ಜಿಲ್ಲೆ

ಅಂಗೈಯಲ್ಲೆ ನರೇಗಾ ಕ್ರಿಯಾ ಯೋಜನೆ : ಗದಗ ಜಿಲ್ಲಾ ಪಂಚಾಯತಿ.

Gadag - Shivanand Hiremath

ಗದಗ:ಜಿಲ್ಲಾ ಪಂಚಾಯತ, ತೋಟಗಾರಿಕೆ ಇಲಾಖೆ, ಹುಲಕೋಟಿ ಗ್ರಾಮ ಪಂಚಾಯತಿ, ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಗೊಡಂಬಿ ಬೆಳೆಗಾರರ ಸಂಘ, ಹುಲಕೋಟಿ ರೈತ ಉತ್ಪಾದಕರ ಕಂಪನಿ ಇವುಗಳ ಆಶ್ರಯದಲ್ಲಿ ರುರ್ಬನ ಅಡಿಯಲ್ಲಿ ಹುಲಕೋಟೊಯಲ್ಲಿ ನಿರ್ಮಿಸಲಾದ ಗೊಡಂಬಿ ಸಂಸ್ಕರಣೆ ಘಟಕವನ್ನು  ಉದ್ಘಾಟಿಸಿ ಮತ್ತು ನರೇಗಾ ಯೋಜನೆಯ ಸಮಗ್ರ ಮಾಹಿತಿ ಹೊಂದಿರುವ  QR ಕೊರ್ಡನ್ನು  ರವಿವಾರ ಬಿಡುಗಡೆಗೊಳಿಸಿದರು.

ಗದಗ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಮಗ್ರ ಮಾಹಿತಿ ಒದಗಿಸುವ ಉದ್ದೇಶದಿಂದ 2024-25 ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಎಲ್ಲಾ ಸಾರ್ವಜನಿಕರು ತಮ್ಮ ತಮ್ಮ ವ್ಯಾಪ್ತಿಯ ಗ್ರಾಮದ ವಾರ್ಡ  ಸಭೆ ಹಾಗೂ ಗ್ರಾಮ ಸಭೆಗಳಲ್ಲಿ ಸೆರ್ಪಡೆಯಾದ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ತಿಳಿಯಲು ಅನುಕೂಲವಾಗಲೆಂದು ಅನುಮೋದಿಸಿದ ಕಾಮಗಾರಿಗಳ ಪಟ್ಟಿಯನ್ನು ಮೋಬೈಲ್‌ನಿಂದ QR ಕೋಡ್ ಸ್ಕ್ಯಾನ್  ಮಾಡುವ ಮೂಲಕ ಪಡೆಯಲು ಅವಕಾಶ ಕಲ್ಪಿಸಿ ದಾಖಲೆಗಳ ನಿರ್ವಹಣೆ ಸರಳೀಕರಣ ವಾಗಿಸಲು ಹಾಗೂ ಯೋಜನೆಯ ಪಾರದರ್ಶಕತೆ ಹೆಚ್ಚಿಸಿ ಸಾರ್ವಜನಿಕ ಸ್ನೇಹಿ ಜಿಲ್ಲಾ ಪಂಚಾಯತಿಯಾಗಿದೆ.

ಮುಂದುವರೆದು, ಪ್ರಸಕ್ತ 2024-25 ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತಿಯ ನಿರ್ದೇಶನದಂತೆ ಗ್ರಾಮ ಪಂಚಾಯತಿಯಿಂದ ಸಿದ್ಧಪಡಿಸಿ ಸಲ್ಲಿಸಿದ್ದ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಒಟ್ಟು 30198 ಕಾಮಗಾರಿಗಳಿಗೆ  486.07 ಕೋಟಿಗಳ ಅಂದಾಜು  ಮೊತ್ತಕ್ಕೆ  ಅನುಮೋದಿಸಲಾಗಿದ್ದು ಜಿಲ್ಲಾ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಸಂಬಂಧಿಸಿದ ಗ್ರಾಮ ಪಂಚಾಯತಿಯ ಅನುಮೋದನೆ ನೀಡಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಮಾಹಿತಿಯನ್ನು ಈ QR ಕೋಡ್  ಸ್ಕ್ಯಾನ್   ಮಾಡುವ ಮೂಲಕ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭರತ್ ಎಸ್ ಅವರು ತಿಳಿಸಿದ್ದಾರೆ.