ವಿಜಯವಾಣಿ ಸುದ್ದಿಜಾಲ ಗದಗ
ವಿದ್ಯಾಥಿರ್ ಜೀವನದಲ್ಲಿ ಶೈಣಿಕ ಸಾಧನೆಯೊಂದಿಗೆ ನೈತಿಕ ಮೌಲ್ಯಗಳ ಅಳವಡಿಕೆಯು ವಿದ್ಯಾಥಿರ್ಗಳ ಸಮಗ್ರ ವಿಕಾಸಕ್ಕೆ ಅತೀ ಅವಶ್ಯಕವಾಗಿದೆ ಎಂದು ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿಗಳು ಹೇಳಿದರು.
ಕೆಎಲ್ಇ ಸಂಸ್ಥೆಯ ತೋಂಟದಾರ್ಯ ಮಹಾವಿದ್ಯಾಲಯದ ಆಯೋಜಿಸಿದ್ದ ವಿದ್ಯಾಥಿರ್ ಜೀವನದಲ್ಲಿ ನೈತಿಕ ಮೌಲ್ಯಗಳು ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು.
ನೈತಿಕ ಮೌಲ್ಯಗಳಿಲ್ಲದ ಶಿಣವು ಅರ್ಪೂಣವಾಗುತ್ತದೆ. ವಿಧೇಯತೆ, ಸತ್ಯನಿಷ್ಠೆ, ಕರ್ತವ್ಯ ಬದ್ಧತೆ, ಸಹಾನುಭೂತಿ ಈ ಮೌಲ್ಯಗಳನ್ನು ವಿದ್ಯಾಥಿರ್ಗಳಲ್ಲಿ ಹುಟ್ಟು ಹಾಕಬೇಕಾಗಿದೆ ಎಂದರು.
ವಿದ್ಯಾಥಿರ್ ಜೀವನವು ಮನುಷ್ಯ ಜೀವನದ ಅತ್ಯಂತ ಮಹತ್ವರ್ಪೂಣ ಟ್ಟವಾಗಿದೆ. ಈ ಹಂತದಲ್ಲಿ ನೈತಿಕ ಮೌಲ್ಯಗಳನ್ನು ಅನುಸರಿಸುವುದು, ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ನೈತಿಕ ಮೌಲ್ಯಗಳು ವಿದ್ಯಾಥಿರ್ಗಳ ವ್ಯಕ್ತಿತ್ವವನ್ನು ರೂಪಿಸಲು ಮತ್ತು ಉತ್ತಮ ನಾಗರಿಕರಾಗಿ ಬೆಳೆಸಲು ಸಹಾಯಕವಾಗುತ್ತವೆ. ವಿದ್ಯಾಥಿರ್ಗಳು ಸ್ಪರ್ಧಾತ್ಮಕ ಪರೀೆಗಳಲ್ಲಿ ನೈತಿಕ ಮೌಲ್ಯವು ತುಂಬಾ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.
ಪ್ರೊ. ಪಿ. ಜಿ. ಪಾಟೀಲ ಮಾತನಾಡಿ, ವಿದ್ಯಾಥಿರ್ ಜೀವನವು ಮಾನವನ ಜೀವನದ ಅತ್ಯಂತ ಮಹತ್ವರ್ಪೂಣ ಹಂತವಾಗಿದೆ. ಈ ಹಂತದಲ್ಲಿ ನೈತಿಕ ಮೌಲ್ಯಗಳನ್ನು ಅನುಸರಿಸುವುದು ಅವಶ್ಯಕವಾಗಿದೆ. ನೈತಿಕ ತತ್ವಗಳು ವಿದ್ಯಾಥಿರ್ಗಳ ವ್ಯಕ್ತಿತ್ವವನ್ನು ರೂಪಿಸಲು ಸಹಕಾರಿ ಆಗಿವೆ ಎಂದರು.
ಈಶಣ್ಣ ಮುನವಳ್ಳಿ, ಅಶೋಕ ನಿಲೂಗಲ, ವೀರೇಶ ಕೂಗು, ಪ್ರೊ. ಜಿ. ವಿಶ್ವನಾಥ, ಕಲ್ಯಾಣಿ ಹುಳಕುಂದ, ಬಿ. ಆರ್. ಚಿನಗುಂಡಿ ಹಲವರು ಇದ್ದರು.