filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:8; brp_del_th:0.0001,0.0000; brp_del_sen:0.1000,0.0000; motionR: 0; delta:null; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 106.82596;aec_lux_index: 0;albedo: ;confidence: ;motionLevel: 0;weatherinfo: null;temperature: 48; 
ಜಿಲ್ಲೆ

ಉತ್ತಮ ಬರವಣಿಗೆ ವ್ಯಕ್ತಿತ್ವವನ್ನು ರೂಪಿಸುತ್ತದೆ : ಮಲ್ಲಾಡದ

ವಿಜಯವಾಣಿ ಸುದ್ದಿಜಾಲ ಗದಗ

ಸ್ಪಷ್ಟ ಓದು ಮತ್ತು ಶುದ್ಧ ಬರಹದಿಂದ ವಿದ್ಯಾಥಿರ್ಗಳ ಜ್ಞಾನದ ಹರಿವು ವೃದ್ಧಿಸುತ್ತದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಓದುವ ಹಾಗೂ ಬರೆಯುವ ಕೌಶಲ್ಯವನ್ನು ಪ್ರೋತ್ಸಾಹಿಸಲು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಪ್ರೋತ್ಸಾಹದಾಯಕವಾಗಿ ಬರವಣಿಗೆಯ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಮಕ್ಕಳು ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಲಯನ್ಸ್​ ಕ್ಲಬ್​ನ ಕಾರ್ಯದಶಿರ್ ರಾಜಣ್ಣ ಮಲ್ಲಾಡದ ಹೇಳಿದರು.

ನಂದೀಶ್ವರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್​ ಕ್ಲಬ್​ದಿಂದ ಶನಿವಾರ ಏರ್ಪಡಿಸಿದ್ದ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಬರವಣಿಗೆಯು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಓದುವ ಹವ್ಯಾಸ ನಮ್ಮ ಜ್ಞಾನದ ವಿಕಾಸವನ್ನು ಸುಗಮಗೊಳಿಸುತ್ತದೆ. ಮಕ್ಕಳು ಓದು ಬರಹದಲ್ಲಿ ಪರಿಣಿತರಾಗಿ ಯಶಸ್ಸು ಸಾಧಿಸಬೇಕು ಎಂದರು.

ಪ್ರಾಯೋಕತ್ವ ವಹಿಸಿಕೊಂಡಿದ್ದ ಕ್ಲಬ್​ನ ಖಜಾಂಚಿ ರೇಣುಕಪ್ರಸಾದ ಹಿರೇಮಠ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಸಿಹಿ ವಿತರಿಸಿ ಮಾತನಾಡಿ ಪ್ರತಿಭಾನ್ವಿತ ಸಾಧಕರು ಸರ್ಕಾರಿ ಶಾಲೆಗಳಲ್ಲಿಯೇ ಓದಿದವರಾಗಿದ್ದಾರೆ. ಸರ್ಕಾರ ನೀಡುವ ಉಚಿತ ಸೌಲಭ್ಯಗಳೊಂದಿಗೆ ಸಂ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಪ್ರೋತ್ಸಾಹ ನೀಡಬೇಕು ಎಂದರು.

ಕ್ಲಬ್​ನ ಅಧ್ಯ ರಾಜು ವೇರ್ಣೇಕರ ಮಾತನಾಡಿ ಮಕ್ಕಳು ಬಾಲ್ಯದಲ್ಲಿಯೇ ಉತ್ತಮ ಹವ್ಯಾಸ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿದಿನ ಶಾಲೆಗೆ ಬರುವುದು, ಉತ್ತಮ ಓದು ಬರಹ ರೂಡಿಸಿಕೊಳ್ಳುವುದು ಒಳ್ಳೆಯ ಹವ್ಯಾಸಗಳು. ನಿರಂತರ ಓದಿನಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು, ಮಕ್ಕಳು ಸಾಧಕರನ್ನು ಮಾದರಿಯಾಗಿ ಇಟ್ಟುಕೊಂಡು ಆದರ್ಶಮಯವಾದ ಬದುಕು ರೂಪಿಸಿಕೊಳ್ಳಬೇಕು ಎಂದರು.

ಅಧ್ಯತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಎನ್​. ಎನ್​. ತಹಶೀಲ್ದಾರ್​ ಮಾತನಾಡಿ ಸಂ ಸಂಸ್ಥೆಗಳು ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳ ಜ್ಞಾನಾರ್ಜನೆಗೆ ಸಹಾಯ ನೀಡುತ್ತಿರುವುದಕ್ಕೆ ಅಭಿನಂದಿಸಿದರು. ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಜ್ಞಾನದ ಅರಿವನ್ನು ಮೂಡಿಸಿ ಅವರನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಗಾಳೆಮ್ಮ ಕುರ್ತಕೋಟಿ, ಭೂಮಿಕಾ ಶಿರಹಟ್ಟಿ, ರಮೇಶ ಶಿಗ್ಲಿ, ಸುನಂದಾ ಇದ್ಲಿ, ಕೆ. ಎಸ್​. ಬೇಲೇರಿ, ಸಹನಾ ಹಿರೇಮಠ, ನಿತೀಶ ಸಾಲಿ, ವೀರಣ್ಣ ಪಟ್ಟಣಶೆಟ್ಟಿ, ರಾಹುಲ ಅರಳಿ, ಶಾಂತ ಕುಂಬಾರ, ಸುರೇಖಾ ಮಲ್ಲಾಡದ, ಸಾವಿತ್ರಿ ಶಿಗ್ಲಿ, ಅಮೃತಾ ವಾರ್ಕರ, ಪೂಜಾ ಅರಳಿ ಇತರರು ಇದ್ದರು.