ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಹೆಸರಾದ ಕಪ್ಪತ್ತಗಿರಿ ಕಪೋತ ಅಂದರೆ ಪಾರಿವಾಳಗಳ ಹಿಂಡುಗಳನ್ನು ಹೊಂದಿದ ಪ್ರದೇಶ. ಇದರಿಂದ ಕಪೋತ ಮತ್ತು ಗಿರಿ ಎರಡೂ ಸೇರಿ ಕಪ್ಪತ್ತಗುಡ್ಡವಾಗಿದೆ. ಇಲ್ಲಿ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಗಿಡಮೂಲಿಗಳನ್ನು ಕಾಣುತ್ತೇವೆ. ದೇವರು ಮನುಷ್ಯನನ್ನು ಸೃಷ್ಟಿಸಿದಂತೆ ಅವನಿಗೆ ಬರುವ ರೋಗಾದಿಗಳ ನಿವಾರಣೆಗೆ ಗಿಡಮೂಲಿಕೆಗಳ ಸಸ್ಯ ಸಂಪತ್ತನ್ನು ನಿರ್ಮಿಸಿದ್ದಾನೆ ಎಂದು ಕವಿ ಮಂಜುನಾಥ ಡೋಣಿ ಮಾತನಾಡಿದರು.
ಶ್ರೀ ಶರಣಮ್ಮನವರ ಧ್ಯಾನ ಯೋಗಾಶ್ರಮ ಜಲ್ಲಿಗೇರಿ, ನವರಸ ಕಲಾ ಸಂಘ, ಬೆಟಗೇರಿ, ನಿರ್ಮಲ ಸೇವಾ ಸಂಸ್ಥೆ ಹಾಗೂ ನಯನತಾರ ಕಲಾಸಂಘ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಯೋಗ ಶಿಬಿರದ ಶಿಬಿರಾರ್ಥಿಗಳಿಂದ ಶ್ರೀ ಶರಣಮ್ಮನ ಧ್ಯಾನಯೋಗಾಶ್ರಮ, ಜಲ್ಲಿಗೇರಿಯಲ್ಲಿ ಕಪ್ಪತ್ತಗುಡ್ಡದ ಸಸ್ಯಸಿರಿ ಹಾಗೂ ವಿಶ್ವ ತಾಯಂದಿರ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಜುನಾಥ ಡೋಣಿ ತಾಯಿಯಿಂದ ನಾವು ಜೀವ ಪಡೆದು ನಮ್ಮ ಕಾಯಕ್ಕೆ ಮತ್ತು ಬುದ್ಧಿಗೆ ಶಕ್ತಿ ಬರಯುವವರೆಗೂ ಬೆಳೆಸಿದ ತಾಯಿಗೆ ನಾವು ಚಿರಋಣಿಯಾಗಿರಬೇಕು. ಆಧುನಿಕದ ಆಡಂಬರದಲ್ಲಿ ಹೆತ್ತವರನ್ನು ಕಡೆಗಣಿಸುವುದು ಪಾಪ ಮಾಡಿ ನರಕಕ್ಕೆ ಹೋಗುವುದಂತೂ ನಿಶ್ಚಿತ. ಕಪ್ಪತ್ತಗುಡ್ಡ ಕಲ್ಪವೃಕ್ಷ, ಕಾಮಧೇನು. ನಮಗೆ ಬೇಕಾದ ವಸ್ತುಗಳೆಲ್ಲಾ ದೊರಕುತ್ತವೆ. ಆದ್ದರಿಂದ ಕಪ್ಪತ್ತಗಿರಿ ನಮ್ಮ ಕರುನಾಡಿನ ಸಸ್ಯಸಂಪತ್ತನ್ನು ಹೊಂದಿದ ಸುಂದರ ಗಿರಿ ಎಂದು ಮಾತನಾಡಿದರು. ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದ ಡಾ. ರಾಜೇಂದ್ರ ಗಡಾದ ಕಪ್ಪತ್ತಗಿರಿಯ ಸಸ್ಯಸಂಪತ್ತು ಬೆಂಕಗಾಹುತಿಯಾಗುತ್ತಿದೆ. ಅನ್ನ, ಚಿನ್ನ, ಸಂಪತ್ತನ್ನು ಹೊಂದಿದ ಕಪ್ಪತ್ತಗುಡ್ಡ ಆರೋಗ್ಯಸಂಜೀವಿನಿ. ಅದರಂತೆ ಮಾನವ ನಿರ್ಮಿತ ಔಷಧ ಪಡೆಯುವುದಕ್ಕೆ ಉತ್ಸುಕರಾಗಿದ್ದೇವೆ. ಅದನ್ನು ಬಿಟ್ಟು ದೇವರು ನಿರ್ಮಿಸಿದ ವನಸ್ಪತಿಯನ್ನು ಬಳಕೆ ಮಾಡಿದರೆ ಸಮೃದ್ಧ ಆರೊಗ್ಯ ಮತ್ತು ಮಾನಸಿಕ, ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯ ಮೇಲೆ ಆಶ್ರಮದ ಪ್ರಧಾನ ಸಂಚಾಲಕರಾದ ಚನ್ನಬಸವ ಗುರೂಜಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ನಿರ್ಮಲಾ ತರವಾಡೆ ಉಪಸ್ಥಿತಿ ವಹಿಸಿದ್ದರು. ಕಳಕಪ್ಪ ಜಲ್ಲಿಗೇರಿ ಕಪ್ಪತ್ತಗುಡ್ಡದ ಸಸ್ಯಸಿರಿ ಕುರಿತು ಉಪನ್ಯಾಸ ಮಾಡಿದರು. ಮುರಳೀಧರ ಸ್ಯಾವಿ, ಬಸವರಾಜ ಗೂಳರೆಡ್ಡಿ, ಶ್ರೀಮತಿ ಸುನಿತಾ ಕುಬೇರಸಿಂಗ ದೊಡ್ಡಮನಿ ಉಪಸ್ಥಿತರಿದ್ದರು. ಪ್ರೊ. ಬಸವರಾಜ ನೆಲಜೇರಿ ನಿರೂಪಿಸಿ ವಂದಿಸಿದರು. ಗಣೇಶ ಕಬಾಡಿ, ಧರ್ಮೇಂದ್ರ ಇಟಗಿ, ದ್ಯಾಮಣ್ಣ ಉಗಲಾಟ, ಸುನಿತಾ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
೯೫೧೩೧ ೪೨೯೨೮