ವಿಜಯವಾಣಿ ಸುದ್ದಿಜಾಲ ಗದಗ
ಪ್ರಜಾಪ್ರಭುತ್ವ ಬಲಗೊಳ್ಳಲು ಸಹೋದರತ್ವ ಅಗತ್ಯ. ಎಲ್ಲರಿಗೂ ಸಾಮಾಜಿಕ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮ ಶ್ರದ್ಧೆ, ಉಪಾಸನಾ ಸ್ವಾತಂತ್ರ್ಯ ಮತ್ತು ಸಮಾನ ಸ್ಥಾನಮಾನ ಹಾಗೂ ಅವಕಾಶಕ್ಕಾಗಿ ಪ್ರಜಾಭುತ್ವ ಅಡಿಪಾಯ ಎಂದು ಎಚ್.ಕೆ. ಪಾಟೀಲ ಹೇಳಿದರು.
ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಬೃಹತ್ ಮಾನವ ಸರಪಳಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ದುರ್ಬಲಗೊಳಿಸಿ, ಪ್ರಜಾಪ್ರಭುತ್ವ ಹತ್ಯೆ ನಡೆಸುವ ಪ್ರಯತ್ನಗಳು ಹಿಂದಿನಿಂದಲೂ ನಡೆದಿವೆ. ಅಂತಹ ಮನಸ್ಸುಗಳನ್ನು ಸಮಾಜದಿಂದ ಹೊದೆದೋಡಿಸಬೇಕು. ಪರಸ್ಪರ ವಿಶ್ವಾಸ, ನಂಬಿಕೆ ಇದ್ದರೆ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಇಲ್ಲವಾದರೆ ಪ್ರಜಾಪ್ರಭುತ್ವ ಆಶಯ ಸಾಕಾರಗೊಳ್ಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಗಟ್ಟಿಗೊಳಿಸುತ್ತೇನೆ. ಭಾತೃತ್ವ ಮನೋಭಾವದಿಂದ ಮತ್ತೊಬ್ಬರನ್ನು ಕಾಣುತ್ತೇನೆ ಎಂಬ ಸಂಕಲ್ಪದಿಂದ ಮುನ್ನಡೆಯಬೇಕು ಎಂದರು.
ಮಾನವ ಸರಪಳಿ ಮೂಲಕ ಪ್ರಜಾಪ್ರಭುತ್ವ ಜಾಗೃತಿ ಮಾಡುವ ನೀವು ರಾಷ್ಟ್ರದ ಸೇವೆ ಮಾಡಿದ್ದೀರಿ. ರಾಜ್ಯದಲ್ಲಿ ಅತೀ ಹೆಚ್ಚು ಮಾನವ ಸರಪಳಿ ನೋಂದಣಿ ಮಾಡುವ ಮೂಲಕ ಮೊದಲನೇ ಸ್ಥಾನದಲ್ಲಿ ಗದಗ ಜಿಲ್ಲೆ ಇದೆ ಎಂಬುದು ಗಮನಾರ್ಹ ಎಂದು ಸಚಿವರು ಹೇಳಿದರು.
ನಮ್ಮದೇ ಪ್ರಜಾಪ್ರಭುತ್ವ: ಭಾರತದೊಂದಿಗೆ ಸ್ವತಂತ್ರಗೊಂಡ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದಲ್ಲಿ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಚೀನಾ ನಮ್ಮ ಮೇಲೇ ಎಷ್ಟೇ ವಿಸ್ತರಣಾ ಪ್ರಭಾವ ಬೀರಿದರೂ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ಬಾರದಂತೆ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ನಾವು ಸಫಲರಾಗಿದ್ದೇವೆ. ವಿವಿಧ ಭಾಷೆ, ಸಂಪ್ರದಾಯ, ಸಮುದಾಯಗಳಿದ್ದರೂ ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇವೆ ಎಂದು ಎಚ್.ಕೆ. ಪಾಟೀಲ ಹೇಳಿದರು.
ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಶೇ. 75 ಮಕ್ಕಳೇ ಭಾಗವಹಿಸಿದ್ದಾರೆ. ಪ್ರಜಾಪ್ರಭುತ್ವದ ಜಾಗೃತಿ ಆಗುತ್ತಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದರು.
ರಾಜ್ಯದಲ್ಲಿ ಆಯಕಟ್ಟಿನ ಸ್ಥಾನ ಅಲಂಕರಿಸಿದವರಿಂದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ. ಅವರೆಲ್ಲರಲ್ಲೂ ದುರ್ಬಲಗೊಳ್ಳುವಂತೆ ಕಾರ್ಯಕ್ರಮ ನಡೆಸಲಾಗಿದೆ. ಪ್ರಜಾಪ್ರಭುತ್ವ ಅಡಿಯಲ್ಲಿ ಈಡಿ ಇದೇ ದೇಶದ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಇತರರು ಇದ್ದರು.
ಒಂದೇ ಮಾತರಂ: ಒಂದೇ ಮಾತರಂ, ಜೈ ಭಾರತ ಮಾತೆ ಎನ್ನವ ಸಂದರ್ಭದಲ್ಲಿ ದೇಶಕ್ಕಾಗಿ ಮನಸ್ಸು ಸಂಚಲನಗೊಳ್ಳುತ್ತದೆ. ದೇಶ ಭಕ್ತಿ ಇಮ್ಮಡಿಗೊಳ್ಳುವುದು. ಅದೇ ರೀತಿ ಪ್ರಜಾಪ್ರಭುತ್ವ ಆಶಯ ಸಾಕಾರಗೊಳ್ಳಲು, ಮನಸ್ಸು ಮಿಡಿಯಲು, ಸಮಾನತೆಗಾಗಿ ಪ್ರಜಾಪ್ರಭುತ್ವ ಅರಿತುಕೊಳ್ಳಬೇಕು ಎಂದು ಹೇಳಿದರು.
ಕೋಟ್:
ಕಾರ್ಯಕ್ರಮ ಯಶಸ್ಸಿಗೆ ಸಹಕಾರ ನೀಡಿದ ಎಲ್ಲ ಅತಿಥಿಗಳಿಗೆ, ದೇಶಾಭಿಮಾನಿ, ಮಕ್ಕಳಿಗೆ ಧನ್ಯವಾದಗಳು. ಪ್ರಜಾಪ್ರಭುತ್ವದಿಂದಲೇ ಸಮಾನತೆ ಸಾಧ್ಯ. ಸಮಾನತೆ, ತಮ್ಮ ಹಕ್ಕಿಗಾಗಿ ಪ್ರಜಾಪ್ರಭುತ್ವ ದಂತೆ ನಡೆದುಕೊಳ್ಳಬೇಕು
- ಜಿ.ಎಸ್. ಪಾಟೀಲ, ಶಾಸಕರು