ಜಿಲ್ಲೆ

ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ವಿತರಣಾ ಸಮಾರಂಭ.

Gadag - Shivanand Hiremath

ಗದಗ: ಕೋಟುಮಚಗಿಯ ಶ್ರೀ ಸೋಮೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಐ.ಟಿ.ಐ ಮತ್ತು ಎಂಬ್ರಾಡರಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಭಾರತ ಸರಕಾರದ ಕೌಶಲ ದಿಕ್ಷಾಂತ ೨೦೨೪ರ ಅಡಿಯಲ್ಲಿ ಪ್ರಮಾಣ ಪತ್ರ ವಿತರಣಾ ಸಮಾರಂಭ ಏರ್ಪಡಿಸಲಾಗಿತ್ತು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸೋಮೇಶ್ವರ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಗೌರಿಮಠ ಹಾಗೂ ನಿವೃತ್ತ ಇಂಜಿನೀಯರರಾದ ವಿನಾಯಕ ಕುಲಕರ್ಣಿ ಇವರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಶಿಕ್ಷಕಿ ಗೌರಿಮಠ ಮಾತನಾಡಿ ಮುಂದಿನ ತಮ್ಮ ವೃತ್ತಿ ಜೀವನದಲ್ಲಿ ನಿರಂತರ ಕೌಶಲ್ಯ ಕಲಿಕೆ ಇರಲಿ ಈಗಿನ ದಿನಮಾನಗಳಲ್ಲಿ ವಿವಿಧ ರೀತಿಯ ಕೌಶಲ್ಯಗಳಿಗೆ ಸಾಕಷ್ಟು ಬೇಡಿಕೆ ಇದ್ದು, ವಿದ್ಯಾರ್ಥಿಗಳು ಕೌಶಲ್ಯಗಳನ್ನು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಯಶಸ್ವಿ ಉದ್ಯಮಿಗಳಾಗಲು ಸಲಹೆ ನೀಡಿದರು.

ಇನ್ನೋರ್ವ ಅತಿಥಿಗಳಾದ ವಿನಾಯಕ ಕುಲಕರ್ಣಿ ಇವರು ಮಾತನಾಡಿ ಹಿಂದಿನ ದಿನಗಳಲ್ಲಿ ಕಲಿಕೆಗೆ ಅವಕಾಶಗಳ ಕೊರತೆ ಇತ್ತು, ಬೇರೆ ಬೇರೆ ಊರುಗಳಿಗೆ ಹೋಗಿ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಇತ್ತು ಅದರೆ ಇವತ್ತು ನಿಮ್ಮ ಊರಿನಲ್ಲಿ ಶಿಕ್ಷಣ ಹಾಗೂ ಕೌಶಲ್ಯ ಲಭ್ಯವಿದೆ. ಉತ್ತಮವಾದ ತರಬೇತಿಯನ್ನು ಪಡೆದುಕೊಂಡು ಆರ್ಥಿಕವಾಗಿ ಹಾಗೂ ಸಮಾಜಿಕವಾಗಿ ಅಭಿವೃದ್ಧಿ ಹೊಂದಲು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮೇಶ್ವರ ಐ.ಟಿ.ಐ ನ ಪ್ರಾಚಾರ್ಯರಾದ ಕೃಷ್ಣಾ. ಕುಲಕರ್ಣಿ ಇವರು ವಹಿಸಿದ್ದರು. ಎಂಬ್ರಾಡರಿ ತರಬೇತಿ ಶಿಕ್ಷಕಿ ಭಾರತಿ ದೊಡ್ಡಮನಿ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕರಾದ ಬದರಿನಾರಾಯಣ ವಂದಿಸಿದರು. ಈ ಸಂದರ್ಭದಲ್ಲಿ ಶೃತಿ ರಮಾಣಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.