ಲಕ್ಷೆ್ಮೕಶ್ವರ: ಅಯೋಧ್ಯೆಯ ಶ್ರೀರಾಮನ ಸುಂದರ ಮೂರ್ತಿ ತಯಾರಿಸಿದ ಮೈಸೂರಿನ ಖ್ಯಾತ ಶಿಲ್ಪಿ ಅರುಣ ಯೋಗಿರಾಜ್ ಅವರಿಂದ ಮುಕ್ತಿಮಂದಿರ ಧರ್ಮಕ್ಷೇತ್ರದ ರಂಭಾಪುರಿ ಲಿಂಗೈಕ್ಯ ಜಗದ್ಗುರು ವೀರಗಂಗಾಧರ ಭಗವತ್ಪಾದರ ಪ್ರತಿಮೆ ನಿರ್ಮಾಣ ಆಗಲಿರುವುದು ಭಕ್ತರಲ್ಲಿ ಸಂಚಲನ ಮೂಡಿಸಿದೆ. ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿಯನ್ನು ಅದ್ಭುತವಾಗಿ ಕೆತ್ತನೆ ಮಾಡಿ ಮೂರ್ತಿಗೆ ಜೀವಕಳೆ ತುಂಬಿದ್ದ ಅರುಣ ಯೋಗಿರಾಜ್ ಅವರಿಂದ ಲಿಂ. ಜಗದ್ಗುರುಗಳ ಮೂರ್ತಿ ಸಿದ್ಧವಾಗಲಿದೆ. ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗಗಳ ಸ್ಥಾಪನೆ ಕಾರ್ಯ ಭರದಿಂದ ಸಾಗಿದೆ. ಈ ಶಿವಲಿಂಗಗಳ ನಡುವೆ ರಂಭಾಪುರಿ ಲಿಂ.ಜ. ಶ್ರೀ ವೀರಗಂಗಾಧರ ಭಗವತ್ಪಾದರ 25 ಅಡಿ ಎತ್ತರದ ಬೃಹತ್ ಪ್ರತಿಮೆ ನಿರ್ಮಾಣ ಮಾಡುವ ಯೋಜನೆ ಹೊಂದಲಾಗಿದೆ. ಈ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ ಯೋಗಿರಾಜ್ ಅವರಿಂದಲೇ ಕೆತ್ತನೆ ಮಾಡಿಸಬೇಕೆಂದು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ನಿರ್ಧರಿಸಿದ್ದು, ಯೋಗಿ ಅವರನ್ನು ಸಂರ್ಪಸಿ ಒಪ್ಪಿಗೆ ಪಡೆದುಕೊಂಡಿದ್ದಾರೆ. ಅರುಣ ಅವರ ಕೈಚಳಕದಿಂದ ನಿರ್ವಣವಾಗುವ ಶ್ರೀ ವೀರಗಂಗಾಧರ ಜಗದ್ಗುರುಗಳ ಮೂರ್ತಿ ಮುಕ್ತಿಮಂದಿರದ ತ್ರಿಕೋಟಿ ಲಿಂಗಗಳ ಮಧ್ಯೆ ಕೇಂದ್ರ ಬಿಂದುವಾಗಲಿದೆ. ಶುಕ್ರವಾರವಷ್ಟೇ ಅರುಣ ಯೋಗಿರಾಜ್ ಅವರು ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಆಗಮಿಸಿ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಚರ್ಚೆ ನಡೆಸಿದರು. ನಂತರ ತ್ರಿಕೋಟಿ ಲಿಂಗ ಸ್ಥಾಪನೆಯ ಸ್ಥಳ, ನೀಲಿ ನಕ್ಷೆ ವೀಕ್ಷಿಸಿ ಲಿಂ.ಜಗದ್ಗುರುಗಳ ಮೂರ್ತಿ ಸ್ಥಾಪನೆ ಜಾಗ ಪರಿಶೀಲಿಸಿ ಮೂರ್ತಿಯ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಅರುಣ ಯೋಗಿಯವರು ಮೂರ್ತಿ ನಿರ್ವಿುಸಲು ಒಪ್ಪಿಕೊಂಡಿರುವುದು ಕಾಕತಾಳೀಯವೆಂಬಂತೆ ಶಿಲ್ಪಿ ಅರುಣ ಅವರ ತಾತ ಬಸವಣ್ಣಾಚಾರ್ಯ ಅವರು ಸುಮಾರು 60-65 ವರ್ಷಗಳ ಹಿಂದೆ ಮುಕ್ತಿಮಂದಿರ ಕ್ಷೇತ್ರದಲ್ಲಿ ವಿಶ್ವಶಕ್ತಿ, ಸರ್ವಧರ್ಮಗಳ ವಿಶ್ವ ಮತಾಚಾರ್ಯರು, ಪಾರ್ವತಿ ಪರಮೇಶ್ವರ ಹಾಗೂ ಲಿಂ. ಜ. ವೀರಗಂಗಾಧರ ಶ್ರೀಗಳು, ಈಶ್ವರಲಿಂಗವನ್ನು ತಲೆ ಮೇಲೆ ಹೊತ್ತಿರುವ ಮೂರ್ತಿಗಳನ್ನು ಕೆತ್ತನೆ ಮಾಡಿರುವುವುದು ಗಮನಾರ್ಹ. ಇದೀಗ ಅವರ ಮೊಮ್ಮಗ ಅರುಣ ಯೋಗಿರಾಜ್ ಅವರಿಂದ ದೊಡ್ಡ ಪ್ರಮಾಣದ ಕಾರ್ಯ ನಡೆಯಲಿದೆ. ಅರುಣ ಯೋಗಿರಾಜ್ ಅವರಿಂದ ಲಿಂ. ಜಗದ್ಗುರುಗಳ ಮೂರ್ತಿ ನಿರ್ವಣವಾಲಿರುವುದು ವಿಶೇಷವಾಗಿದೆ. ಈ ಪ್ರತಿಮೆ ಸ್ಥಾಪನೆಯು ಧರ್ಮ, ಪರಂಪರೆ ಮತ್ತು ಭಕ್ತಿಯ ಪ್ರತಿರೂಪವಾಗಿ ತಲೆಮಾರುಗಳಿಗೆ ಪ್ರೇರಣೆಯಾಗಲಿದೆ ಎಂದರು.
ನಮ್ಮ ತಾತ ರಂಭಾಪುರಿ ಜಗದ್ಗುರುಗಳ ಪರಮ ಭಕ್ತರಾಗಿದ್ದರು. ಅವರು ಮುಕ್ತಿಮಂದಿರದಲ್ಲಿ ಈ ಹಿಂದೆ ಅನೇಕ ಮೂರ್ತಿಗಳನ್ನು ನಿರ್ವಿುಸಿರುವುದು ಈಗಲೂ ಸಾಕ್ಷೀಕರಿಸಬಹುದಾಗಿದೆ. ಇದೀಗ ಲಿಂ.ವೀರಗಂಗಾಧರ ಜಗದ್ಗುರುಗಳ ಮೂರ್ತಿ ನಿರ್ವಿುಸುವ ಸೌಭಾಗ್ಯ ನನಗೆ ದೊರೆತಿರುವುದು ಶ್ರೀಗಳ ಕೃಪೆಯಾಗಿದೆ. ಬೇಡಿಕೆಗೆ ತಕ್ಕಂತೆ ನಿಗದಿತ ವೇಳೆಯಲ್ಲಿ ಮೂರ್ತಿ ಸಿದ್ಧಪಡಿಸುವ ಗುರುತರ ಜವಾಬ್ದಾರಿಯನ್ನು ಭಕ್ತಿಯಿಂದ ಪ್ರಾಮಾಣಿಕವಾಗಿ ಮಾಡುತ್ತೇನೆ. | ಅರುಣ ಯೋಗಿರಾಜ್, ಅಯೋಧ್ಯೆ ರಾಮಲಲ್ಲಾ ಮೂರ್ತಿ ಸಿದ್ಧಪಡಿಸಿದ ಶಿಲ್ಪಿ