ಜಿಲ್ಲೆ

ಶಿಕ್ಷಣದ ಬಗ್ಗೆ ಅರಿವು ಚಟುವಟಿಕೆ

Gadag - Shivanand Hiremath

Gadag: ನಗರದ ಪ್ರತಿಷ್ಠತ ಕೆ. ಎಲ್.‌ ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಲಯದ ಎನ್.‌ ಎಸ್.‌ ಎಸ್.‌ ಘಟಕದ ವತಿಯಿಂದ ದಿನಾಂಕ 24-04-2025 ಗುರುವಾರ ರಂದು ಗದಗ ನಗರದ ಎಸ್.‌ ಎಮ್.‌ ಕೃಷ್ಣಾ ನಗರದಲ್ಲಿ ಶಿಕ್ಷಣದ ಬಗ್ಗೆ ಅರಿವು ಚಟುವಟಿಕೆಯನ್ನು ಮಾಡಿದರು. ಈ ಚಟುವಟಿಕೆಯ ಮುಕಾಂತರ ಜನರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದರು. ಎನ್.‌ ಎಸ್.‌ ಎಸ್.‌ ಸ್ವಯಂಸೇವಕರು ಸಾರ್ವಜನಿಕರ ಮನೆ ಮನೆಗೂ ಹೋಗಿ ಶಿಕ್ಷಣ ಎಂದರೆ ಏನು?, ಶಿಕ್ಷಣದ ಮಹತ್ವ, ಶಿಕ್ಷಣ ಯಾಕೆ ಬೇಕು?, ಶಿಕ್ಷಣದ ಶಕ್ತಿ, ಶಿಕ್ಷಣ ದಿಂದ ವ್ಯಕ್ತಿಯ ಬದಲಾವಣೆ, ಬೆಳೆವಣಿಗೆ, ಮತ್ತು ಈ ರೀತಿಯ ಶಿಕ್ಷಣದ ಅರಿವನ್ನು ಜನರಿಗೆ ಅಲುಪಿಸುವ ಕಾರ್ಯವನ್ನು ಕೈಗೋಂಡರು.

ಈ ಚಟುವಟಿಕೆಯಲ್ಲಿ ಮಹಾವಿದ್ಯಾಲುದ ಎನ್.‌ ಎಸ್.‌ ಎಸ್.‌ ಘಟಕದ ನಾಯಕಿಯರಾದ ಕುಮಾರಿ. ಸಾಕ್ಷಿ ಹೊಸಮಠ, ಎನ್.‌ ಎಸ್.‌ ಎಸ್.‌ ಘಟಕದ 1 ನೇ ತಂಡದ ನಾಯಕ ಕುಮಾರ. ಮೌಲಾಲಿ ನಧಾಫ, ನಾಯಕಿ ಕುಮಾರಿ ಪೂಜಾ ಬಂಡಿ ಮತ್ತು ಇನ್ನುಳಿದ ತಂಡಗಳ ನಾಯಕರುಗಳಾದ ನಾಯಕಿ ಮೇಘಾ ಮುದ್ಧಿ, ನಾಯಕ, ನಾಯಕಿ. ಕುಮಾರಿ. ಪೂಜಾ ಮರಿಬಸಣ್ಣನವರ, ನಾಯಕ. ಕುಮಾರ. ಆಕಾಶ ಕಳಗಣ್ಣನವರ, ಕುಮಾರಿ. ನೀಲಮ್ಮ ಸಿತಾರಳ್ಳಿ ಹಾಗೂ ಎನ್.‌ ಎಸ್.‌ ಎಸ್.‌ ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು.