ಜಿಲ್ಲೆ

ಕಪ್ಪತ್ತಗಿರಿಯಲ್ಲಿ ಪರಿಸರೋತ್ಸವ

Gadag - Shivanand Hiremath

ಗದಗ: ಕಪ್ಪತ್ತಗಿರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆಯ ವತಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ಕಪ್ಪತಗುಡ್ಡದಲ್ಲಿರುವ ಕಪ್ಪತ್ತಮಲೇಶ್ವರ ದೈವಿ ವನ ಅರಣ್ಯ ಇಲಾಖೆಯಲ್ಲಿ ಪರಿಸರೋತ್ಸವ ಕಾರ್ಯಕ್ರಮ ಜರಗಿತು
ಕುಮಾರಿ ಸೌಮ್ಯ ಹಿರೇಮಠ ಅವಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಎಸ್ ಕೆ ಆಡಿನ ಅವರು ಕಪ್ಪತ್ತಗಿರಿ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು ಸಂಸ್ಥಾಪಕ ಅಧ್ಯಕ್ಷರ ಆಸೆಯಂತೆ ಪರಿಸರ ದಿನಾಚರಣೆ ಕಾರ್ಯಕ್ರಮ ಪ್ರತಿ ವರ್ಷ ಕಪ್ಪತ್ತಗಿರಿಯಲ್ಲಿ ನಡೆಯುವುದು ವೇದಿಕೆಯ ಮುಖಾಂತರ ಮಾಡಿದ ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ತಿಳಿಸಿದರು ಎಲೆ ಮರೆಯ ಕಾಯಿಯಂತೆ ಉಳಿದುಕೊಂಡ ಕವಿ ಕಲಾವಿದರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಪ್ರಯತ್ನವನ್ನು ಕಪ್ಪತ್ತಗಿರಿ ಬಳಗ ಇಲ್ಲಿಯವರಿಗೂ ಮಾಡಿಕೊಂಡು ಬಂದಿದೆ ನಿಮ್ಮೆಲ್ಲರ ಸಹಕಾರ ಸದಾ ಕಾಲ ನಮ್ಮ ವೇದಿಕೆಯ ಮೇಲಿರಲಿ ಎಂದು ಹೇಳಿದರು

ಉಪನ್ಯಾಸದ ನುಡಿಗಳನ್ನಾಡಿದ ಶ್ರೀ ಮತಿ ಪ್ರೀಯಾಂಕ ನಡುವಿನ ಮನೆಯವರು ಪರಿಸರ ಉಳಿಸುವುದರ ಕುರಿತು ಹಲವಾರು ವಿಷಯಗಳನ್ನು ಹಂಚಿಕೊಂಡರು ಪರಿಸರ ನಮಗೆ ಎಷ್ಟು ಅವಶ್ಯಕತೆ ಇದೇ ಎನ್ನುವುದನ್ನು ಹಲವಾರು ಜೀವಂತ ಉದಾಹರಣೆಗಳನ್ನು ಕೊಟ್ಟು ಪರಿಸರ ಜಾಗೃತಿ ಮೂಡಿಸಿದರೂ ನಗರದ ಅಗಲಿಕರಣದಿಂದ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ ಪರಿಸರದ ಹಸಿರು ಕಡಿಮೆಯಾದರೆ ನಮ್ಮ ಉಸಿರಾಟದ ಆಯಸ್ಸು ಕೂಡ ಕಡಿಮೆಯಾಗುವುದು ಸಾಧ್ಯವಾದಷ್ಟು ನಾವೆಲ್ಲರು ಪರಿಸರ ಉಳಿಸಿಕೊಳ್ಳುವುದಕ್ಕಾಗಿ ಜವಾಬ್ದಾರಿಯನ್ನು ಹೊತ್ತುಕೊಳ್ಳೋಣ ಮುಂದಿನ ತಲೆ ಮಾರಿಗೆ ಮಳೆ ಬೆಳೆ ಸರಿಯಾದ ಕಾಲ ಕಾಲಕ್ಕೆ ಆಗುವಂತೆ ಈಗಿನಿಂದಲೇ ನೋಡಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ ಎಂದರು ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮತಿ ಚಂದ್ರಕಲಾ ಇಟಗಿಮಠ ಇವರು ಸದಾ ಕ್ರೀಯಾ ಶೀಲರು ವೇದಿಕೆಯ ಮುಖಾಂತರ ಉತ್ತಮ ಕಾರ್ಯಗಳನ್ನು ಮಾಡುತ್ತಾ ನಮಗೆಲ್ಲರಿಗೂ ಆದರ್ಶವಾಗಿದ್ದಾರೆ ಒಬ್ಬ ಮಹಿಳೆಯಾಗಿ ರಾಜ್ಯದ ತುಂಬಾ ವೇದಿಕೆಯನ್ನು ಹುಟ್ಟು ಹಾಕಿದ್ದ ಇವರ ಕಾರ್ಯ ಸ್ಲ್ಯಾಘಾನಿಯ ಹೆಮ್ಮೆಯಾಗುತ್ತೆ ಎಂದರು 

ಉದ್ಘಾಟನೆ ಮಾಡಿ ಮಾತನಾಡಿದ ಡಾ. ವೆಂಕಟೇಶ್ ರಾಠೋಡ್ ಅವರು ವಾತಾವರಣ ಮತ್ತು ಮನುಷ್ಯನ ಸ್ಥಿತಿ ಆರೋಗ್ಯ ಕೆಟ್ಟ ಮೇಲೆ ಜನರು ನಮ್ಮ ಹತ್ತಿರ ಬರುತ್ತಾರೆ ಡಾಕ್ಟರ್ ಹತ್ತಿರ ಬರುವ ಮೊದಲೇ ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿ ಇಟ್ಟುಕೊಂಡರೆ ನಮ್ಮ ಆರೋಗ್ಯ ಕೂಡ ಸರಿಯಾಗಿ ಇರುತ್ತದೆ ಪರಿಸರ ಮಾನವನಿಗೆ ಒಂದು ಆರೋಗ್ಯ ಕೊಂಡಿ ಇದನ್ನು ಕಳಚದಂತೆ ನೋಡಿಕೊಳ್ಳೋಣ ಎಂದರು ಇನ್ನೂ ಹೆಚ್ಚುಹೆಚ್ಚು ಕಪ್ಪತ್ತಗಿರಿ ಫೌಂಡೇಶನ್ ನಿಂದ ಇಂತಹ ಜಾಗತಿಕ ಕಾರ್ಯಗಳು ಆಗಲಿ ಅವರೊಟ್ಟಿಗೆ ನಾವು ಕೈ ಜೋಡಿಸುತ್ತೇವೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ಮತಿ ಅರುಣಾ ನರೇಂದ್ರ ಅವರು, ನಾವು ಒಬ್ಬ ಮಹಿಳೆ ಆದರೆ ಚಂದ್ರಕಲಾ ಮೇಡಂ ಅವರು ಇಂತಹ ರಾಜ್ಯಮಟ್ಟದ ಸಂಸ್ಥೆ ಹುಟ್ಟುಹಾಕಿ ಇಷ್ಟೆಲ್ಲಾ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಅವರೊಬ್ಬ ದಿಟ್ಟ ಚಲಗಾತಿ ಸ್ವಾಭಿಮಾನದ ಹೆಣ್ಣು ಎಂದು ಹಾಗೂ ಇವರಿಗೆಲ್ಲ ಸಹಕಾರ ನೀಡುತ್ತಿರುವ ಪ್ರತಿಯೊಬ್ಬ ಫೌಂಡೇಶನ್ ಸದಸ್ಯರಿಗೂ ಧನ್ಯವಾದ ಹೇಳಿದರು 

ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ಪಂಚಯ್ಯ ಹಿರೇಮಠ ಅವರು ಚಿಕ್ಕದಾಗಿ ಚಿಕ್ಕದಾಗಿ ಮಾತನಾಡಿದರು ಧರ್ಮೋ ರಕ್ಷತಿ ರಕ್ಷಿತಃ ಅನ್ನುವುದು ಒಂದು ಕಡೆ ಆದರೆ ವೃಕ್ಷೋ ವೃಕ್ಷತಿ ವೃಕ್ಷಿತಃ ಎನ್ನೋದು ಪಾಲನೆಯಾಗಬೇಕು ಸುದ್ದ ಗಾ ಪರಿಸರದಲ್ಲಿ ಇಂದು ಪರಿಸರೋತ್ಸವ ಆಚರಣೆ ಮಾಡಿದ್ದು ಸಂತಸದ ಕಾರ್ಯ ಇಲ್ಲಿಯ ಗಾಳಿಯ ಸೇವನೆಯಿಂದ ಒಬ್ಬೊಬ್ಬರಿಗೂ ಹತ್ತು ಹತ್ತು ವರ್ಷ ಆಯಸ್ಸು ಹೆಚ್ಚಾಗುತ್ತದೆ ಎಂದು ಕಪ್ಪತ್ತಗಿರಿಯ ನೈಜ ವರ್ಣನೆ ಮಾಡಿದರು. 

ಅತಿಥಿಗಳಾಗಿ ಮಾತನಾಡಿದ ಶ್ರೀ ಐ ಕೆ ಕಮ್ಮಾರ ಅವರು ಒಬ್ಬ ಹೆಣ್ಣು ಮಗಳು ಮನಸ್ಸು ಮಾಡಿದರೆ ಏನೆಲ್ಲಾ ಮಾಡುತ್ತಾಳೆ ಎನ್ನೋದಕ್ಕೆ ಇಟಗಿಮಠ ಅವರು ಸಾಕ್ಷಿ ಮುಂದಿನ ದಿನಗಳಲ್ಲಿ ಹೀಗೆ ಕವಿಗೋಷ್ಠಿ ಆಯೋಜಿ ಪ್ರಥಮ ದ್ವಿತೀಯ ತೃತೀಯ ಬುಮಾನವನ್ನು ಆಯ್ಕೆ ಮಾಡಿ ಅದರ ನಿರ್ವಹಣೆ ಸಹಕಾರ ನಾನು ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಮತಿ ಚಂದ್ರಕಲಾ ಮ ಇಟಗಿಮಠ ಇವರು ಮಾತನಾಡಿ ಮೂರು ದಿನದಿಂದ ಬಿಡದೆ ಸುರಿಯುತ್ತಿರುವ ಮಳೆಯಿದ್ದರು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಎಲ್ಲರೂ ಆಗಮಿಸಿದ್ದು ಸಂತಸ ತಂದಿದೆ ಇದರ ಮುಂದೆ ನಮ್ಮ ಶ್ರಮ ಏನೂ ಅಲ್ಲ ಹಾಗೂ ಕಾರ್ಯಕ್ರಮ ಹೇಗೆ ಮಾಡಬೇಕು ಅನ್ನುವ ಚಿಂತೆ ಎಲ್ಲಿದ್ದಾಗ ಅಂದು ಕಪ್ಪತ್ತಗಿರಿಯಲ್ಲಿ ಮಳೆ ಬರದಂತೆ ಕಾಯ್ದು ಒಳ್ಳೆಯ ಕಾರ್ಯಕ್ಕೆ ಪರಮಾತ್ಮನು ಸಹಕಾರಿಯಾಗುತ್ತಾನೆ ಎನ್ನೋದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ ಎಂದರು ಇದರ ಯಶಸ್ಸು ಶೇಯಸ್ಸು ನನಗೆ ಒಬ್ಬಳಿಗೆ ಅಲ್ಲ ನಮ್ಮ ಜೊತೆ ಕೈ ಜೋಡಿಸುವ ನಮ್ಮ ಬಳಗದ ಸರ್ವರಿಗೂ ಸಲ್ಲಬೇಕೆಂದು ಎಲ್ಲರಿಗೂ ಧನ್ಯತೆ ತಿಳಿಸಿದರು.

ಬೆಂಗಳೂರಿನ ಸಾಹಿತ್ಯ ಅಕಾಡೆಮಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀ ವ್ಹಿ.ಹರೀಶಕುಮಾರ ಹಾಗೂ ಗದಗ ನ ಪಿ ಪಿ ಜಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಸವರಾಜ ಗಾಣಿಗೇರ ಇವರಿಗೆ ಸೇವಾ ನಿವೃತ್ತಯ ವಿಶೇಷ ಸನ್ಮಾನವನ್ನು ವೇದಿಕೆಯ ಪರವಾಗಿ ಮಾಡಲಾಯಿತು.

ಹಲವಾರು ರಂಗದಲ್ಲಿ ಸಾಧನೆ ಮಾಡಿದ ಹತ್ತು ಜನ ಸಾಧಕರನ್ನು ಗುರುತಿಸಿ ಅವರಿಗೆ ರಾಜ್ಯ ಮಟ್ಟದ ಸೇವಾ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ವೇದಿಕೆಯ ಪರವಾಗಿ ಗೌರವಿಸಲಾಯಿತು.

 ಕವಿಗಳು ಹಾಗೂ ವಿಮರ್ಶಕರಾದ ಶ್ರೀ ಯಲ್ಲಪ್ಪ ಹರ್ನಾಳಗಿಯವರು ಕವಿತೆ ಓದುವುದರ ಮೂಲಕ ಕವಿಗೋಷ್ಠಿಯನ್ನು ಉದ್ಘಾಟನೆ ಮಾಡಿದರೂ ವಿವಿದ ಜಿಲ್ಲೆ ತಾಲೂಕಿನಿಂದ ಆಗವಿಸಿದ ಮೂವತ್ತಕ್ಕೂ ಹೆಚ್ಚು ಲೇಖಕ ಲೇಖಕಿಯರು ಪರಿಸರ ಜಾಗೃತಿಯ ಕವಿತೆಗಳನ್ನು ವಾಚನ ಮಾಡಿದರೂ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಶ್ರೀ ಮರುಳು ಸಿದ್ದಪ್ಪ ದೊಡ್ಡಮನಿಯವರು ಕವಿಗಳಿಗೆ ಕವಿತೆ ಕಟ್ಟುವ ಕಿವಿ ಮಾತುಗಳನ್ನು ಹೇಳಿ ಶಾಹಿರಿಯನ್ನು ಹೇಳಿದರು

ಪರಿಸರ ಉಳಿಸುವ ನಿಟ್ಟಿನಲ್ಲಿ ಬೀಜ ಬಿತ್ತನೆ ಮಾಡಲಾಯಿತು ಹಲವಾರು ಮರದ ಬೀಜಗಳನ್ನು ಸಂಗ್ರಹಿಸಿ ಮಣ್ಣಿನ ಉಂಡೆ ಮಾಡಿ ಅದರಲ್ಲಿ ಬೀಜವನ್ನು ಇಟ್ಟು ಖಾಲಿ ಇರುವ ಅರಣ್ಯ ಪ್ರದೇಶದಲ್ಲಿ ಎರೆಡು ನೂರಕ್ಕೆ ಹೆಚ್ಚು ಮಣ್ಣಿನ ಉಂಡೆಗಳನ್ನು ಕಪ್ಪತ್ತಗಿರಿ ಫೌಂಡೇಷನ್ ವೇದಿಕೆಯ ವತಿಯಿಂದ ಎಸೆಯಲಾಯಿತು ಪರಿಸರ ಉಳಿಸಿ ಕಾಡು ಬೆಳಿಸಿ ಎನ್ನುವ ಸಂದೇಶದೊಂದಿಗೆ
ಕಾರ್ಯಕ್ರಮ ಯಶಸ್ವಿಯಾಯಿತು.