ಜಿಲ್ಲೆ

ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನದಿಂದ

Gadag - Shivanand Hiremath


ಸಾಧಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ
ಗದಗ : ಶಿಕ್ಷಣ ವ್ಯಕ್ತಿಯ ಬದುಕಿಗೆ ಬೆಳಕನ್ನು ಕೊಡುವಂಥದ್ದಾಗಿದೆ ಶಿಕ್ಷಣವಿಲ್ಲದಿದ್ದರೆ ವ್ಯಕ್ತಿ ಅನಾಗರಿಕನಾಗಿ ದಾರಿದ್ರö್ಯದಿಂದ ಬಳಲುತ್ತಾನೆ ಹಾಗಾಗಿ ಸಾರ್ವಜನಿಕ ಸೇವಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಉತ್ತಮ ಶಿಕ್ಷಕಕ್ಕೆ ಪ್ರೋತ್ಸಾಹ ನೀಡುತ್ತಿವೆ ಎಂದು ಗದಗ ತೋಂಟದಾರ್ಯ ಸಂಸ್ಥಾನಮಠದ ಜ.ತೋಂಟದ ಸಿದ್ಧರಾಮ ಮಹಾಸ್ವಾಮಿಜಿ ನುಡಿದರು.
ಶಾಲಾ ಶಿಕ್ಷಣ ಇಲಾಖೆ ಗದಗ ಡಾ. ಎಚ್.ಎಫ್ ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ ಅಪರ ಆಯುಕ್ತರ ಕಛೇರಿ ಧಾರವಾಡ ಹಾಗೂ ತೋಂಟದಾರ್ಯ ಸಂಸ್ಥಾನಮಠ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ ಪರಿಶ್ರಮ ಹಿರಿಮೆಗೆ ಮನ್ನಣೆಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಪೂಜ್ಯಶ್ರೀಗಳು ಮಾತನಾಡುತ್ತ ಧಾರವಾಡದ ಡಾ. ಎಚ್. ಎಫ ಕಟ್ಟೀಮನಿ ಪ್ರತಿಷ್ಠಾನ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ ಅದನ್ನು ಠೇವಣಿ ಇರಿಸಿ ಅದರಿಂದ ನೆರವು ನೀಡುವಂಥ ಕಾರ್ಯ ಮಾಡುತ್ತಿದೆ. ಕಲಿಕಾ ಕೌಶಲವನ್ನು ಕಲಿಸಿಕೊಡುವ ಕಾರ್ಯವನ್ನು ಮಾಡುತ್ತಿದೆ. ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕಾದರೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗಿರುವುದು ಅವಶ್ಯವಾಗಿದೆ. ಶಿಕ್ಷಣ ಗುಣಮಟ್ಟದಿಂದ ಕೂಡಿರಬೇಕು ಜೊತೆಗೆ ಸಂಸ್ಕಾರದಿAದ ಕೂಡಿರಬೇಕು. ಸಂಸ್ಕಾರರಹಿತ ಶಿಕ್ಷಣ ಪ್ರಯೋಜನವಿಲ್ಲ ಬಾಲ್ಯದಲ್ಲಿ ಉತ್ತಮ ಶಿಕ್ಷಣ ನೀಡಬೇಕು ಮಕ್ಕಳು ಒಳ್ಳೆಯವರಾಗಬೇಕು ಎಂದು ನಾವು ಬಯಸುತ್ತೇವೆ ಅದಕ್ಕೆ ಪೂರಕ ಶಿಕ್ಷಣವನ್ನು ನೀಡಬೇಕಾಗಿದೆ. ನಿರಂತರವಾಗಿ ಅಧ್ಯಯನಶೀಲರಾಗಬೇಕು. ಹೊಸ ವಿಚಾರಗಳ ಪ್ರಯೋಗ ನಿರಂತರವಾಗಿ ನಡೆಯುತ್ತಿರಬೇಕು. ಶಿಕ್ಷಕರು ಅಧ್ಯಯನಶೀಲರಾದರೆ ಮಕ್ಕಳಿಗೆ ಈ ಜ್ಞಾನ ಹಸ್ತಾಂತರವಾಗುತ್ತದೆ. ಶಿಕ್ಷಕರನ್ನು ಗೌರವಿಸುವ ಕಾರ್ಯವನ್ನು ಡಾ. ಕಟ್ಟೀಮನಿ ಪ್ರತಿಷ್ಠಾನ ಮಾಡುತ್ತಿದೆ. ಶಿಕ್ಷಕರನ್ನು ಪ್ರೋತ್ಸಾಹಿಸುವುದು ಜೊತೆಗೆ ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಶಾಘನೀಯವಾದುದು ಎಂದು ಜ.ತೋಂಟದ ಸಿದ್ಧರಾಮ ಮಹಾಸ್ವಾಮಿಜಿ ನುಡಿದರು.
ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ಹೇಗೆ ಎನ್ನುವ ವಿಷಯವಾಗಿ ವಿಶ್ರಾಂತ ಉಪನಿರ್ದೇಶಕ ಎಂ.ಎ.ರಡ್ಡೇರ ಉಪನ್ಯಾಸ ನೀಡುತ್ತ ಗುಣಮಟ್ಟದ ಶಿಕ್ಷಣ ಎನ್ನುವುದು ದಿನದಿಂದ ದಿನಕ್ಕೆ ಮಗು ಚೈತನ್ಯಶೀಲನಾಗಬೇಕು ಸಮಯದಿಂದ ಸಮಯಕ್ಕೆ ಬದಲಾಗಬೇಕು ಇದು ಗುಣಾತ್ಮಕ ಶಿಕ್ಷಣವಾಗಿದೆ. ಇದು ನಿರಂತರ ಪ್ರಕ್ರಿಯೆಯಾಗಿದೆ. ನಿಂತAತೆ ಕಾಣುವ ದೀಪ ನಿರಾತಂಕ ಬದುಕಿನ ಸಂದೇಶ ನೀಡುತ್ತದೆ. ಶಿಕ್ಷಕ ಗುಣಾತ್ಮಕವಾಗಿ ಕಲಿಸಬೇಕಾಗಿದೆ. ಪರಿಶ್ರಮದಿಂದ ಶಿಕ್ಷಕ ರೂಪಗೊಂಡ ಹಿನ್ನೆಲೆಯಲ್ಲಿ ಮಾನ ಸಮ್ಮಾನಗಳು ದೊರೆಯುತ್ತವೆ.
ಮಕ್ಕಳು ಓಡುತ್ತಿದ್ದಾರೆ. ಅವರಿಗೆ ಪ್ರಗತಿಯ ಹಾದಿಯನ್ನು ತೋರಿಸಬೇಕಾದುದು ಶಿಕ್ಷಕನ ಕರ್ತವ್ಯವಾಗಿದೆ. ಅದಕ್ಕಾಗಿ ಶಿಕ್ಷಕರು ಸದಾ ಓದುಗರಾಗಬೇಕು ಹಾಡು, ನೃತ್ಯ ,ಭಾಷಣ, ಆಟಗಳಲ್ಲಿ ಸೃಜನಶೀಲತೆ ತುಂಬಿದೆ ಇವೆಲ್ಲವನ್ನು ಕಲಿಸುತ್ತಿದ್ದೇವೆ ಇವೆಲ್ಲವುಗಳಲ್ಲಿ ಮೌಲ್ಯಗಳಿವೆ ಅದನ್ನು ಮಗು ಕಲಿಯುತ್ತಿದೆ. ಅದನ್ನು ಭವಿಷ್ಯದಲ್ಲಿ ರೂಪಿಸಿಕೊಳ್ಳಲು ಇವೆಲ್ಲವುಗಳು ಪ್ರೇರಣೆದಾಯವಾಗುತ್ತವೆಂದರು. ಶಾಲೆಯ ವೇದಿಕೆಗಳು ಪ್ರತಿಭಾ ಕಾರಂಜಿನ್ನು ಚಿಮ್ಮಿಸುವ ಕಾರ್ಯವನ್ನು ಮಾಡುತ್ತಿವೆ. ಇವೆಲ್ಲ ಕೌಶಲಗಳನ್ನು ಹೆಕ್ಕಿ ತೆಗೆಯಲು ಆಲೋಚನಾ ಪರಿಧಿಯನ್ನು ವಿಸ್ತರಿಸುತ್ತ ಹೋಗಬೇಕು. ಹುಡುಕುವುದು ಮತ್ತು ಸಂಶೋಧನೆಗೆ ಒಳಪಡಿಸುವುದು ಶಿಕ್ಷಕನ ಕರ್ತವ್ಯವಾಗಿದೆ. ಈ ಆಲೋಚನೆಯನ್ನು ಪಾಲಕರಿಗೆ ಹರಿಬಿಡಬೇಕು ಇದರಿಂದ ಕೌಶಲವನ್ನು ಬೆಳವಣಿಗೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಶಿಕ್ಷಕರು ಓದಿನಲ್ಲಿ ಆನಂದಪಡಬೇಕು ಮಕ್ಕಳು ಕಲಿಕೆಯಲ್ಲಿ ಆನಂದಿಸುತ್ತವೆ. ಶಿಕ್ಷಕರಿಗೆ ಇದು ಆಗದೇ ಹೋದರೆ ಬೋಧನೆ ನಿರರ್ಥಕವಾಗುತ್ತದೆ. ಲವಲವಿಕೆ ಸಂತೋಷ ಹೊಸದನ್ನು ಆಲೋಚಿಸುವ ಬುದ್ದಿ ನಮ್ಮ ಪ್ರೇರಣಾದಾಯಕ ಮಾತುಗಳು ಮಗುವಿಗೆ ದೀವ್ಯೌಶಧವಾಗುತ್ತದೆ. ಹಾಗಾಗಿ ಶಿಕ್ಷಕರು ಚಿಂತನಶೀಲರಾಗಬೇಕೆAದರು.
ಪ್ರತಿಷ್ಠಾನದ ದತ್ತಿ ದಾನಿ ಶಾಸನ ಸಂಶೋಧಕಿ ಡಾ.ಹನುಮಾಕ್ಷಿ ಗೋಗಿ ಮಾತನಾಡಿ ತಮ್ಮ ಗುರುಗಳಾದ ಡಾ.ಎಂ.ಎA.ಕಲಬುರ್ಗಿಯವರ ನೆನಪಿನಲ್ಲಿ ದತ್ತಿ ನೀಡಿ ಅವರ ಹೆಸರನ್ನು ಪ್ರತಿಷ್ಠಾನದಲ್ಲಿ ಅಜರಾಮರವಾಗಿರುವಂತೆ ಮಾಡಿ ನಿಸ್ವಾರ್ಥ ಶಿಕ್ಷಕರಿಗೆ ಅದರ ಲಾಭ ಲಭಿಸುವಂತೆ ಮಾಡಲಾಗಿದೆಯೆಂದರು.
ಪ್ರತಿ಼ಷ್ಠಾನದ ಹಿರಿಯ ಚೇತನ ಶಿವಶಂಕರ ಹಿರೇಮಠ ಡಾ.ಎಚ್.ಎಫ್ ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನದ ಕುರಿತು ಮಾತನಾಡಿ 2016 ರಲ್ಲಿ ಧಾರವಾಡದಲ್ಲಿ ಬೀಜಾಂಕುರವಾದ ಪರಿಕಲ್ಪನೆ 2018 ರಲ್ಲಿ 59 ರೇಂಜ್ ಗಳಿಗೆ ವಿಸ್ತಾರಗೊಂಡಿದೆ. ಪ್ರಮುಖವಾಗಿ ಮಾರ್ಚ/ಎಪ್ರಿಲ್ ನಲ್ಲಿ ಜರುಗುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಆಧರಿಸಿ ಜಿಲ್ಲೆಯ ಹಾಗೂ ತಾಲೂಕಿನ ಸರಾಸರಿ ಗುರುತಿಸಿ ಉನ್ನತ ಶ್ರೇಣಿಯಲ್ಲಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ‘ಶಿಕ್ಷಕರ ಪರಿಶ್ರಮ ದಿನೋತ್ಸವ’ದ ಹೆಸರಿನಲ್ಲಿ ಪ್ರತಿಷ್ಠಾನ ಮಾಡುತ್ತಿದೆಯೆಂದರು.
ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ವಿಶ್ರಾಂತ ನಿರ್ದೇಶಕ ಎಂ.ಡಿ.ಬಳ್ಳಾರಿ ಮಾತನಾಡಿ ಇಲಾಖೆಯ ಅನೇಕ ಕಾರ್ಯಕ್ರಮಗಳು ಶಿಕ್ಷಕರನ್ನು ಅಸಾಮಾನ್ಯರನ್ನಾಗಿ ಹಾಗೂ ವಿದ್ಯಾರ್ಥಿಗಳನ್ನು ಕೌಶಲ್ಯಯುಕ್ತರನ್ನಾಗಿ ಮಾಡುವ ಹಾಗೂ ವೃತ್ತಿ ಕೌಶಲಗಳನ್ನು ಬೆಳೆಸಿಕೊಳ್ಳುವಲ್ಲಿ ಬೇಕಾದ ತಂತ್ರಗಳನ್ನು ಕಲಿಸಿಕೊಡುವ ಕಾರ್ಯಮಾಡುತ್ತಿದೆ. ಈ ದಿಸೆಯಲ್ಲಿ ಪ್ರತಿಷ್ಠಾನವು ಶಿಕ್ಷಕರ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವುದು ಸಂತಸದ ವಿಷಯವಾಗಿದೆಯೆಂದರು. ಶಿಕ್ಷಕರು ಮಕ್ಕಳ ಬಗೆಗೆ ಕಾಳಜಿ ಕಳಕಳಿ ವಹಿಸಿ ಪ್ರೀತಿ ಪಾತ್ರರಾಗಬೇಕು ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಬೇಕೆಂದರು.
ಮಾರ್ಚ/ಏಪ್ರಿಲ್ 2024 ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲಾ/ತಾಲೂಕು ಶಿಕ್ಷಕರು, ರಾಜ್ಯ ರಾಷ್ಟç ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಚಿತ್ರಕಲಾ ಶಿಕ್ಷಕರು ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ವೇದಿಕೆ ಮೇಲೆ ವಿಶ್ರಾಂತ ಉಪನಿರ್ದೇಶಕರುಗಳಾದ ಎ ಎನ್ ನಾಗರಳ್ಳಿ ಆಯ್ ಬಿ ಬೆನಕೊಪ್ಪ ಎಸ್.ಡಿ.ಗಾಂಜಿ ಎಂ.ಎ.ರಡ್ಡೇರ ಡಾ.ಹನುಮಾಕ್ಷಿ ಗೋಗಿ ಪ್ರತಿಷ್ಠಾನದ ಗೌರವ ನಿರ್ದೇಶಕ ಎಸ್.ಬಿ.ಕೊಡ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಸ್.ಬುರಡಿ ವಿ.ವಿ. ನಡುವಿನಮನಿ ಡಾ.ಗುರುನಾಥ ಹೂಗಾರ ಎಫ್.ಎ.ಫಡ್ನೇಶಿ ಗಂಗಾಧರ ಅಣ್ಣೀಗೇರಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಪೂಜಾರ ಪ್ರತಿಷ್ಠಾನ ಗೌರವ ನಿರ್ದೇಶಕ ಎಸ್ ಬಿ ಕೊಡ್ಲಿ ಕಾರ್ಯಕ್ರಮ ನೋಡಲ್ ಶಿವಾನಂದ ಗಿಡ್ನಂದಿ ಆರ್ ಜಿ ಕವಲಗೇರಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಲಕ್ಷಿö್ಮ ಕಂದಗಲ್ಲಮಠ ತನುಶ್ರೀ ಬದಿ ವಿದ್ಯಾರ್ಥಿನಿಯರಿಂದ ವಿದ್ಯಾರ್ಥಿನಿಯರಿಂದ ಪ್ರಾರ್ಥನೆಯಾಯಿತು. ವಿ.ವಿ.ನಡುವಿನಮನಿ ಸ್ವಾಗತಿಸಿದರು. ಬಿ ಈ ಓ ಆರ್.ಎಸ್.ಬುರಡಿ ವಂದಿಸಿದರು. ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು.