ಗದಗ: ನಗರದ ಪ್ರತಿಷ್ಠಿತ ಕೆ ವಿ ಎಸ್ ಆರ್ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸನ್ಮಾನ್ಯ ಶ್ರೀ ರವೀಂದ್ರ ನಾಥ್ ಬಿ. ದಂಡಿನ ರವರು "ಮಕ್ಕಳ ಕಲಿಕೆ ಕೇವಲ ಪಠ್ಯಕಷ್ಟೇ ಸೀಮಿತವಾಗದೆ ಹಲವಾರು ಪ್ರಯೋಗಾತ್ಮಕ, ತಂತ್ರಜ್ಞಾನ ಮತ್ತು ವಿವಿಧ ಆಯಾಮಗಳನ್ನು ತಮ್ಮ ಕಲಿಕೆಯಲ್ಲಿ ಸೇರಿಸಿಕೊಂಡು ತಮ್ಮನ್ನು ತಾವು ವಿಕಾಸ ಭಾರತದ ಮುನ್ನುಡಿ ಯಾಗಬೇಕು" ಎಂದು ಹೇಳಿದರು.
ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸನ್ಮಾನ್ಯ ಡಾ. ಪುನೀತ್ ಕುಮಾರ್ ಬೆನಕನವಾರಿ ಯವರು "ವಿದ್ಯಾರ್ಥಿ ಶಕ್ತಿಯು ದೇಶದ ಶಕ್ತಿ ಮಹಾವಿದ್ಯಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು" ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ನಮ್ಮ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಡಿ ಬಿ ಗವಾನಿ ಅವರು "ಕೆ ವಿ ಎಸ್ ಆರ್ ಪದವಿ ಪೂವ೯ ಮಹಾವಿದ್ಯಾಲಯಕ್ಕೆ ತನ್ನದೇ ಆದ ಶ್ರೇಷ್ಠ ಇತಿಹಾಸವಿದೆ. ಇದನ್ನು ಮುನ್ನಡೆಸಿಕೊಂಡು ಹೋಗಬೇಕಾಗಿರುವುದು ತಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕು" ಎಂದು ಹೇಳಿದರು. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಉಮೇಶ್ ಹಿರೇಮಠ ರವರು ಪ್ರಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಮನೋರಂಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.