ಜಿಲ್ಲೆ

ಭಾರತದ ಇತಿಹಾಸವನ್ನು ಮರುಕಟ್ಟುವಲ್ಲಿ ಪ್ರಯತ್ನಿಸಿದವರು ಅರಬಿಂದೋ: ಪ್ರೊ. ಬಸಲಿಂಗಪ್ಪ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಅರಬಿಂದೋ ಅವರು ತಮ್ಮ ವ್ಯಾಪಕ ಬರಹ ಮತ್ತು ಬೋಧನೆಗಳ ಮೂಲಕ ವಿಶಿಷ್ಟವಾದ ಸಾಮಾಜಿಕ, ರಾಜಕೀಯ ವಿಧಾನವನ್ನು ಅಭಿವೃದ್ಧಿ ಪಡಿಸಿದರು. ಅವರ ಕೃತಿಗಳು ಮಾನವೀಯತೆಯ ವಿಕಾಸಕ್ಕೆ ಸಮಗ್ರ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತವೆ ಎಂದು ಜೆಎಸ್​ಎಸ್​ ಮಹಾವಿದ್ಯಾಲಯದ ಪ್ರೊ. ಬಸಲಿಂಗಪ್ಪ ಅರವಳದ ಹೇಳಿದರು.

ಗದಗ ಕೆಎಲ್​ಇ ಸಂಸ್ಥೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಶ್ವ ತತ್ವಶಾಸ್ತ್ರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರಬಿಂದೋ ಅವರ ಸಾಮಾಜಿಕ, ರಾಜಕೀಯ ತತ್ತ್ವಶಾಸ್ತ್ರದ ತಿರುಳಿನಲ್ಲಿ ಮಾನವ ಸಮಾಜವು ಒಂದು ಕ್ರಿಯಾತ್ಮಕ ಮತ್ತು ವಿಕಸನಗೊಳ್ಳುವ ಟಕವಾಗಿದ್ದು, ನಿರಂತರವಾಗಿ ಅಭಿವೃದ್ಧಿಯ ಉನ್ನತ ಹಂತಗಳತ್ತ ಸಾಗುತ್ತಿದೆ ಎಂಬ ಕಲ್ಪನೆಯಿದೆ. ಭಾರತದ ಇತಿಹಾಸವನ್ನು ಮರುಕಟ್ಟುವಲ್ಲಿ ಪ್ರಯತ್ನಿಸಿದ್ದಾರೆ. ಸಮಾಜದ ಅಂತಿಮ ಗುರಿ ವ್ಯಕ್ತಿಯ ರ್ಪೂಣ ಸಾಮರ್ಥ್ಯವನ್ನು ಅರಿತುಕೊಳ್ಳುವುದು ಮತ್ತು ಸಾಮರಸ್ಯ, ಪ್ರಗತಿಪರ ಸಾಮೂಹಿಕ ಜೀವನದ ಸ್ಥಾಪನೆ ಆಗಿರಬೇಕು ಎಂದು ಅರಬಿಂದೋ ನಂಬಿದ್ದರು. ಅರಬಿಂದೋ ಅವರ ಪ್ರಕಾರ, ಸಮಾಜದ ವಿಕಾಸವು ವಿವಿಧ ಹಂತಗಳ ಮೂಲಕ ತೆರೆದುಕೊಳ್ಳುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿ ಡಾ. ಎ. ವಿ. ದೇವಾಂಗಮಠ ಮಾತನಾಡಿ, ಅರಬೀಂದೋ ಅವರ ತತ್ವಗಳು ಪ್ರಬಲ ತತ್ವ ಅಥವಾ ಪ್ರಜ್ಞೆಯಿಂದ ಗುರುತಿಸಲ್ಪಟ್ಟಿದೆ. ಈ ಹಂತಗಳು ಬುಡಕಟ್ಟು, ಉಳಿಗಮಾನ್ಯ ಮತ್ತು ಆಧುನಿಕ ವ್ಯಕ್ತಿಗತ ಹಂತಗಳನ್ನು ಒಳಗೊಂಡಿವೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ. ಕೆ. ಮಠ ಮಾತನಾಡಿ ಸಮಾಜದಲ್ಲಿ, ವೈಯಕ್ತಿಕ ಸ್ವಾರ್ಥದಿಂದ ಆಧ್ಯಾತ್ಮಿಕ ತತ್ವಗಳ ಆಧಾರದ ಮೇಲೆ ಸಾಮೂಹಿಕ ಯೋಗೇಮಕ್ಕೆ ನೀಡುವ ಆಧ್ಯತೆ ಬದಲಾಗುತ್ತಿದೆ ಎಂದರು. ಉಪ ಪ್ರಾಂಶುಪಾಲೆ ಡಾ. ವೀಣಾ ಇ. ಇಂಗ್ಲಿಷ ಉಪನ್ಯಾಸಕಿ ಪ್ರೊ. ವಿಶಾಲಾ ತಳಗಡೆ, ಪ್ರೊ. ಯಲ್ಲಪ್ಪ ಆಡಕಾವು ಇತರರು ಇದ್ದರು.