ಜಿಲ್ಲೆ

ವಚನ ಸಾಹಿತ್ಯಕ್ಕೆ ಅಲತ ವಚನಕಾತಿರ್ಯರ ಕೊಡುಗೆ ಅಪಾರ: ಡಾ. ರೇಖಾ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಅವಕಾಶ ಸಿಕ್ಕರೆ ಮುಗಿಲೆತ್ತರಕ್ಕೆ ವಿಸ್ತರಿಸುವ ಶಕ್ತಿಗೆ ಮಹಿಳೆಯರಿಗೆ ಇದೆ. ಇಂತಹ ಅವಕಾಶವನ್ನು 12ನೇ ಶತಮಾನದಲ್ಲಿ ಬಸವಣ್ಣನಾದಿಯಾಗಿ ಎಲ್ಲ ಶರಣರು ಮಹಿಳೆಯರಿಗೆ ಅವಕಾಶ ನೀಡಿದ್ದರು. ಹಾಗಾಗಿ ಅಂದು ಲಿಂಗ, ಜಾತಿ ಸಮಾನತೆ ಬೆಳಕು ವಿಸ್ತರಿಸಿತ್ತು ಎಂದು ಡಾ. ರೇಖಾ ನೀರಲಗಿ ಹೇಳಿದರು.

ನಗರದ ಕೆಎಲ್​ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಶರಣೆ ಸಾಹಿತ್ಯ ಎಂಬ ಉಪನ್ಯಾಸದಲ್ಲಿ ಅಲತ ವಚನಕಾತಿರ್ಯರು ಎಂಬ ವಿಷಯದ ಬಗ್ಗೆ ಮಾತನಾಡಿದರು.

ಹನ್ನೇರಡನೇ ಶತಮಾನವು ಒಂದು ಸಂಕ್ರಮಣ ಕಾಲವಾಗಿತ್ತು. ಧರ್ಮ ಹಾಗೂ ಸಮಾಜಗಳು ಅಸ್ಥಿರಗೊಂಡ ಸ್ಥಿತಿಯಲ್ಲಿದ್ದವು. ಯಾವುದೇ ಒಂದು ನಿದಿರ್ಷ್ಟ ಧರ್ಮವು ಅಂದಿನ ಜನರಿಗೆ ಮಾರ್ಗದಶಿರ್ಯಾಗಿ ಕಂಡುಬರದೆ ಇರುವುದರಿಂದ ಶರಣರು ನಿಮಿರ್ಸಿದ ಈ ಧರ್ಮದ ಅನುಯಾಯಿಗಳಾದರು. ಕೇವಲ ಪುರುಷರಷ್ಟೇ ವಚನಗಳನ್ನು ರಚಿಸಲಿಲ್ಲ. ಅಲ್ಲಿ ಮಹಿಳೆಯರು ಕೂಡ ತಮ್ಮ ವೃತ್ತಿಯೊಂದಿಗೆ ವಚನ ರಚನೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡರು. ಅಕ್ಕಮಹಾದೇವಿ ಪ್ರಮುಖರಾಗಿ ಕಂಡರೆ ಇನ್ನು ಸಾಕಷ್ಟು ಜನ ಮಹಿಳೆಯರು ವಚನಗಳನ್ನ ರಚಿಸಿದ್ದರು. ಅಂತವರ ಅಧ್ಯಯನ ಮಾಡುವುದರಿಂದ ನಾವು ಅವರಿಗೆ ಹಾಗೂ ಚಿಂತನೆಗಳಿಗೆ ನಾವು ಸಲ್ಲಿಸುವ ಗೌರವಾಗುತ್ತದೆ ಎಂದರು.

ಅಕ್ಕಮ್ಮ, ಅಮುಗೆ ರಾಯಮ್ಮ, ಕಾಳವೆ ಕದೀರೆ ರೆಮ್ಮವ್ವ, ಕನ್ನಡಿ ಕಾಯಕದ ರೇವಮ್ಮ, ಕಾಲಕರಣಿಯ ಕಾಮಮ್ಮ, ಕೇತಲದೇವಿ, ಪಟ್ಟಣದ ಸೋಮಮ್ಮ, ಗಂಗಮ್ಮ, ಗುಡ್ಡವೆ,ಸುಗ್ಗಳೆ, ಲಲ್ಲೇಶ್ವರಿ ದೇವಿ, ಗೊಗ್ಗವ್ವೆ, ಬೋಂತಾದೇವಿ, ಮಸಣವ್ವ,ರೇಖಮ್ಮ, ಲ್ಮಮ್ಮ, ರೇಚಮ್ಮ, ಲಕ್ಷಿ$್ಮದೇವಿ, ವರದಾನಿ ಗುಡ್ಡವ್ವೆ, ವೀರಮ್ಮ, ಸತ್ಯಕ್ಕ ಸೂಳೆ ಸಂಕವ್ವ, ಲಿಂಗಮ್ಮ ಹೀಗೆ ಮೊದಲಾದ ವಚನಕಾತಿರ್ಯರು ತಮ್ಮ ಜೀವನದ ಅನುಭವ ಅನುಭವಗಳೊಂದಿಗೆ ವಚನಗಳನ್ನು ರಚಿಸಿದ್ದಾರೆ. ಅವರು ರಚಿಸಿದ ವಚನಗಳು ಸಂಕೇಯ ದೃಷ್ಟಿಯಿಂದ ಹಾಗೂ ಮೌಲ್ಯಗಳ ದೃಷ್ಟಿಯಿಂದ ಕಡಿಮೆ ಇದ್ದರೂ ಮಾನವನ ಬದುಕಿನ ಮೌಲ್ಯಗಳ ಅಧ್ಯಯನಕ್ಕೆ ತುಂಬಾ ಅನುಕೂಲಕರವಾಗಿವೆ ಎಂದರು.

ಡಾ. ನಾಗರಾಜ ಬಳಿಗೇರ, ಜಿ ವಿಶ್ವನಾಥ್​, ಆರ್​. ಜಿ. ಪಾಟೀಲ, ಶ್ರುತಿ ಮ್ಯಾಗೇರಿ ಇತರರು ಇದ್ದರು.