ಜಿಲ್ಲೆ

ಚಿಲ್ಲಾಳೇಶ್ವರ ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ

Gadag - Shivanand Hiremath

ಗದಗ: ಜಾತೀಯತೆ ತೊಲಗಿಸಿ, ಸಮಾನತೆ ಸಾರಲು ವಿಶ್ವಕ್ಕೆ ಸಂದೇಶ ಸಾರಿದ ಕನಕದಾಸರ ಕೀರ್ತನೆಗಳನ್ನು ನಾವೆಲ್ಲರೂ ಕೇಳಿ ಅವುಗಳನ್ನು ಜೀವನದಲ್ಲಿ ಪಾಲಿಸಿ, ಅನುಸರಿಸಬೇಕು ಎಂದು ಶಿಕ್ಷಕಿ ನಾಗರತ್ನ ಕುಸುಗಲ ಹೇಳಿದರು.

ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪಿಠದ ತೋಂಟದ ಚಿಲ್ಲಾಳೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಭಕ್ತ ಕನಕದಾಸರ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕನಕದಾಸರ ಹುಟ್ಟು, ಅವರ ಬಾಲ್ಯ, ಅವರ ಸಮಗ್ರ ಜೀವನ ಚರಿತ್ರೆಯನ್ನು ಮತ್ತು ಅವರ ದೈವ ಭಕ್ತಿಯನ್ನು ಅನುಸರಿಸಬೇಕು ಎಂದರು.

ಶಾಲಾ ಮುಖ್ಯೋಪಾದ್ಯಾಯ ಎಸ್​. ಟಿ. ಕುರಹಟ್ಟಿ ಮಾತನಾಡಿದರು.

ಮಾಧವಿ ಪಲ್ಲೇದ, ಕಾತಿರ್ಕ ರೋಣದ, ಮಲ್ಲಿಕಾರ್ಜುನ ಇಟಗಿ, ಸೋನಾ ಪವಾರ ಇತರರು ಇದ್ದರು.