ಜಿಲ್ಲೆ

ಕಸಾಪ! ಚನ್ನವಿರಶಾಸ್ತ್ರೀ ಹಿಡ್ಕಿಮಠ ದತ್ತಿ ಉಪನ್ಯಾಸ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ಗದುಗಿನ ವೀರೇಶ್ವರ ಪುಣ್ಯಾಶ್ರಮ ಸಂಗೀತ ೇತ್ರವನ್ನು ಶ್ರೀಮಂತಗೊಳಿಸಿದೆ. ಅಂಧ ಅನಾಥ ಮಕ್ಕಳಿಗೆ ಅನ್ನ ಆಶ್ರಯವನ್ನು ನೀಡಿ ಸ್ವಾವಲಂಬಿ ಜೀವನವನ್ನು ನಡೆಸುವ ದಿಸೆಯಲ್ಲಿ ಆಸರೆಯಾಗಿದೆ. ಪಂಚಾರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳು ತಮ್ಮ ಅಂತಶಕ್ತಿಯಿಂದ ಈ ೇತ್ರವನ್ನು ಬೆಳಗಿದ್ದಾರೆ ಎಂದು ಕಲಾವಿಕಾಸ ಪರಿಷತ್ತಿನ ಅಧ್ಯ ಚನ್ನವಿರಸ್ವಾಮಿ ಹಿರೇಮಠ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಪಿಪಿಜಿ ಶಿಣ ಮಹಾವಿದ್ಯಾಲಯದಲ್ಲಿ ಜರುಗಿದ ಚನ್ನವಿರಶಾಸ್ತ್ರಿ ಹಿಡ್ಕಿಮಠ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು, ಬಸರೀಗಿಡದ ವೀರಪ್ಪನವರು ಸ್ಥಳದಾನದ ಮೂಲಕ ವೀರೇಶ್ವರ ಪುಣ್ಯಾಶ್ರಮ ಸ್ಥಾಪನೆಗೆ ಕಾರಣರಾದವರು. ಅದರ ಪರಿಣಾಮದಿಂದ ಸಾವಿರಾರು ವಿದ್ಯಾಥಿರ್ಗಳು ಶಿಣ ಪಡೆಯುವಂತಾಯಿತು ಎಂದು ತಿಳಿಸಿದರು.

ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಭಕ್ತರು ನೀಡುವ ಕಾಣಿಕೆಗಳನ್ನು ಸುವ್ಯವಸ್ಥಿತವಾಗಿ ಸಂಟಿಸಿ ಆಶ್ರಮದ ಬೆಳವಣಿಗೆಯ ಹಿನ್ನೆಲೆಯಲ್ಲಿ ಚನ್ನವಿರಶಾಸ್ತ್ರೀಗಳ ಕೊಡುಗೆ ಅನುಮಪವಾದುದು ಎಂದು ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಅವರು ಮಾತನಾಡಿ, ಸಂಗೀತ, ಸಾಹಿತ್ಯ, ರಂಗಭೂಮಿಗೆ ವಿಶೇಷ ಚೈತನ್ಯವನ್ನು ನೀಡಿದ ವೀರೇಶ್ವರ ಪುಣ್ಯಾಶ್ರಮ ವಿಕಲಚೇತನರ ಆಶಾಕಿರಣವಾಗಿದೆ. ಮನುಷ್ಯನಿಗಿರುವ ಕೊರತೆಗಳನ್ನು ಯಶಸ್ಸಿನಲ್ಲಿ ಮೆಟ್ಟಿಲುಗಳನ್ನಾಗಿಸಿಕೊಂಡು ಜೀವನದಲ್ಲಿ ಹೇಗೆ ಸಲತೆಯನ್ನು ಸಾಧಿಸುಬೇಕೆಂಬುದನ್ನು ಪ್ರಾಯೋಗಿಕವಾಗಿ ತೋರಿಸಿದೆ. ಈ ದಿಸೆಯಲ್ಲಿ ಪಂಚಾರಿ ಹಾಗೂ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.

ಪಂಚಾರಯ್ಯ ಹಿಡ್ಕಿಮಠ, ಡಾ. ಅನಂತ ಶಿವಪೂರ, ಕಿಶೋರಬಾಬು ನಾಗರಕಟ್ಟಿ, ಆರ್​. ಡಿ. ಕಪ್ಪಲಿ, ಡಿ. ಎಸ್​. ಬಾಪುರಿ, ಚನ್ನವಿರೇಶ ಕವಲೂರ, ಪ್ರೊ. ಡಿ. ಎಸ್​. ಗಾಳಿ, ರಾವೇಂದ್ರ ತೆಗ್ಗಿನಮನಿ ಇತರರು ಇದ್ದರು.