ಗದಗ : ಗದಗ ಜಿಲ್ಲಾಡಳಿತ ಭವನಕ್ಕೆ ಬಸ್ ಸಂಚಾರ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರ ಸಂದ ಜಿಲ್ಲಾ ಅಧ್ಯ ಡಾ. ಬಸವರಾಜ ಬಳ್ಳಾರಿ ಅವರ ನೇತೃತ್ವದಲ್ಲಿ ಕೆಎಸ್ಆರ್ಟಿಸಿ ಗದಗ ಜಿಲ್ಲಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಈ ಹಿಂದೇ ಗದಗ ಜಿಲ್ಲಾಡಳಿತ ಭವನಕ್ಕೆ ಬಸ್ ಸಂಚಾರ ಕಲ್ಪಿಸಲಾಗಿತ್ತು. 3 ತಿಂಗಳ ಹಿಂದೇ ಈ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಯಿತು. ಗದಗ ಜಿಲ್ಲಾಡಳಿತ ಭವನಕ್ಕೆ ದಿನ ನಿತ್ಯ ನೂರಾರು ನಾಗರಿಕರು ಕಾರ್ಯ ನಿಮಿತ್ಯ ಬರುತ್ತಾರೆ. ಅವರು ಸಂಚಾರಕ್ಕಾಗಿ ಪರದಾಡುತ್ತಿರುವ ಹಿನ್ನೆಲೆಯಲ್ಲಿ ತಣವೇ ಗದಗ ಜಿಲ್ಲಾಡಳಿತ ಭವನಕ್ಕೆ ಬಸ್ ಸಂಚಾರ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಬಸವರಾಜ ಬಳ್ಳಾರಿ ಹಕ್ಕೊತ್ತಾಯ ಮಾಡಿದರು.
ಡಿ. ಎಸ್. ತಳವಾರ, ಎಂ. ಎಂ. ನಿಟ್ಟಾಲಿ, ಮಾರುತಿ ಮಂಗಳಾಪೂರ, ಅರವಿಂದ ಬಂಡಿ ಸೇರಿದಂತೆ ಇತರರು ಇದ್ದರು.