ನಾವು ಮನುಜರು ಎಂಬ ಮೌಲ್ಯವಿರಲಿ : ಪ್ರೋ. ಸುಮತಿ
ಗದಗ: ನಾವು ಮನುಜರು. ಇದು ಮಾನವೀಯ ಮೌಲ್ಯ. ಮಾನವ ಸಂಬAಧಗಳನ್ನು ನಿರ್ವಹಿಸಲು ಮೌಲ್ಯಗಳು ಸಾಧನವಾಗಿವೆ. ಮೌಲ್ಯಗಳು ಕೇವಲ ಜ್ಞಾನ ನೀಡುವುದು ಅಷ್ಟೇ ಅಲ್ಲದೇ ಜೀವನವನ್ನು ಅರಿತು ಸಮಾಜದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಂತಸದಾಯಕ ಜೀವನ ನಡೆಸಲು ಅಗತ್ಯವಾದ ಅಡಿಪಾಯವನ್ನು ಒದಗಿಸುತ್ತವೆ. ಮಕ್ಕಳು ಉತ್ತಮ ಮೌಲ್ಯಗಳ ಬಾಂದವ್ಯದೊAದಿಗೆ ಬೆಳೆಯಬೇಕು ಎಂದು ಚಿಂತಕಿ ಪ್ರೋ. ಸುಮತಿ ಗದಗಿನಮಠ ಹೇಳಿದರು.
ಅವರು ಗದುಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.15 ರಲ್ಲಿ ಗದಗ ಜಿಲ್ಲಾ ಶರಣೆ ಶ್ರೀ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಶ್ರಾವಣಮಾಸದ ಅಂಗವಾಗಿ ಜರುಗಿದ ಅಮೃತ ಭೋಜನ ಜ್ಞಾನ ಸಿಂಚನ-ಮಾಲಿಕೆ 12ರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ ಮೌಲ್ಯಗಳ ಕುರಿತು ಮಾತನಾಡಿದರು.
ಮಕ್ಕಳು ಉತ್ತಮ ನಡತೆಯೊಂದಿಗೆ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಲು ಸಮುದಾಯದಲ್ಲಿ ಮೌಲ್ಯಗಳನ್ನು ಬಿತ್ತಿ-ಬೆಳೆಸುವ ಪರಿಸರ ನಿರ್ಮಾಣವಾಗಬೇಕು. ಕುಟುಂಬ, ಶಾಲೆ, ಸಮಾಜ ಮಕ್ಕಳ ಪ್ರಗತಿಗೆ ಪೂರಕವಾಗಿ ಉತ್ತಮ ನಡಾವಳಿಗಳನ್ನು ಅವರಲ್ಲಿ ಒಡಮೂಡಿಸಲು ಪ್ರಯತ್ನಿಸಬೇಕು. ನಾವು ಮನುಜರು ಎಂಬುದನ್ನು ನಾವು ಮಕ್ಕಳಿಗೆ ಅರ್ಥೈಸುವ ಕಾರ್ಯ ನಿರಂತರವಾಗಿ ನಡೆದಲ್ಲಿ ಉತ್ತಮ ಬೆಳವಣಿಗೆ ಆಗುವುದು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಚಿಂತಕಿ ಮೀನಾಕ್ಷಿ ಕೊರವಣ್ಣವರ ಮಾತನಾಡಿ ನಾವು ಪಡೆಯುವ ವಿದ್ಯೆಯು ವಿನಯ ಹಾಗೂ ನಮ್ರತೆಗೆ ದಾರಿಯಾಗಬೇಕು. ವಿದ್ಯಾವಂತನು ವಿನಯವಂತನಾದರೆ ವಿಶ್ವವೇ ಅವನೆಡೆಗೆ ಬಾಗುತ್ತದೆ. ಮಕ್ಕಳು ಭಾವಿ ಭವಿಷ್ಯತ್ತಿನ ರೂವಾರಿಗಳು. ಅವರ ಮಹತ್ತರ ಸಾಧನೆಗೆ ನಾವು ಕೈಜೋಡಿಸಬೇಕು. ಶಿಸ್ತು ಬದುಕಿನಲ್ಲಿ ಬಹಳ ಮುಖ್ಯ. ಮಕ್ಕಳು ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿವಾಗಿ ಮಾತನಾಡಿದ ಕವಿತಾ ಬೇಲೇರಿ ಹಿರಿಯರ ಅನುಭದಂತಹ ಅದ್ಭುತವಾದ ವರ್ಗಕೋಣೆ ಈ ಜಗತ್ತಿನಲ್ಲ್ಲಿಯೇ ಇಲ್ಲ. ಏಕೆಂದರೆ ಅಲ್ಲಿರುವುದು ಅನುಭವದ ಪಾಠಗಳು. ಮಕ್ಕಳು ಸಾಧನೆಯನ್ನು ಗುರಿಯಾಗಿ ಇಟ್ಟುಕೊಂಡು ಮುನ್ನಡೆಯಬೇಕು. ಸಾಧ್ಯವೇ ಇಲ್ಲ ಎಂಬ ಭಾವನೆ ಬೇಡ. ನಾವು ಹಾಗೆ ಅಂದುಕೊAಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನವಾದಿಗಳಾಗಿರಬೇಕು. ಗೆದ್ದರೆ ಸಂತೋಷವಾಗುತ್ತದೆ. ಸೋತರೆ ಅನುಭವ ಸಿಗುತ್ತದೆ. ಹಿರಿಯರ ಮಾತುಗಳನ್ನು ಮಕ್ಕಳು ಆಲಿಸಬೇಕು ಎಂಬ ಉದ್ದೇಶದೊಂದಿಗೆ ಕದಳಿಶ್ರೀ ವೇದಿಕೆಯು ಅನುಭವಿಕರನ್ನು ಅಮೃತ ಭೋಜನಕ್ಕೆ ಅಹ್ವಾನಿಸಿ ಮಕ್ಕಳಿಗೆ ಹಿತನುಡಿಗಳನ್ನು ಕೇಳಿಸುವ ಕಾರ್ಯ ನಡೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿ.ಎಸ್.ಬಸಾಪೂರ ಮಾತನಾಡಿ ಮಕ್ಕಳು ಬಾಲ್ಯದಲ್ಲಿಯೇ ಸದ್ಗುಣಗಳನ್ನು ರೂಢಿಸಬೇಕು. ದುಶ್ಚಟಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬುದನ್ನು ತಿಳಿದು- ಅರಿತು ಅದರಂತೆ ನಡೆಯಬೇಕು ಎಂದರು.
ಕಾರ್ಯಕ್ರಮದ ಪ್ರಾಯೋಜಕರಾದ ವಾಣಿ ಲೋಕೇಶ ಪಾಟೀಲ (ಅಬ್ಬಿಗೇರಿ), ಪ್ರೋ.ಸುಮತಿ ಗದುಗಿನಮಠ, ಮೀನಾಕ್ಷಿ ಕೊರವಣ್ಣವರ ಇವರನ್ನು ಕದಳಿಶ್ರೀ ವೇದಿಕೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾರಂಭದಲ್ಲಿ ವಿಶೇಷ ಚೇತನ ಪ್ರತಿಭಾನ್ವಿತ ಮಗು ಕು. ಕೃಷ್ಣಪ್ರಿಯಾ ಬದಿ ವಚನ ಪ್ರಾರ್ಥನೆ ಗೈದರು. ಸಂಪನ್ಮೂಲ ವ್ಯಕ್ತಿ ಶ್ರೀಮತಿ ಟಿ.ಎಸ್.ಹೂಗಾರ ಸ್ವಾಗತಿಸಿದರು. ಪಿ.ಎಸ್.ಬ್ಯಾಳಿ ನಿರೂಪಿಸಿದರು. ವಿ.ಬಿ.ಕರಬಸನಗೌಡ್ರ ಪರಿಚಯಿಸಿದರು. ಬಿ.ಯಶೋಧಾ ವಂದಿಸಿದರು. ನಿವೇದಿತಾ ಸಂಶಿ, ರೇಣುಕಾ ಗೌಳಿಕೇರ, ಗಿರಿಜಾ ದಾಸರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.