ಜಿಲ್ಲೆ

ಕೆಎಲ್‌ಇ ಸಂಸ್ಥೆಯ ಸಾಂಸ್ಕೃತಿಕ ದಿನ ಆಚರಣೆ

Gadag - Shivanand Hiremath

ಗದಗ: ನಗರದ ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ಔಷಧ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿದ ಜರುಗಿದವು. ದಿನಾಂಕ ೩ ರಂದು ಜನಪದ ದಿನ ಹಾಗೂ ದಿನಾಂಕ ೪ ರಂದು ಚಲನಚಿತ್ರೋತ್ಸವ ದಿನ ಆಚರಿಸಲಾಯಿತು. ಜನಪದ ದಿನದಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿವಿಧ ಸಾಂಪ್ರದಾಯಿಕ ವೇಷಭೂಷಣದಲ್ಲಿ ಪಾಲ್ಗೊಂಡು ವಿವಿಧ ಜನಪದ ಕಲೆಗಳನ್ನು ಪ್ರದರ್ಶಿಸಿದರು. ಚಲನಚಿತ್ರೋತ್ಸವ ದಿನದಂದು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಸಿನಿಮಾ ನಟರ ಪಾತ್ರಗಳ ವೇಷಧಾರಣೆ ಮಾಡಿ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಮತ್ತು ಹಾಡುಗಳ ನೃತ್ಯದ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಎರಡು ದಿನದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದಂತಹ ಡಾ. ರಮೇಶ ವ್ಹಿ. ಅವರು ಕಾರ್ಯಕ್ರಮಗಳನ್ನು ಕುರಿತು ಮಾತನಾಡಿ, ಜನಪದ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಅರಿವು ಮೂಡಿಸಿದರು. ಅದರಂತೆ ಚಲನಚಿತ್ರೋತ್ಸವ ದಿನದಂದು ಚಲನಚಿತ್ರರಂಗದ ಮಹತ್ವವನ್ನು ಸಾರಿ ಸಮಾಜದಲ್ಲಿ ಚಿತ್ರರಂಗದ ಪ್ರಭಾವ ಮತ್ತು ಮಹತ್ವವನ್ನು ವಿವರಿಸಿದರು.
ಈ ಎರಡು ದಿನದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಕಲಾತ್ಮಕತೆ ಹಾಗೂ ಸೃಜನಶೀಲತೆಯಿಂದ ಪಾಲ್ಗೊಂಡರು. ಕಾರ್ಯಕ್ರಮಗಳಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.