ವಿಶ್ವ ಆಹಾರ ದಿನಾಚರಣೆ
ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ವಿಶ್ವ ಆಹಾರ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧಾರವಾಡ ಕೃಷಿ ವಿವಿ ಪ್ರಾಧ್ಯಾಪಕ ಆರ್. ವಿ. ಹೆಗ್ಡೆ, ಪ್ರಸ್ತುತ ವರ್ಷ ಉತ್ತಮ ಜೀವನ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು ಎಂಬ ಉದ್ದೇಶದೊಂದಿಗೆ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತಿದೆ. ಆಹಾರ ಪದ್ಧತಿಯಲ್ಲಿ ನಾವು ಹಣ್ಣು ಮತ್ತು ತರಕಾರಿಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ಆಹಾರವನ್ನು ವ್ಯರ್ಥ ಮಾಡದೇ ಅವಶ್ಯವಿದ್ದಷ್ಟು ಮಾತ್ರ ಸೇವಿಸಬೇಕು ಹಾಗೂ ಸುಸ್ಥಿರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ಸುಧಾ ಮಂಕಣಿ, ಸಾಂಪ್ರದಾಯಕ ಆಹಾರ ಪದಾರ್ಥಗಳಾದ ಸಿರಿಧಾನ್ಯಗಳು, ಬೇಳೆಕಾಳುಗಳು ಹಾಗೂ ಹಸಿರು ತರಕಾರಿಗಳನ್ನು ದಿನನಿತ್ಯ ಸೇವಿಸಬೇಕು. ಅಪೌಷ್ಟಿಕ ಆಹಾರವನ್ನು ವಜಿರ್ಸಿ ಸಮತೋಲಿತ ಆಹಾರ ಸೇವನೆಯಿಂದ ಆರೋಗ್ಯ ಹಾಗೂ ಆಯಸ್ಸನ್ನು ವೃದ್ಧಿಸಿಕೊಳ್ಳಬಹುದು ಎಂದು ಹೇಳಿದರು.
ಉಪ ಕೃಷಿ ನಿರ್ದೇಶಕಿ ಸ್ಪೂತಿರ್ ಜಿ. ಎಸ್. ಮಾತನಾಡಿ, ಪೌಷ್ಟಿಕ ಆಹಾರ ಸೇವನೆಯು ಉತ್ತಮ ಜೀವನ ಶೈಲಿ ಹಾಗೂ ಸ್ಪೂತಿರ್ದಾಯಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಲು ಸಹಕಾರಿ ಆಗುತ್ತದೆ. ನಿಯಮಿತ ವ್ಯಾಯಾಮ ಹಾಗೂ ಸಕಾರಾತ್ಮಕ ಮನೋಭಾವಗಳಿಂದ ಸಕ್ರಿಯ ಜೀವನ ನಡೆಸಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾಥಿರ್ನಿಯರು ಆಹಾರದ ಮಹತ್ವದ ಕುರಿತು ಕಿರುನಾಟಕ ಪ್ರದಶಿರ್ಸಿದರು.
ಶಿವಕುಮಾರ, ಡಾ. ರಮ್ಯ, ಎನ್. ಎಚ್. ಭಂಡಿ, ಹೇಮಾವತಿ ಹಿರೇಗೌಡರ, ಡಾ. ವಿನಾಯಕ ನಿರಂಜನ್ ಮತ್ತಿತರರು ಇದ್ದರು.