ಗದಗ: ತಾಲೂಕ ಕುರುಬರ ರಜತ ಮಹೋತ್ಸವವನ್ನು ಸೆ. 20 ರಂದು ನಗರದ ಕನಕ ಭವನದಲ್ಲಿ ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ ಎಂದು ಮಾಜಿ ಶಾಸಕ ಹಾಗೂ ರಜತ ಮಹೋತ್ಸವ ಸಮಿತಿಯ ಗೌರವಾಧ್ಯ ಡಿ. ಆರ್. ಪಾಟೀಲ ಹೇಳಿದರು.
ನಗರದ ದೇವರಾಜ ಅರಸು ವಸತಿ ನಿಲಯದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಇನ್ನಷ್ಟು ಅದ್ದೂರಿಯಾಗಿ ಆಚರಿಸಲು ಎಲ್ಲರೂ ಸಂಟಿತರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಹಾಲುಮತ ಮಹಾಸಭಾದ ರಾಜ್ಯಾಧ್ಯ ರುದ್ರಣ್ಣ ಗುಳಗುಳಿ ಮಾತನಾಡಿ, ಜಿಲ್ಲೆಯಲ್ಲಿ ಕುರುಬ ಸಮಾಜವನ್ನು ಸಂಟಿಸಿ, ಶಾಶ್ವತ ನೆಲೆ ಕಲ್ಪಿಸಿ, ರಜತ ಮಹೋತ್ಸವ ಆಚರಿಸಲು ಕಾರಣಿಕರ್ತರಾಗಿರುವ ಹಿರಿಯರಾದ ಕೀರಪ್ಪ ಹೆಬಸೂರ ಅವರ ಸಾಧನೆ ಅವಿಸ್ಮರಣಿಯವಾಗಿದೆ. ಇದೇ ಸಂದರ್ಭದಲ್ಲಿ ಅವರ ಜೀವಮಾನ ಸಾಧನೆಯನ್ನು ಗುರುತಿಸಿ ಅಭಿನಂಧನಾ ಸಮಾರಂಭ ಹಮ್ಮಿಕೊಂಡುವುದು ಸೂಕ್ತವಾಗಿದೆ ಎಂದರು.
ವಾಸಣ್ಣ ಕುರಡಗಿ, ಪ್ರಕಾಶ ಕರಿ, ಚನ್ನಮ್ಮ ಹುಳಕಣ್ಣವರ, ಶಶಿಧರ ರೊಳ್ಳಿ, ಕೀರಪ್ಪ ಹೆಬಸೂರ, ಕಳಕನಗೌಡ ಗೌಡ್ರ, ಸೋಮಕಟ್ಟಿಮಠ, ಸುರೇಶ ಕೊಪ್ಪದ, ಎಸ್. ಎಸ್. ಕರಡಿ, ನೀಲಕಂಠ ಮರಡಿ, ಕೆ. ಬಿ. ಕಂಬಳಿ ಇತರರು ಇದ್ದರು.