ಗದಗ: ಸರ್ವರನ್ನು ಸಮಾನವಾಗಿ ಕಾಣುವ ಮೂಲಕ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರಣೆ ನೀಡುವ ಸಂಸ್ಕೃತಿಯೇ ಶರಣ ಸಂಸ್ಕೃತಿ ಎಂದು ಚಿಂತಕಿ ಸುವರ್ಣಾ ವಸ್ತçದ ಹೇಳಿದರು.
ಅವರು ಸೋಮವಾರ ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ನಗರದ ಸ್ಪಂದನಾ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಎರ್ಪಡಿಸಿದ್ದ ಅಮೃತ ಭೋಜನ-ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
೧೨ನೇ ಶತಮಾನದ ಶರಣರು ಬೆಳಗಿಸಿದ ಜ್ಞಾನದ ಜ್ಯೋತಿ ಅದು ಮಾನವತೆ ಹಾಗೂ ಸೌಹಾರ್ದತೆಯ ಜ್ಯೋತಿಯಾಗಿತ್ತು ಇಂದು ಅದು ಪ್ರಜ್ವಲವಾಗಿ ಬೆಳಗುತ್ತಿದ್ದು ಶರಣರ ಬದುಕು ನಮಗೆ ಸದಾ ಮಾದರಿ ಎಂದರು.
ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದ ಚಂಪಾ ಪಾಟೀಲ ಶಿಕ್ಷಣವು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ, ಹಾಗೆಯೇ ಶರಣರ ವಾಣಿಗಳು ನಮ್ಮಲ್ಲಿ ಧರ್ಮ ಸಂಸ್ಕೃತಿಯನ್ನು ಬಿತ್ತುತ್ತವೆ ಎಂದರು.
ಇನ್ನೋರ್ವ ಅತಿಥಿ ಶರಣೆ ನೀಲಾಂಭಿಕಾ ಉಗಲಾಟದ ಮಾತನಾಡಿ ಶರಣರು ತಾವು ನುಡಿದಂತೆ ನಡೆದರು, ಅದನ್ನೇ ವಚನ ರೂಪದಲ್ಲಿ ಪ್ರಕಟಪಡಿಸಿದರು ಅವುಗಳ ಅಧ್ಯಯನದಿಂದ ಮಕ್ಕಳು ಜೀವನವನ್ನು ಸುಗಮಗೊಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ-ಬೆಟಗೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಜಯಶ್ರೀ ಉಗಲಾಟದ ಮಾತನಾಡಿ ಪ್ರತಿ ವರ್ಷ ಶ್ರಾವಣದಲ್ಲಿ ವಚನ ಚಿಂತನದೊAದಿಗೆ ಶಾಲೆಗಳಲ್ಲಿ ಮಕ್ಕಳಿಗೆ ಸಿಹಿಭೋಜನ, ಕಲಿಕಾ ಸಾಮಗ್ರಿ ವಿತರಿಸುವ ಮೂಲಕ ಮಕ್ಕಳಲ್ಲಿ ವಚನ ಚಿಂತನೆಯನ್ನು ಮೂಡಿಸಲಾಗುತ್ತಿದೆ. ಶರಣರು ಬದುಕುವ ರೀತಿಯನ್ನು ವಚನಗಳಲ್ಲಿ ತಿಳಿಸಿದ ಪುಣ್ಯಪುರುಷರು ಎಂದರು.
ವೇದಿಕೆಯ ಮೇಲೆ ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ, ಶಾಲಾ ಮುಖ್ಯೋಪಾಧ್ಯಾಯನಿ ಲಲಿತಾ ಪಾಟೀಲ, ವಿದ್ಯಾಶ್ರೀ ಪೂಜಾರಿ ಉಪಸ್ಥಿತರಿದ್ದರು.
ಸವಿತಾ ಗಚ್ಚೆಮ್ಮನವರ ಪ್ರಾರ್ಥಿಸಿದರು, ಚಂದ್ರಮ್ಮ ಕೊಟಗಿ ಸ್ವಾಗತಿಸಿದರು, ಶಿವಲೀಲಾ ಶೇಗಣಿ ನಿರೂಪಿದರು, ಮಲ್ಲಮ್ಮ ಪಾಟೀಲ ವಂದಿಸಿದರು. ರೇಣುಕಾ ಗಡಗಿ, ನಿರಂಜನ ಸಪ್ಪನವರ, ರವಿ ಮೊರಬದ ಮುಂತಾದವರು ಉಪಸ್ಥಿತರಿದ್ದರು