ಜಿಲ್ಲೆ

ಸರ್ಕಾರಿ ಅಧಿಕಾರಿಗಳಿಂದಲೇ ಖೋಟ್ಟಿ ದಾಖಲೆ ಸೃಷ್ಟಿ ಆರೋಪ? ಹತ್ತಾರು ಕೋಟಿ ಮೌಲ್ಯದ 56 ಏಕರೆ ಕೃಷಿ ಭೂಮಿ ಮಾರಾಟ

ಲೋಕಾಯುಕ್ತದಲ್ಲಿ FIR ದಾಖಲು

ವಿಜಯವಾಣಿ ಸುದ್ದಿಜಾಲ ಗದಗ

ಸರ್ಕಾರಿ ಅಧಿಕಾರಿಗಳಿಂದಲೇ ಖೋಟ್ಟಿ ದಾಖಲೆ ಸೃಷ್ಟಿಸಿ ಹತ್ತಾರು ಕೋಟಿ ಮೌಲ್ಯದ 56 ಏಕರೆ ಭೂಮಿಯನ್ನು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಕುರಿತು ಸರ್ಕಾರಿ ಅಧಿಕಾರಿಗಳು ಸೇರಿ 9 ಜನರ ಮೇಲೆ ಲೋಕಾಯುಕ್ತದಲ್ಲಿ FIR​ ದಾಖಲಾಗಿದೆ. ಗಂಭೀರ ಸ್ವರೂಪದ ಪಕ್ರರಣ ಆಗಿರುವ ಹಿನ್ನೆಲೆ ಲೋಕಾ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿತರು ಪ್ರಕರಣ ರದ್ದು ಕೋರಿ ಮತ್ತು ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ರದ್ದು ಮಾಡದಂತೆ ಕೋಟಿ ಹೈಕೋರ್ಟ್​ಗೆ ಪರಸ್ಪರ ಅಜಿರ್ ಸಲ್ಲಿಕೆ ಆಗಿವೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ:

ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ವಾರಸುದಾರರಿಲ್ಲದ 133(319) ಸರ್ವೇ ನಂಬರಿನ 15.30 ಏಕರೆ, 136(322) ಸರ್ವೇ ನಂಬರಿನ 27.24 ಏಕರೆ ಮತ್ತು 323/1 ಸರ್ವೇ ನಂಬರಿನ 13.20 ಏಕರೆ ಕೃಷಿ ಭೂಮಿಯನ್ನು ಈ ಹಿಂದಿನ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಕಚೇರಿಯ ವಿಷಯ ನಿರ್ವಾಹಕರು ಮತ್ತು ಖಾಸಗಿ ವ್ಯಕ್ತಿಗಳು ಸೇರಿ ಖೋಟ್ಟಿ ದಾಖಲೆ ಸೃಷ್ಟಿಸಿ ಇತರೆ ವ್ಯಕ್ತಿಗಳಿಗೆ ಮಾರಾಟ ಮಾಡಿದ ಪ್ರಕರಣ ಇದಾಗಿದೆ. ಮುಂಡರಗಿಯ ನಾಗರಾಜ ಹೊಸಮನಿ ಎಂಬುವರು ಲೋಕಾಯುಕ್ತಕ್ಕೆ ಪ್ರಕರಣ ಕುರಿತು ದೂರು ನೀಡಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಲೋಕಾ ಅಧಿಕಾರಿಗಳು ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ 7ಎ, 13(1)(ಎ), 13/2 ಮತ್ತು 418, 419, 420, 465, 468, 471 ಸಹ ಕಲಂ 120(ಬಿ) ಐಪಿಸಿ ಅಡಿಯಲ್ಲಿ ಎೈಆರ್​ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಪ್ರಕರಣಗಳೇನು?

ಕೋರ್ಲಹಳ್ಳಿ ಗ್ರಾಮದಲ್ಲಿ ಇರುವ 133(319) ಸರ್ವೇ ನಂಬರಿನ 15.30 ಏಕರೆ, 136(322) ಸರ್ವೇ ನಂಬರಿನ 27.24 ಏಕರೆ ಜಮೀನನ್ನು 1932ರಲ್ಲಿ ಪ್ರಲ್ದಾದರಾವ ಗುರುರಾವ ಅರ್ಣೆಕರ್​ ಎಂಬುವರಿ ಖರೀದಿ ಮಾಡಿದ್ದಾರೆ. 1989ರ ವರೆಗೂ ಈ ಜಮೀನನಲ್ಲಿ ಕೃಷಿ ಚಟುವಟಿಕೆ ನಡೆದಿಲ್ಲ. ಪ್ರಸ್ತುತ ಮೂಲಕ ಮಾಲೀಕರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಹಾಗಾಗಿ 133(319) ಸರ್ವೇ ನಂಬರಿನ 15.30 ಏಕರೆ ಜಮೀನನ್ನು ಕೊಪ್ಪಳ ಜಿಲ್ಲೆಯ ಹುನಕಂಟಿ ನಿವಾಸಿ ಮೌಲಾಸಾಬ್​ ಇಮಾಮಸಾಬ್​ ನಧಾ್​ ಅವರು ಅರರ್ಣೇಕರ್​ ಕುಟುಂಬದಿಂದ 24.30 ಲಕ್ಷಕ್ಕೆ ಖರೀದಿಸಿದಂತೆ ಸೆ.06, 2023 ಮುಂಡರಗಿ ಉಪನೋಂದಣಿ ಖಚೇರಿಯಲ್ಲಿ ದಸ್ತಾವೇಜು ನೋಂದಣಿ ಮತ್ತು ಸೆ. 11 ರಂದು ಹಕ್ಕು ಬದಲಾವಣೆ ಮಾಡಲಾಗಿದೆ. ಅದೇ ರೀತಿ, 136(322) ಸರ್ವೇ ನಂಬರಿನ 27.24 ಏಕರೆ ಜಮೀನನ್ನು ಮುಂಡರಗಿಯ ಗಣೇಶ ಕಬಾಡಿ ಅವರಿಗೆ 45.50 ಲಕ್ಷ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಮತ್ತು 323/1 ಸರ್ವೇ ನಂಬರಿನ 13.20 ಏಕರೆ ಕೃಷಿಭೂಮಿಯನ್ನು ಇದೇರಿ ಮಾರಾಟ ಮಾಡಿದ್ದಾರೆ. ಉಪನೋಂದಣಿ ಕಚೇರಿಗೆ ಹಾಜರಾಗಿ ಪ್ರಲ್ದಾದರಾವ್​ ಅರ್ಣೇಕರ ಎಂಬ ಹೆಸರಿನಿಂಧ ಭೂಮಿ ಖರೀದಿ ನೀಡಿ ವ್ಯಕ್ತಿ ನಕಲಿ ಆಗಿದ್ದಾನೆ ಎಂದು ತಿಳಿದು ಬಂದಿದೆ. ಈ ಪ್ರಕಣದಲ್ಲಿ ಮುಂಡರಗಿಯ ಹಿಂದಿನ ಕಂದಾಯ ನಿರೀಕ್ಷಕ ಎಂ. ಎ. ನದಾ ಮತ್ತು ಎಚ್​.ಎಂ. ಪಾಟೀಲ, ಕೊರ್ಲಹಳ್ಳಿ ಗ್ರಾಮ ಆಡಳಿತಾಧಿಕಾರಿ ಮಂಜುನಾಥ ವಾಲ್ಮೀಕಿ, ವಿಷಯ ನಿರ್ವಾಹಕ ಮಹೇಶ ನಾಯ್ಕ, ಭೀಮಣ್ಣ ಪುರದ, ಶ್ರೀಕಾಂತ ಅರ್ಣೇಕರ, ಮಹಮ್ಮದ ಹನೀ ಹುಯೀಲಗೋಳ, ಮೆಹಬೂಬಸಾಬ್​ ತಾಡಪತ್ರಿ, ಜಹುರ ಯರಗುಡಿ, ಬಸವರಾಜ ರಾಮೇನಹಳ್ಳಿ, ಮೌಲಾಸಾಬ ನದಾ, ಗಣೇಶ ಕಬಾಡಿ, ಯಲ್ಲಪ್ಪ ಕುಕನೂರು ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳ ಮೇಲೆ FIR​ ದಾಕಲಾಗಿದೆ. ಈ ಕುರಿತು ಲೋಕಾ ಅಧಿಕಾರಿಗಳು ಅಧಿಕೃತ ಪ್ರಕಟಣೆ ನೀಡಿದ್ದಾರೆ.