ವಿಜಯವಾಣಿ ಸುದ್ದಿಜಾಲ ಗದಗ
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಜೀವನದಲ್ಲಿ ವಿದ್ಯಾಥಿರ್ ಜೀವನ ಬಹಳ ಮುಖ್ಯ. ಒಮ್ಮೆ ಕಳೆದು ಹೋದರೆ ಅದು ಮತ್ತೊಮ್ಮೆ ಸಿಗಲಾರದು. ಆದ್ದರಿಂದ ವಿದ್ಯಾಥಿರ್ಗಳು ಬಹಳ ಶ್ರದ್ಧೆಯಿಂದ ಕಲಿತು ಬದುಕಿನಲ್ಲಿ ಯಶಸ್ವಿಯಾಗಿ ಕಲಿಸಿದ ಶಿಕರಿಗೂ ಸಹ ಒಳ್ಳೆಯ ಹೆಸರು ತರಬೇಕು ಎಂದು ಕಾಲೇಜು ಶಿಣ ಇಲಾಖೆಯ ಧಾರವಾಡ ವಲಯದ ಜಂಟಿ ನಿರ್ದೇಶಕ ಡಾ. ಪ್ರಕಾಶ ಹೊಸಮನಿ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಜರುಗಿದ ಬಿ.ಎ ಮತ್ತು ಬಿ.ಕಾಂ ಅಂತಿಮ ವರ್ಷದ ಬೀಳ್ಕೊಡುಗೆ ಮತ್ತು ಸಾಂಸತಿಕ, ಕ್ರೀಡಾ ಮತ್ತು ಒಕ್ಕೂಟದ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಗೂ ಬದುಕಿನಲ್ಲಿ ಎದುರಾಗುವ ಕೊರತೆ ಮತ್ತು ಸಮಸ್ಯೆಗಳೇ ನಿಜವಾದ ಅವಕಾಶಗಳು. ಅವುಗಳನ್ನು ಎದುರಿಸುವ ಶಕ್ತಿ ಬೆಳಸಿಕೊಂಡು ಹೊಸ ಸವಾಲುಗಳನ್ನು ಸ್ವೀಕರಿಸುತ್ತಾ ನಡೆಯಬೇಕು. ವಿದ್ಯಾಥಿರ್ ಜೀವನದಲ್ಲಿ ನೂರಾರು ಅಡತಡೆಗಳು ನಿಮ್ಮೆದುರಿಗೆ ತಾಂಡವವಾಡುತ್ತಿರುತ್ತವೆ. ಇಂತಹ ಬದುಕಿನ ಕೊರತೆಗಳು ಅನೇಕ ಬಾರಿ ಕನಸುಗಳನ್ನು ಹಿಮ್ಮೆಟ್ಟಿಸುತ್ತದೆ. ಆದರೆ ನಮ್ಮ ಪ್ರಯತ್ನಗಳು ನಿಲ್ಲಬಾರದು. ಕೊರತೆಗಳನ್ನೇ ಅವಕಾಶಗಳನ್ನಾಗಿ ಬಳಸಿಕೊಂಡು ಸವಾಲಿನಂತೆ ಬದುಕಿನ ಸಾಗರವನ್ನು ಈಜಬೇಕು. ಇದರ ಪರಿಣಾಮ ಕನಸಿಗಿಂತ ಮೀರಿದ ಪ್ರತಿಲವನ್ನು ನಾವು ಕಾಣುತ್ತೇವೆ ಎಂದರು.
ಮುಂಡರಗಿಯ ಪ್ರೀಯದಶಿರ್ನಿ ಶಿಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಜಿ. ಹಿರೇಮಠ ಮಾತನಾಡಿ, ವಿದ್ಯಾಥಿರ್ ಜೀವನ ಅತ್ಯಮೂಲ್ಯವಾಗಿದೆ. ಇದನ್ನು ತಪ್ಪಿಸ್ಸಿನಂತೆ ಭಾವಿಸಬೇಕು. ಸಮಯ ಅನಗತ್ಯ ಹಾಳು ಮಾಡದೇ ಉಜ್ವಲ ಭವಿಷ್ಯ ರೂಪಿಸುವ ವಿದ್ಯಾರ್ಜನೆ ಕಡೆಗೆ ಹೆಚ್ಚು ಗಮನ ಹರಿಸಬೇಕು. ಮೋಜ, ಮಸ್ತಿಗೆ ಎಂದೆಂದಿಗೂ ಅವಕಾಶ ನೀಡಬಾರದು. ಭವಿಷ್ಯದಲ್ಲಿ ಉನ್ನತ ಹುದ್ದೆ ಅಲಂಕರಿಸಲು ಬುನಾದಿಯಾದ ಓದಿನ ಕಡೆಗೆ ಹೆಚ್ಚು ಗಮನ ಕೇಂದ್ರಿಕರಿಸುವುದು ಅವಶ್ಯಕ. ಯಾವ ವಿದ್ಯಾಥಿರ್ ಅತ್ಯಂತ ಆಸಕ್ತಿಯಿಂದ ಸತತ ಓದಿನೊಂದಿಗೆ ಜ್ಞಾನದ ಹಸಿವನ್ನು ಹಿಂಗಿಸಿಕೊಳ್ಳಲು ಕಠಿಣ ಪರಿಶ್ರಮ ಪಡುತ್ತಾನೋ ಅಂಥ ವಿದ್ಯಾಥಿರ್ ಬದುಕಿನಲ್ಲಿ ಯಶಸ್ವಿಯಾಗುತ್ತಾನೆ ಎಂದರು.
ಕಾರ್ಯಕ್ರಮದ ಅಧ್ಯತೆ ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯೆ ರಜನಿ ಪಾಟೀಲ ಮಾತನಾಡಿ, ವಿದ್ಯಾಥಿರ್ಗಳು ನಿತ್ಯವೂ ನವೋಲ್ಲಾಸ ಮತ್ತು ಆಶಾಭಾವನೆಯಿಂದ ಬದುಕಬೇಕಾದ ಅನಿವಾರ್ಯತೆ ಇದೆ. ತಾವು ನಿಷ್ಪರಯೋಜಕರು ಎಂಬ ಕೀಳರಿಮೆ ತೊರೆದು ಪ್ರತಿಭೆ ಮೈಗೂಡಿಸಿಕೊಳ್ಳಬೇಕು. ಉತ್ತಮ ನಾಯಕನಾಗಿ ಹೊರಹೊಮ್ಮಬಹುದು. ಪ್ರತಿ ದಿನ ಹೊಸದನ್ನು ಕಲಿಯುವ ಉತ್ಸಾಹ ಬೆಳೆಸಿಕೊಳ್ಳಬೇಕು. ಹಲವು ಬಾರಿ ಸೋಲು ಅನುಭವಿಸಿದವರೆ ಹೆಚ್ಚು ಸಾಧಕರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಉಪನ್ಯಾಸಕರು ಮತ್ತು ವಿದ್ಯಾಥಿರ್ಗಳಿಗೆ ಸನ್ಮಾನಿಸಲಾಯಿತು. ಮೃತ್ಯಂಜಯ ಸಂಕೇಶ್ವರ, ಡಾ. ವೀಣಾ ಇ, ಡಾ. ವಿಠ್ಠಲ ಕೋಳಿ, ಡಾ. ಅಂದಯ್ಯ ಅರವಟಗಿಮಠ, ಡಾ. ಎ. ಕೆ. ಮಠ ಇತರರು ಇದ್ದರು.