ಲಕ್ಷ್ಮೇಶ್ವರ:ದೀಪಾವಳಿ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಕೊಟ್ಯಾಂತರ ಹಿಂದೂಗಳ ಆರಾದ್ಯ ದೇವತೆಗಳಾದ ಶ್ರೀಲಕ್ಷ್ಮಿ, ಶ್ರೀಕೃಷ್ಣ, ಶ್ರೀವಿಷ್ಣು, ಅಯ್ಯಪ್ಪಸ್ವಾಮಿ, ಶ್ರೀ ವೆಂಕಟೇಶ್ವರ ಇತ್ಯಾದಿ ಹಿಂದೂ ದೇವರುಗಳ ಚಿತ್ರ ಮತ್ತು ನೇತಾಜಿ ಸುಭಾಷಚಂದ್ರ ಬೋಸ್, ಲೋಕಮಾನ್ಯ ತಿಲಕ ಮುಂತಾದ ರಾಷ್ಟ್ರಪುರುಷರ ಚಿತ್ರಗಳಿರುವ ಪಟಾಕಿಯನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿದ್ದಾರೆ. ಇಂತಹ ಪಟಾಕಿಗಳನ್ನು ಸಿಡಿಸಿದ ನಂತರ ಪ್ಯಾಕೆಟಗಳ ಮೇಲಿನ ದೇವರುಗಳ ಹಾಗೂ ರಾಷ್ಟ್ರಪುರುಷರ ಚಿತ್ರವು ಛಿದ್ರವಾಗಿ ರಸ್ತೆಯ ತುಂಬಾ ಹರಡುತ್ತದೆ. ಜನರು ಕಾಲಿನಡಿಯಲ್ಲಿ ತುಳಿಯುವುದು, ವಾಹನದ ಅಡಿಯಲ್ಲಿ ಅಥವಾ ಕಸದ ಬುಟ್ಟಿ ಹಾಗೂ ಚರಂಡಿಯಲ್ಲಿ ಬೀಳುವುದು ಕಾಣುತ್ತದೆ. ಇದು ಹಿಂದೂ ದೇವರುಗಳ ಅಪಮಾನವಾಗಿದ್ದು ಮತ್ತು ರಾಷ್ಟ್ರಪುರುಷರ ಅಗೌರವವಾಗುತ್ತದೆ. ಇದು ಭಾರತೀಯ ದಂಡ ಸಂಹಿತೆ 295 ಗನುಸಾರ 'ಧಾರ್ಮಿಕ ಭಾವನೆಗೆ ಘಾಸಿ ಗೊಳಿಸುವುದು' ಎಂಬ ಗಂಭೀರವಾದ ಅಪರಾಧವೇ ಆಗಿದೆ. ಈಗಾಗಲೇ ಹಲವು ರಾಜ್ಯಗಳು, ಉದಾಹರಣೆಗೆ ಮಹಾರಾಷ್ಟ್ರದ ವಾಣಿಜ್ಯ ಮಂಡಳಿ ಪಟಾಕಿಯಲ್ಲಿ ದೇವರ ಚಿತ್ರ ಮುದ್ರಿಸುವುದನ್ನು ನಿಷೇಧಿಸಿದೆ. ಹಾಗಾಗಿ ತಾವು ಸಹ ಇಂತಹ ಪಟಾಕಿಗಳ ಮೇಲೆ ನಿಷೇಧವನ್ನು ಹಾಕಬೇಕು ಮತ್ತು ಅದಕ್ಕೆ ಸಂಬಂದಿಸಿದವರಿಗೆ ಸೂಚನೆಯನ್ನು ನೀಡಬೇಕೆಂದು ಲಕ್ಷ್ಮೇಶ್ವರದಲ್ಲಿ ಹಿಂದುಜನಜಾಗೃತಿ ಸಮಿತಿ ಹಾಗೂ ಇತರ ಹಿಂದೂ ಸಂಘಟನೆಗಳ ವತಿಯಿಂದ ಮಾನ್ಯ ತಹಶೀಲ್ದಾರವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು..
ಈ ಸಂದರ್ಭದಲ್ಲಿ ಧರ್ಮಪ್ರೇಮಿಗಳಾದ ಶ್ರೀ. ಈರಣ್ಣ ಪೂಜಾರ,ಯಲ್ಲಪ್ಪಗೌಡ ಪಾಟೀಲ,ದುಂಡಪ್ಪ ಸವಣೂರು,ಬಸವರಾಜ ಆಲೂರು,ಕಿರಣ ಗಾಣಗೇರ, M N ಬಾಡಗಿ,ಅಮಿತ ಗುಡಗೇರಿ, ಸೋಮು ನರೇಗಲ್, ಬಾಳಪ್ಪ ಗೋಸಾವಿ,ನಿಖಿಲ ಗೊಸಾವಿ,ನಾಗರಾಜ ಸೂರಣಗಿ,ರಾಜು ಗೋಸಾವಿ,ಗಣೇಶ ಗೋಸಾವಿ, ಪ್ರಮೋದ ಹೊನ್ನಪ್ಪನವರ ಸಮಿತಿಯ ಸುಮಂಗಲಾ ಕುಂಬಾರ, ಲಕ್ಷ್ಮೀ ಮತ್ತು ಇತರರು ಉಪಸ್ಥಿತರಿದ್ದರು.