೆಸುವುದಾಗಿ ಮತ್ತು ಒತ್ತುವರಿ ನಡೆಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಪೌರಾಯುಕ್ತರು ತಿಳಿಸಿದ್ದಾರೆ.
ಏನಿದು ಪ್ರಕರಣ?
ನಗರ ವ್ಯಾಪ್ತಿಯಲ್ಲಿ ಸ್ಲಂ ಪಕ್ಕದ ಹಳ್ಳಕೊಳ್ಳದ ಜಮೀನನ್ನು ಅಕ್ರಮ ತಿರುವುಗೊಳಿಸಿ ಜಮೀನು ಕಬಳಿಸಿ ಅಕ್ರಮ ಸಕ್ರಮ ನಿವೇಶನ ಸೃಷ್ಟಿಸಿ ಮಾರಾಟ ಮಾಡುತ್ತಿರುವ ಪ್ರಕರಣ ಇದಾಗಿದೆ. ಪ್ರಭಾವಿಗಳ ಹಿಂಬಾಲಕರು, ಬಡ್ಡಿ ವ್ಯಾಪಾರಸ್ಥರು ಈ ಅಕ್ರಮದಲ್ಲಿ ಭಾಗಿ ಆಗಿದ್ದಾರೆ ಎಂಬ ಚರ್ಚೆ ಇದೆ. ನಗರಸಭೆ ಅಧ್ಯಕ್ಷರು ಪ್ರತಿನಿಧಿಸುವ ವಾರ್ಡ್​ ನಂ 35ರಲ್ಲಿ ಹರಿದಿರುವ ಮಾನ್ವಿ ಹಳ್ಳದ ಒತ್ತುವರಿ ಪ್ರಕರಣ ಇದಾಗಿದೆ. ಸರ್ವೆ ನಂ 150 ರ ಪಕ್ದ ಮಾನ್ವಿ ಹಳ್ಳ ಒತ್ತುವರಿ ನಡೆದಿದೆ. ನೂರಾರು ಮಿಟರ್​ ಅಗಲ ಹರಿಯುತ್ತಿದ್ದ ಮಾನ್ವಿ ಹಳ್ಳವನ್ನು ಮುಚ್ಚಲಾಗಿದ್ದು, ಅಂದಾಜು 7 ಎಕರೆಗೂ ಅಧಿಕ ಜಮೀನನ್ನು ಭೂಕಬಳಿಕೆದಾರರು ನುಂಗಿದ್ದಾರೆ. ಹೀಗಾಗಿ ಮಾನ್ವಿ ಹಳ್ಳ ಹರಿಯುವ ದಿಕ್ಕನ್ನೆ ಬದಲಿಸಿದ ಕಾರಣ ಅಕ್ಕಪಕ್ಕದ ಲೇಔಟ್​ಗಳಿಗೆ, ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಕೋಟ್​:
ತಾಲೂಕಿನ ಕಳಸಾಪುರ ಗ್ರಾಮದ ವ್ಯಾಪ್ತಿಯಲ್​ಇ ಮಾನ್ವಿ ಹಳ್ಳ ಬರುತ್ತದೆ. ಆದರೆ, ಅಲ್ಲಿನ ಮತದಾರರು ನಗರಸಭೆ ವ್ಯಾಪ್ತಿಗೆ ಒಳಪಡುತ್ತಾರೆ. ಹೀಗಾಗಿ ಜಂಟಿ ಸಮೀೆ ನಡೆಸಿ ಒತ್ತುವರಿ ತೆರವು ಗೊಳಿಸಲು ಉದ್ದೇಶಿಸಲಾಗಿದೆ.
-ಪ್ರಶಾಂತ ವರಗಪ್ಪನ್ನವರ, ನಗರಸಭೆ ಆಯುಕ್ತರು, ಪ್ರಭಾರಿ

ಕೋಟ್​:
ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿದೆ. ಸಾರ್ವಜನಿಕರ ಆಸ್ತಿಯನ್ನು ಸಾರ್ವಜನಿಕರಿಗಾಗಿ ಉಳಿಸಿಕೊಳ್ಳಲು ನಗರಸಭೆ ಸಿದ್ಧವಿದೆ. ಆದಷ್ಟು ಬೇಗ ಒತ್ತುವರಿ ತೆರವುಗೊಳಿಸಿ ಸುಪಧಿರ್ಗೆ ಪಡೆಯಲಾಗುವುದು.
ಉಷಾ ದಾಸರ, ಅಧ್ಯಕ್ಷರು, ನಗರಸಭೆ