ವಿಜಯವಾಣಿ ಸುದ್ದಿಜಾಲ ಗದಗ
ವಿಫಲರಾಗಲು ಯಾರು ಯೋಜಿಸುವುದಿಲ್ಲ. ಯೋಜಿಸುವಲ್ಲಿ ಜನರು ವಿಫಲರಾಗುತ್ತಾರೆ ಎಂದು ಕೆ. ಎಸ್. ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಲಯದ ಎನ್ಎಸ್ಎಸ್ ಟಕ ವತಿಯಿಂದ ಗುರುವಾರ ಏರ್ಪಡಿಸಿದ್ದ ಕಳೆದ ಸಾಲಿನ ವಾಷಿರ್ಕ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎನ್ಎಸ್ಎಸ್ ಟಕ ಜೀವನ ಕಲಿಸುತ್ತದೆ. ಸೇವೆಯೇ ಮೂಲಕ ಟಕವು ಜೀವನ ಮೌಲ್ಯ ಕಲಿಸುತ್ತದೆ. ಶ್ರಮ ಮತ್ತು ಗೌರವ ತಂದು ಕೊಡುತ್ತದೆ ಎಂದು ಹೇಳಿದರು.
ಪಾಚಾರ್ಯ ಡಾ. ಎ. ಕೆ. ಮಠ ಮಾತನಾಡಿ, ಎನ್ಎಸ್ಎಸ್ ದಿಂದ ವಿದ್ಯಾಥಿರ್ಗಳ ಜೀವನ ಉತ್ತಮವಾಗಿ ಬದಲಾಗುತ್ತದೆ, ಒಳ್ಳೆಯ ಗುಣಗಳನ್ನು ಕಲಿಸುತ್ತದೆ. ಶಿಕ್ಷಣ ಎಂದರೆ ಕೇವಲ ಪಠ್ಯ ಪುಸ್ತಕವಲ್ಲ. ಬದಲಾಗಿ ಕೌಶಲ್ಯ ಕಲಿಯುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರಬಂಧ ಸ್ಫರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರಥಮ ಸ್ಥಾನ ವಿಜಯಲಕ್ಷಿ$್ಮ ಬಂಡಿವಾಡ, ದ್ವೀತಿಯ ಜಯಲಕ್ಷಿ$್ಮ ಭಜಂತ್ರಿ ಮತ್ತು ತೃತೀಯ ಸ್ಥಾನವನ್ನು ಮಮತಾ ಉಳ್ಳಟಿ ಹಾಗೂ ರುದ್ರಗೌಡ ಹಿರೇಗೌಡ್ರ ಪಡೆದರು.
ಪ್ರೊ. ವಾಗೀಶ ಜಿ, ಪ್ರೊ. ವೀರಣ್ಣ ಬಡಿಗೇರ, ಟಕದ ಸ್ವಯಂ ಸೇವಕರು ಇದ್ದರು.