Gadag: ಯಶಸ್ವಿಯಾಗಿ ಬದುಕಬೇಕು ಎನ್ನುವುದು ಎಲ್ಲ ಕನಸು ಮತ್ತು ಅಭಿಲಾಷೆ. ಯಶಸ್ಸು ಎಂಬ ಪದದ ವಾಖ್ಯವು ಬಹು ವಿಶಾಲವಾಗಿದೆ. ಬಿಕ್ಷುಕ ಸಾಮ್ರಾಟನಾದರೆ ಯಶಸ್ವಿ ಎಂದು ಹೇಳುತ್ತೇವೆ. ಆದರೆ, ಸಾಮ್ರಾಟ ಅಶೋಕ ಕೊನೆಯ ಜೀವಿನದಲ್ಲಿ ಬಿಕ್ಷೋ ಆಗುತ್ತಾನೆ. ಹಾಗಾದರೆ ಯಶಸ್ಸು ಎಂದು ಯಾರನ್ನೂ ಕರೆಯಬೇಕು ಎಂದು ಗವಿಸಿದ್ದೇಶ್ವರ ಶ್ರೀ ಹೇಳಿದರು.
ವಾಣಿಜ್ಯೋದ್ಯಮ ಸಂಸ್ಥೆ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿದ್ಯ ವಹಿಸಿ ಮಾತನಾಡಿ, ಮಕ್ಕಳಿಗೆ ನೀಟ್ ಪರೀಕ್ಷೆ ಬರೆಯುವುದನ್ನು ಕಲಿಸುತ್ತೇವೆ. ಆದರೆ ನೀಟಾಗಿ ಬದುಕುವುದನ್ನು ಕಲಿಸಲಿಲ್ಲ. ಎಲ್ಲವನ್ನೂ ಪಡೆಯುವುದಕ್ಕಾಗಿ ಆರೋಗ್ಯ ಮತ್ತು ಆನಂದದಿಂದ ಇರುವುದನ್ನು ಕಲಿಸಬೇಕು. ಮನೆಲಿ ನೋಟಿನ ಕಟ್ಟು ಇದ್ದವರು ಶ್ರೀಮಂತರಲ್ಲ. ಮನುಷ್ಯನಿಗೆ ಮೊನಕಾಲು ಗಟ್ಟಿ ಇದ್ದವನು ಶ್ರೀಮಂತ ಎಂದು ಹೇಳಿದರು.
ವಾಣಿಜ್ಯೋದ್ಯಮ ಸಂಸ್ಥೆಯವರಿಗೆ ಹೇಗೆ ಉದ್ಯಮ ಮಾಡಬೇಕು ಎಂದು ಹೇಳುವುದು ಅನವಶ್ಯಕ. ಆದರೆ, ಹಣ ಜಗತ್ತನ್ನು ಆಳುವುದಿಲ್ಲ. ವಿಚಾರಗಳು ಜಗತ್ತನ್ನು ಆಳುತ್ತವೆ. ಮನುಷ್ಯನಿಗೆ ದುಡಿಮೆ ಬಹಳ ಮುಖ್ಯ. ಆರೋಗ್ಯವಂತರಾಗಲು ದುಡಿಮೆ ಬಹುಮುಖ್ಯ. ಸಾಹಸಿಗಳಿಗೆ ಮಾತ್ರ ಫಲ ಸಿಗುತ್ತದೆ. ಸಾಹಸಿಗಳೇ ಆರೋಗ್ಯವಂತ ಆಗಿರುತ್ತಾರೆ ಎಂದರು.
ಮನೆ ವಾಸ್ತು ಪ್ರಕಾರ ಕಟ್ಟಬೇಕು. ಅಷ್ಟೇ ಮನಸ್ಸನ್ನು ಕೂಡ ವಾಸ್ತು ಪ್ರಕಾರ ಕಟ್ಟಬೇಕು. ಅಂದಾಗ ಮಾತ್ರ ಮನಸ್ಸಿಗೆ ನೆಮ್ಮದಿ ಇರುತ್ತದೆ. ಜೀವನ ಬದಲಾಗುತ್ತಲೇ ಇರುತ್ತದೆ. ಸಂಭಂದ ಮುರಿಯುತ್ತದೆ. ಸಂಪತ್ತು ಕರಗುತ್ತದೆ. ಇದು ನಿಸರ್ಗದ ನಿಯಮ. ಎನಿದೆಯೋ ಅದನ್ನೇ ಒಪ್ಪಿಕೊಂಡು ಬದುಕುವುದನ್ನು ಕಲಿಯುವುದೇ ಜೀವನ. ಇನ್ನೊಬ್ಬರನ್ನು ನೋಡಿ ಬದುಕುವುದು ಬದುಕಲ್ಲ. ಆರೋಗ್ಯ ಮತ್ತು ಆನಂದವೇ ಜೀವನದ ಸರಳ ಸೂತ್ರಗಳು. ಯಶಸ್ಸಿನ ಸೂತ್ರಗಳು ಇವೆ ಎಂದು ಗವಿಸಿದ್ದೇಶ್ವರ ಶ್ರೀಗಳು ಹೇಳಿದರು...