ಜಿಲ್ಲೆ

ಕಳಸಾಪೂರ ಬಸವಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ

Gadag - Shivanand Hiremath

ಗದಗ: ತಾಲೂಕಿನ ಕಳಸಾಪೂರ ಗ್ರಾಮದ ಬಸವಕೇಂದ್ರದ ಶಿವಾನುಭವ ಕಾರ್ಯಕ್ರಮದಲ್ಲಿ ಶಿಕ್ಷಕರ ದಿನಾಚರಣೆ ಮೊದಲಿಗೆ ಸಾಮೂಹಿಕ ಪ್ರಾರ್ಥನೆ ಜರುಗಿತು.

ನಂತರ ಮಾಜಿ ರಾಷ್ಟçಪತಿ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಭಾವಚಿತ್ರಕ್ಕೆ ವಚನಗೋಷ್ಠಿಗಳೊಂದಿಗೆ ಸಾಮೂಹಿಕವಾಗಿ ಪುಷ್ಪವೃಷ್ಟಿಗೈಯ್ಯಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಗಣ್ಯರಾದ ಶರದರಾವ ಹುಯಿಲಗೋಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿ. ಬಿ. ಪಲ್ಲೇದ ಸ್ಪಂದನಾ ಸಂಸ್ಥೆಯ ಅಧ್ಯಕ್ಷರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಿಂಗನಗೌಡ ಎನ್. ಪಾಟೀಲ ನಿವೃತ್ತ ಮುಖ್ಯೋಪಾಧ್ಯಾಯರು ಗದಗ, ಬಸವರಾಜ ಕಣವಿ, ಮಂಜನಗೌಡ ರಾಮನಗೌಡರ,   ಕಪ್ಪತ್ತಗಿರಿ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ಇಟಗಿಮಠ, ಶಿವಪ್ಪ ತಳವಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಪ್ರಾಸ್ತಾವಿಕ ನುಡಿ ಸಿ. ಬಿ. ಪಲ್ಲೇದ ಮಾತನಾಡುತ್ತ ಮಾಜಿ ರಾಷ್ಟçಪತಿಗಳಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ತಮ್ಮ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿದರು ಅವರ ಜನ್ಮದಿನ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ವಿದ್ಯಾರ್ಥಿ ಬದುಕಿನಲ್ಲಿಯೂ ಉತ್ತಮ ಮಾರ್ಗದರ್ಶನ ನೀಡುತ್ತ ಸಮಾಜಕ್ಕೆ ಜ್ಞಾನದ ಬೆಳಕು ನೀಡುತ್ತಿರುವ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಲಿಂಗನಗೌಡ ಎನ್. ಪಾಟೀಲ ಇವರನ್ನು ವಚನಗೋಷ್ಠಿಗಳೊಂದಿಗೆ ಪುಷ್ಪವೃಷ್ಟಿಗೈಯ್ಯುತ್ತ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರು ಮಾತನಾಡುತ್ತ ಕಳಸಾಪೂರ ಗ್ರಾಮದಲ್ಲಿ ಬಸವಕೇಂದ್ರ ಹಾಗೂ ಕಪ್ಪತ್ತಗಿರಿ ಸಾಹಿತ್ಯ ವೇದಿಕೆ ಇವರೆಡೂ ಸಂಸ್ಥೆಗಳು ಗ್ರಾಮದ ಕಣ್ಣುಗಳು ಇದ್ದ ಹಾಗೆ ಅದರಂತೆ ಈ ಕಾರ್ಯಕ್ರಮದಲ್ಲಿ ನನ್ನನ್ನು ಗುರುತಿಸಿ ಸನ್ಮಾನಿಸಿ ಗೌರವಿಸುತ್ತಿರುವುದು ಸಂತೋಷವನ್ನುAಟುಮಾಡಿದೆ ಅದರಂತೆ ಗ್ರಾಮದ ಗುರುಹಿರಿಯರು, ನಾವುಗಳು ಈ ಸಂಸ್ಥೆಗಳ ಸಹಾಯ, ಸಹಕಾರ ನೀಡಿ ಉತ್ತಮ ಸಂಸ್ಥೆ ಮಾದರಿಯಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.

ಅಕ್ಷರದ ಅವ್ವ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆಯವರು ಅಕ್ಷರ ಕಲಿಸಿ ಬರುವಾಗ ಗಿಡಮರಗಳ ಮತ್ತು ಗೋಡೆಯ ಮರೆಯಲ್ಲಿ ನಿಂತು, ಕೊಳೆತ ಟೊಮೆಟೊ, ಕಲ್ಲು ಹೊಡೆಯುತ್ತಾರೆ. ಸಾವಿತ್ರಿಯವರ ಮನಸ್ಸು ಬಹಳ ನೋವುತ್ತದೆ. ಅಕ್ಷರ ಕಲಿತರನೇ ಸಮಾಜದಲ್ಲಿ ಎಷ್ಟೊಂದು ಶಿಕ್ಷೆ ಯಾಕೆ ಎಂಬ ಆಲೋಚನೆ ಮಾಡುತ್ತಾರೆ. ಎಷ್ಟು ಗಟ್ಟಿ ಮನಸ್ಸಿನಿಂದ ಅಕ್ಷರ ಕಲಿಸಲು ಮುಂದಾಗುತ್ತಾರೆ. ದಾಳಿ ಇನ್ನಷ್ಟು ಹೆಚ್ಚುತ್ತದೆ. ಒಮ್ಮೆ ಸನಾತನಿಗಳು ಹೊಡೆದ ಕಲ್ಲಿನಿಂದ ಅವಳ ಹಣೆಗೆ ಗಾಯವಾಗಿ ರಕ್ತ ಸುರಿಯುತ್ತದೆ. ಸಾವಿತ್ರಿಬಾಯಿಯು ಅಂದೇ ಪ್ರತಿಜ್ಞೆಗೈದು ಹೇ ದ್ರೋಹಿಗಳೇ ನಿಮ್ಮ ದಾಳಿಯಿಂದ ಹಿಮ್ಮೆಟ್ಟುವುದಿಲ್ಲ. ಒಂದು ಹನಿರಕ್ತಕ್ಕೆ ಒಂದೊAದು ಶಾಲೆ ತೆರೆಯುತ್ತೇನೆ ಎಂದು ಗುಡುಗಿದರು ಎಂದು ತಮ್ಮ ಅಕ್ಷರ ಜ್ಞಾನಕ್ಕಾಗಿ ಹೋರಾಡಿ ಮೊದಲ ಶಿಕ್ಷಕಿÀ ಸಾವಿತ್ರಿಬಾಯಿ ಪುಲೆ ಇತಿಹಾಸ ಪುಟಗಳಲ್ಲಿ ಅಜರಾಮವಾಗಿದ್ದಾರೆ. ಅವರ ಆದರ್ಶಗಳನ್ನು ಶಿಕ್ಷಕರು, ಮತ್ತು ನಾವೆಲ್ಲ ನಮ್ಮ ಜೀವನದ ಅಳವಡಿಸಿಕೊಂಡು ಹೋಗೋಣ ಎಂದು ಬಸವಕೇಂದ್ರದ ಕಾರ್ಯಾಧ್ಯಕ್ಷರು ಮಲ್ಲಿಕಾರ್ಜುನ ಖಂಡಮ್ಮನವರ ಕರೆ ನೀಡಿದರು.

ಕೊನೆಗೆ ಸಮಾರೋಪ ಸಮಾರಂಭದ ಅಧ್ಯಕ್ಷೀಯ ಭಾಷಣ ಮಾಡುತ್ತ ಶರದರಾವ ಹುಯಿಲಗೋಳ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಪುಲೆಯವರ ಆದರ್ಶದ ನೆನಪುಗಳನ್ನು ಮೆಲಕು ಹಾಕುತ್ತ ಸಾವಿತ್ರಿಬಾಯಿ ಪುಲೆಯವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಅದರಂತೆ ಸರ್ವಪಲ್ಲಿ ರಾಧಾಕೃಷ್ಣನ್ನರವರ ದೇಶಕ್ಕೆ ಹಾಗೂ ಶಿಕ್ಷಕ ಸಮುದಾಯಕ್ಕೆ ತಮ್ಮದೇ ಆದ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಾಗೋಣ ಎಂದು ಭಾವನಾತ್ಮಕವಾಗಿ ಮಾತನಾಡಿದರು.

ಸ್ವಾಗತ ಮತ್ತು ಕಾರ್ಯಕ್ರಮ ನಿರೂಪಣೆಯನ್ನು   ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು. ಕೊನೆಗೆ ವಚನ ಮಂಗಲಗೀತೆಯೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತೆಂದು ಬಸವರಾಜ ಕಣವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.