ಜಿಲ್ಲೆ

ವಾಲ್ಮೀಕಿ ಸಾರ್ವಕಾಲಿಕ ಶ್ರೇಷ್ಠ ಕವಿ: ಮಹಂತೇಶ ಮಡಿಕೇರಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ವಾಲ್ಮೀಕಿ ಜಗತ್ತು ಕಂಡ ಮೇರು ಕವಿ. ಅವರು ರಚಿಸಿದ ರಾಮಾಯಣ ಜಗತ್ತಿನ ಮಹಾಕಾವ್ಯಗಳ ಸಾಲಿನಲ್ಲಿ ಬಹಳ ಎತ್ತರದಲ್ಲಿ ನಿಲ್ಲುತ್ತದೆ ಎಂದು ಜೆಟಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಮಹಂತೇಶ ಮಡಿಕೇರಿ ಹೇಳಿದರು.

ಕೆಎಲ್​ಇ ಸಂಸ್ಥೆಯ ಜೆಟಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಷಿರ್ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಷಿರ್ ವಾಲ್ಮೀಕಿ ಪ್ರತಿಭಾವಂತ ಕವಿಯಾಗಿದ್ದು, ತನ್ನ ವಿಶಿಷ್ಟ ಒಳನೋಟದ ಮೂಲಕ ರಾಮಾಯಣವನ್ನು ಸಾರ್ವಕಾಲಿಕ ಮತ್ತು ಸಾರ್ವದೇಶಿಕವಾಗಿ ಜನರು ಮೆಚ್ಚುವಂತೆ ರಚಿಸಿರುವುದು ಭಾರತೀಯರಾದ ನಾವೆಲ್ಲ ಅಭಿಮಾನಪಡುವ ಸಂಗತಿ. ರಾಮಾಯಣ ಮಹಾಕಾವ್ಯವು ಭಾರತೀಯ ಧಾಮಿರ್ಕ, ಸಾಂಸತಿಕ, ಸಾಮಾಜಿಕ, ರಾಜಕೀಯ, ಆಧ್ಯಾತ್ಮಿಕ ವಿಚಾರಗಳನ್ನು ಒಳಗೊಂಡ ಶ್ರಿಮಂತ ಪರಂಪರೆಯ ಮಹಾಕಾವ್ಯ. ಮಹಾಕಾವ್ಯದ ಕೇಂದ್ರ ಪಾತ್ರಗಳಲ್ಲಿ ಬರುವ ರಾಮ, ಸೀತೆ, ಲಕ್ಷ$್ಮಣ, ಭರತ, ಆಂಜನೇಯ, ಅಂಗದ, ಸುಗ್ರೀವ, ವಿಭೂಷಣ, ಮುಂತಾದವು ಒಂದೊಂದು ಮೌಲ್ಯಗಳ ಪ್ರತಿಪಾದಕರಾಗಿದ್ದಾರೆ. ರಾಮ ಸೀತೆ ಆದರ್ಶ ದಂಪತಿಗಳಾಗಿ, ರಾಮ, ಲಕ್ಷ$್ಮಣ, ಭರತ ಆದರ್ಶ ಸಹೋದರರಾಗಿ ಹೊರಹೊಮ್ಮಿದ್ದಾರೆ. ರಾಮ, ಆಂಜನೇಯ ಗುರು ಶಿಷ್ಯ ಪರಂಪರೆಯ ತುಂಬ ಎತ್ತರದ ಸಾಲಿನಲ್ಲಿ ನಿಲ್ಲುತ್ತಾರೆ. ರಾಮ ಅರಣ್ಯ ವಾಸಕ್ಕೆ ಹೊರಟು ನಿಂತಾಗ ಸೀತೆ ರಾಮನೊಂದಿಗೆ ಹೊರಟು ನಿಂತದ್ದು ಸೀತೆಯ ಪಕ್ವಗೊಂಡ ಮನಸ್ಥಿತಿಯನ್ನು ಸಾದರಪಡಿಸುತ್ತದೆ. ವಾಲ್ಮೀಕಿ ಮತ್ತು ರಾಮಾಯಣ ಸಾರ್ವಕಾಲಿಕ ಶ್ರೇಷ್ಠ ಸಾಲಿನಲ್ಲಿ ನಿಲ್ಲುವ ಮಹಾಕಾವ್ಯವಾಗಿದೆ ಎಂದು ಹೇಳಿದರು.

ಅಧ್ಯತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಪಿ. ಜಿ.ಪಾಟೀಲ ಮಾತನಾಡಿ, ಮಹಷಿರ್ ವಾಲ್ಮೀಕಿ ರಚಿಸಿದ ರಾಮಾಯಣವು ಭಾರತೀಯರಾದ ನಮಗೆ ಪವಿತ್ರವಾದ ಮಹಾಕಾವ್ಯವಾಗಿದೆ. ನಮ್ಮ ಶಾಲಾ ಕಾಲೇಜುಗಳು ವೃತ್ತಿ ಕೌಶಲ್ಯಗಳನ್ನು ಕಲಿಸಿದರೆ, ರಾಮಾಯಣದಂತಹ ಮಹಾಕಾವ್ಯಗಳು ಜೀವನ ಕೌಶಲ್ಯಗಳನ್ನು ಕಲಿಸಿಕೊಡುತ್ತವೆ ಎಂದು ಹೇಳಿದರು.

ಪ್ರೊ. ವಿಶ್ವನಾಥ ಜಿ., ಪ್ರೊ. ಎಸ್​. ಬಿ. ಹಾವೇರಿ, ಆರ್​. ಜಿ. ಪಾಟೀಲ, ರೀಮಾ ಬಾಕಳೆ, ಬೋಧಕ ಬೋಧಕೇತರ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.