ಗದಗ : ಕರ್ನಾಟಕ ಸರಕಾರದ ಅಪೇಕ್ಷೆ ಮೇರೆಗೆ ರಾಜ್ಯ ಹಿಂದುಳಿದ ಆಯೋಗವು ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಕುರಿತಾಗಿ ಸಮೀಕ್ಷೆ ಕಾರ್ಯ ಕೈಗೆತ್ತಿಕೊಂಡಿದ್ದು ಶ್ಲಾಘನೀಯ. ಆದರೆ, ಹಿಂದು ಸಮಾಜದ ಜಾತಿಗಳೊಂದಿಗೆ ಅಂಟಿಸಲಾದ ಕ್ರಿಶ್ಚಿಯನ್ ಹಣೆಪಟ್ಟಿಯನ್ನು ಕೈಬಿಡಬೇಕೆಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಕ್ಕೆ ಹಾಲುಮತ ಮಹಾಸಭಾದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ ಅವರು ಮಾತನಾಡಿ, ಜಾತಿ ಸಮೀಕ್ಷೆಗಳು ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ವಾಸ್ತವಿಕತೆಗೆ ಹತ್ತಿರವಾದ ನೀತಿಗಳನ್ನು ನಿರೂಪಿಸುವುದಕ್ಕೆ ಅಗತ್ಯವಾದ ಮಾಹಿತಿ ಹಾಗು ಅಂಕಿ ಸಂಖ್ಯೆಗಳನ್ನು ಒದಗಿಸುವ ಮೂಲಕ ಭವಿಷ್ಯದ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಾಯಕವಾಗುತ್ತವೆ. ಆದರೆ ಆಯೋಗವು ಹಿಂದು ಸಮಾಜದ ಬಹುತೇಕ ಜಾತಿಗಳ ವರ್ಗದಲ್ಲಿ ಕ್ರಿಶ್ಚಿಯನ್+ಜಾತಿ ಎಂಬುದು ಉಲ್ಲೇಖವಾಗಿರುವುದು ನಿಜಕ್ಕೂ ಆಘಾತಾಕಾರಿ ಅಂಶವಾಗಿದೆ. ಉದಾಹರಣೆಗೆ ಕುರುಬ-ಕ್ರಿಶ್ಚಿಯನ್, ಬಿಲ್ಲವ-ಕ್ರಿಶ್ಚಿಯನ್, ಬ್ರಾಹ್ಮಣ-ಕ್ರಿಶ್ಚಿಯನ್ ಹೀಗೆ ಹಿಂದೂ ಧರ್ಮದವರನ್ನು ಗುರಿಯಾಗಿಸಿಕೊಂಡಿರುವುದು ಸರಿಯಲ್ಲ ಮತ್ತು ಮೂಲ ಕ್ರಿಶ್ಚಿಯನ್ ಪಂಗಡಗಳಾದ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್, ಇತ್ಯಾದಿಗಳ ವಿಂಗಡಣೆ ಮಾಡದೇ ಅವುಗಳನ್ನು ಏಕಸ್ವರೂಪದಲ್ಲಿ ನೋಡಲಾಗಿದೆ. ಆಯೋಗದ ಈ ಪಟ್ಟಿ ಜನರಲ್ಲಿ ಅದರಲ್ಲೂ ವಿಶೇಷವಾಗಿ ಹಿಂದುಳಿದ ವರ್ಗಗಳಲ್ಲಿ ಸಂಶಯಕ್ಕೆ ಹಾಗೂ ಆತಂಕಕ್ಕೆ ಕಾರಣಾವಾಗಿದೆ. ಬೇರೆ ಮತಗಳಿಗೆ ಮತಾಂತರಗೊAಡವರಿಗೆ ಮೀಸಲಾತಿ ಹಕ್ಕು ಇರುವುದಿಲ್ಲಾ. ಆದರೆ, ಮತಾಂತರಗೊAಡ ನಂತರವೂ ತಮ್ಮ ಮೂಲ ಜಾತಿಯ ಜೊತೆಗೆ ಕ್ರೆöÊಸ್ತ ಎಂಬ ಪದ ಸೇರಿಸುವ ಮೂಲಕ ನಮ್ಮ ವರ್ಗದ ಮೀಸಲಾತಿಯನ್ನು ಕಬಳಿಸುವ, ಪಾಲು ಪಡೆಯುವ ಹುನ್ನಾರ ನಡೆದಿದೆಯೋ ಎಂಬ ಸತ್ಯ ತಿಳಿಯಬೇಕಿದೆ.
ಈಗಾಗಲೇ ಈ ಕುರಿತಾಗಿ ಎಲ್ಲ ಸಮುದಾಯಗಳು ಈ ಹಿಂದು ಸಮಾಜದ ಜಾತಿಗಳ ಪಟ್ಟಿಗೆ ಕ್ರೆöÊಸ್ತ ಎಂಬ ಹಣೆಪಟ್ಟಿ ಹಚ್ಚುವುದರ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿವೆ. ಆದರೂ ಕೂಡ ಆಯೋಗ ಈವರೆಗೂ ಈ ವಿಷಯವಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ನಾವು ಈ ಬಗ್ಗೆ ಆಯೋಗಕ್ಕೆ ಶೀಘ್ರಾತಿಶೀಘ್ರ ತನ್ನ ನಿಲುವನ್ನು ಸಾರ್ವಜನಿಕಗೊಳಿಸಬೇಕು ಹಾಗೇ ಹಿಂದು ಸಮಾಜದ ಜಾತಿಗಳೊಂದಿಗೆ ಅಂಟಿಸಲಾದ ಕ್ರೆöÊಸ್ತ ಹಣೆಪಟ್ಟಿಯನ್ನು ಕೈಬಿಡಬೇಕೆಂದು ಒತ್ತಾಯಿಸುತ್ತೆವೆ. ನಮ್ಮ ಸಮಾಜ ಹಾಗೂ ಸಂಪೂರ್ಣ ಹಿಂದು ಸಮಾಜದ ಹಿತಾಸಕ್ತಿಯ ರಕ್ಷಣೆಗಾಗಿ ನಾವೇಲ್ಲರೂ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಆಹಾರ ನಿಗಮದ ರಾಜ್ಯ ನಿರ್ದೇಶಕ ರವಿ ದಂಡಿನ, ಉಡಚಪ್ಪ ಹಳ್ಳಿಕೇರಿ, ರವಿಕಾಂತ ಅಂಗಡಿ
ಹಾಲುಮತ ಮಹಾಸಭಾದ ಗೌರಾವಧ್ಯಕ್ಷ ನಾಗರಾಜ ಮೆಣಸಗಿ, ಉಪಾಧ್ಯಕ್ಷ ಸೋಮನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಮುತ್ತು ಜಡಿ, ಪದಾಧಿಕಾರಿಗಳಾದ ಉಮೇಶ ಪೂಜಾರ, ಸತೀಶ ಗಿಡ್ಡಹನುಮಣ್ಣವರ, ಮಂಜು ಜಡಿ, ರವಿ ವಗ್ಗನವರ, ರಮೇಶ ಸಜ್ಜಗಾರ, ರಮೇಶ ಹೊನ್ನಿನಾಯ್ಕರ, ಹೇಮಂತ ಗಿಡ್ಡಹನುಮಣ್ಣವರ, ಅಚ್ಚು ಹೊನ್ನಿನಾಯ್ಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.