ಗದಗ : ಶರಣರ ಸತ್ವಯುತ ವಚನಗಳು ವ್ಯಕ್ತಿತ್ವದ ಪ್ರಾಮಾಣಿಕ ಪ್ರತಿಬಿಂಬಗಳoತೆ, ದಿನನಿತ್ಯದ ಬದುಕಿನಲ್ಲಿ ಪಾರಮಾರ್ಥಿಕ ಶಕ್ತಿಯನ್ನು ತುಂಬಿದವು. ಅಂತೆಯೇ ವೈಚಾರಿಕ ನಿಲುವನ್ನು ಸದೃಢಗೊಳಿಸಿದವು. ಜಳ್ಳನ್ನು ತೂರಿ ಗಟ್ಟಿಕಾಳನ್ನು ತನ್ನದಾನ್ನಾಗಿಸಿಕೊಳ್ಳುವ ಹೊಸ ದೃಷ್ಟಿಯನ್ನು ವಚನಗಳು ನೀಡಿದವು. ಪೂರ್ಣತೆಯತ್ತ ಸಾಗುವ ಅಂತರAಗದ ಅಭಿಪ್ಸೆಗೆ ಸಾಧನ ಮಾರ್ಗಗಳಾದವು ಚೈತನ್ಯ ಜೀವನಾಡಿಗಳಾಗಿ ಸಾರ್ವಕಾಲಿಕ ಮೌಲ್ಯಗಳನ್ನು ಬಿತ್ತರಿಸಿದವು ಎಂದು ಮಹೇಶ ಪದವಿಪೂರ್ವ ಮಹಾವಿದ್ಯಾಲಯ ಹುಬ್ಬಳ್ಳಿ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಆಯ್. ಎಸ್. ಹಿರೇಮಠ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗದಿಂದ ದಿನಾಂಕ 21 ರಂದು ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನ ಕ.ಸಾ.ಪ ಕಾರ್ಯಾಲಯ ಗದಗದಲ್ಲಿ ನಡೆದ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡುತ್ತ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತುಂಬಾ ವಿಶೇಷ ಸ್ಥಾನ ವಚನ ಸಾಹಿತ್ಯಕ್ಕೆ ಇದೆ. ಧರ್ಮ, ನೀತಿ,ತತ್ವ ಆಧ್ಯಾತ್ಮ, ಸಮಾಜ, ವಿಜ್ಞಾನ ಮನೋವಿಜ್ಞಾನ, ರಾಜಕೀಯ ಹೀಗೆ ಪರಿಶುದ್ಧ ಜೀವನಕ್ಕೆ ಬೇಕಾದ ಎಲ್ಲ ಸಂಗತಿಗಳೂ ಅಡಕವಾಗಿವೆ. ಕಳಬೇಡ ಕೊಲಬೇಡ ಎನ್ನುವ ವಚನ ಪ್ರತಿಯೊಬ್ಬ ಪರಿಪೂರ್ಣ ವ್ಯಕ್ತಿ ಪಾಲಿಸಬೇಕಾದ ಸಪ್ತ ಸೂತ್ರಗಳಾಗಿವೆ. ‘ಬೇಡ’ ಎನ್ನುವ ಎಲ್ಲ ಸಂಗತಿಗಳೂ ದೌರ್ಬಲ್ಯಗಳು ಅವುಗಳನ್ನು ಗೆಲ್ಲುವುದೇ ಸವಾಲು. ಜ್ಞಾನದ ಬಲದಿಂದ ಅಜ್ಞಾನದ ಕೇಡು ಎನ್ನುವಲ್ಲಿ ಜ್ಯೋತಿ ಎಂಬುದು ಕೇವಲ ಹೊರಗಿನ ಬೆಳಕಲ್ಲ ಅದು ಒಳಗಿನ ಅರಿವು, ಸಮಾಜದ ವಿಕಸನವಾಗಬೇಕಾದರೆ ವ್ಯಕ್ತಿ ವಿಕಸನವಾಗಬೇಕು ‘ನಿನ್ನ ಒಡವೆ ಎಂಬುದು ಜ್ಞಾನರತ್ನವಾಗಿದೆ’ ಇಳೆ-ಬೆಳೆ-ಗಾಳಿ ದೇವನ ಕೊಡುಗೆಯಾಗಿದೆ ನಾವು ನಿರ್ಮೋಹಿಗಳಾಗಿ ಬದುಕಬೇಕೆಂಬುದನ್ನು ಆದ್ಯ ವಚನಕಾರ ದೇವರ ದಾಸಿಮಯ್ಯ ಬಸವಣ್ಣ, ಅಲ್ಲಮ-ಅಕ್ಕ-ಅಣ್ಣ ಮತ್ತಿತರ ಶರಣರು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಪರಿಯನ್ನು ವಿವರಿಸಿದ್ದಾರೆಂದರು.
ವೇದಿಕೆ ಮೇಲೆ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪ್ರೊ.ಆಯ್,ಎಸ್,ಹಿರೇಮಠ ಕೆ.ಜಿ.ವ್ಯಾಪಾರಿ ಶಿವಾನಂದ ಗಿಡ್ನಂದಿ ಕಿಶೋರಬಾಬು ನಾಗರಕಟ್ಟಿ ಡಾ.ದತ್ತಪ್ರಸನ್ನ ಪಾಟೀಲ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿ ವಿವೇಕಾನಂದಗೌಡ ಪಾಟೀಲ ಮಾತನಾಡಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20,21 ಹಾಗೂ 22 ರಂದು ಮಂಡ್ಯದಲ್ಲಿ ಜರುಗಲಿದ್ದು ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಗದಗ ಜಿಲ್ಲೆಯಲ್ಲಿ ದಿ:28 ಹಾಗೂ 29 ರಂದು ಲಕ್ಷೆö್ಮÃಶ್ವರ-ಶಿರಹಟ್ಟಿ-ಮುಂಡರಗಿ-ಗಜೇAದ್ರಗಡ-ರೋಣ-ನರಗುAದ ಮಾರ್ಗವಾಗಿ ಗದಗ-ಬೆಟಗೇರಿಯಲ್ಲಿ ಸಂಚರಿಸಲಿದೆ. ಕನ್ನಡ ರಥವನ್ನು ಅದ್ದೂರಿಯಿಂದ ಸ್ವಾಗತಿಸಲು ತಾವೆಲ್ಲ ಸೇರಬೇಕೆಂದು ವಿನಂತಿಸಿದರು. ಅಲ್ಲದೆ ಪರಿಷತ್ತಿಗೆ ಕಾರ್ಯಕ್ರಮ ವ್ಯವಸ್ಥಿತವಾಗಿ ಜರುಗಲು 25 ಸಾವಿರ ರೂಪಾಯಿಗಳ ವೇದಿಕೆ ಪರಿಕರಗಳನ್ನು ಸಾಹಿತ್ಯ ಪೋಷಕ ಶರಣ ಅಶೋಕ ಬರಗುಂಡಿಯವರು ನೀಡಿರುವುದನ್ನು ಸ್ಮರಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಚ್.ಬೇಲೂರ. ಪ್ರಾ.ಚಂದ್ರಶೇಖರ ವಸ್ತçದ ಅಜಿತ್ ಘೋರ್ಪಡೆ ಸುರೇಶ ಕುಂಬಾರ ಡಾ.ರಾಜಶೇಖರ ದಾನರಡ್ಡಿ ಎಚ್ ಡಿ ಕುರಿ ಜಗನ್ನಾಥ ಟೀಕಂದಾರ ಸಿದ್ದಲಿಂಗೇಶ ಸಜ್ಜನಶೆಟ್ಟರ ಶೇಕಣ್ಣ ಕಳಸಾಪುರ ಬಸವರಾಜ ಗಣಪ್ಪನವರ ಜೆ ಎ ಪಾಟೀಲ ಶಿವಾನಂದ ಬಜಂತ್ರಿ ಅಶೋಕ ಸತ್ಯರಡ್ಡಿ ಎಂ ಎಂ ಶೆಟವಾಜಿ ಆರ್ ಡಿ ಕಪ್ಪಲಿ ಪರಮೇಶ್ವರ ಐರಣಿ ಆರ್ ವಿ ಕುಪ್ಪಸ್ತ ಪಿ ಸಿ ಕನಾಜ ಶರಣಪ್ಪ ಹೊಸಂಗಡಿ ರಾಜಶೇಖರ ಕರಡಿ ಎನ್ ಎಂ ಪವಾಡಿಗೌಡ್ರ ಕೆ ಎಸ್ ಪಲ್ಲೇದ ಬಸವರಾಜ ತೋಟಿಗೇರ ಡಿ ಎಸ್ ಬಾಪೂರಿ ಸತೀಶಕುಮಾರ ಚನ್ನಪ್ಪಗೌಡ್ರ ಶಶಿಕಾಂತ ಕೊರ್ಲಹಳ್ಳಿ ಮಲ್ಲಿಕಾರ್ಜುನ ನಿಂಗೋಜಿ ಶ್ರೀಮತಿಯರಾದ ರತ್ನಕ್ಕ ಪಾಟೀಲ ಶಾಂತಲಾ ಹಂಚಿನಾಳ ಶೈಲಜಾ ಗಿಡ್ನಂದಿ ಶಾಂತಾ ಗಣಪ್ಪನವರ ರತ್ನಾ ಪುರಂತರ ಶಾರದಾ ಬಾಣದ ಹಾಜರಿದ್ದರು.
ಪ್ರಾರಂಭದಲ್ಲಿ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಗೌರವ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ಸರ್ವರನ್ನು ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು. ಡಾ.ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.