filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:8; brp_del_th:0.0000,0.0000; brp_del_sen:0.0000,0.0000; motionR: 1; delta:null; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (-1, -1);aec_lux: 139.32738;aec_lux_index: 0;albedo: ;confidence: ;motionLevel: 0;weatherinfo: null;temperature: 37; 
ಜಿಲ್ಲೆ

ಉತ್ತಮ ಸಂಸ್ಕಾರವನ್ನು ಪಡೆದು ನಮ್ಮ ಸಂಸ್ಕೃತಿ ಬೆಳೆಸಿಕೊಳ್ಳಬೇಕು : ವೆರ್ಣೇಕರ

Gadag - Shivanand Hiremath

ಗದಗ: ಜೀವನದಲ್ಲಿ ಯಶಸ್ವಿಯಾಗಲು ಪ್ರತಿಭೆಯಷ್ಟೇ ಮುಖ್ಯವಾದ ಇನ್ನೊಂದು ಸಂಗತಿಯೆAದರೆ ನಮ್ಮ ವರ್ತನೆಗಳು. ಅದಕ್ಕಾಗಿ ಮಕ್ಕಳು ಉತ್ತಮ ಸಂಸ್ಕಾರವನ್ನು ಪಡೆದು ನಮ್ಮ ಸಂಸ್ಕೃತಿ ಹಾಗೂ ಉತ್ತಮ ಮೌಲ್ಯಗಳೊಂದಿಗೆ ಆದರ್ಶ ಜೀವನ ರೂಢಿಸಿಕೊಳ್ಳಬೇಕೆಂದು ಗದಗ ಬೆಟಗೇರಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ರಾಜು ವೆರ್ಣೆಕರ ಹೇಳಿದರು.

ಅವರು ಗದುಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನಂ. 8ರಲ್ಲಿ ಗದಗ ಜಿಲ್ಲಾ ಅಕ್ಕ ಮಹಾದೇವಿಯ ಕದಳಿಶ್ರೀ ವೇದಿಕೆಯಿಂದ ಜರುಗಿದ ಅಮೃತ ಭೋಜನ ಜ್ಞಾನಸಿಂಚನ ಮಾಲಿಕೆ-23 ರಲ್ಲಿ ಅತಿಥಿಯಾಗಿ ಮಾತನಾಡಿದರು.

ಮಕ್ಕಳು ಉತ್ತಮ ಆಲೋಚನೆಗಳನ್ನು ಸರಿಯಾದ ಜೀವನ ಕ್ರಮಗಳನ್ನು ರೂಢಿಸಿಕೊಳ್ಳಬೇಕು. ಶರಣರ ವಚನಗಳು ಜೀವನದ ದಾರಿ ದೀಪಗಳು. ವಚನಗಳಲ್ಲಿ ವೈಜ್ಞಾನಿಕ ಚಿಂತನೆಗಳು ಮೂಡಿ ಬಂದಿವೆ. ಪ್ರಶ್ನಿಸುವ ಮೂಲಕ ಸತ್ಯವನ್ನು ಶೋಧಿಸುವ ವಿಜ್ಞಾನದ ಪ್ರಯೋಗಗಳೂ ವಚನಗಳಲ್ಲಿವೆ. ವೈಜ್ಞಾನಿಕ ಮನೋಭಾವವು ವಚನ ಸಾಹಿತ್ಯದಲ್ಲಿ ಹೆಚ್ಚಾಗಿ ಕಂಡು ಬಂದಿರುವುದರಿAದ ಮಕ್ಕಳು ವಚನ ಸಾಹಿತ್ಯವನ್ನು ವೈಜ್ಞಾನಿಕ ತಳಹದಿಯ ಮೇಲೆ ಅರ್ಥೈಸಿಕೊಂಡು ಹೊಸ ಹೊಸ ಅವಿಷ್ಕಾರಗಳೊಂದಿಗೆ ಓದಿನಲ್ಲಿ ಯಶಸ್ಸು ಸಾಧಿಸಬೇಕು ಎಂದರು.

ಕ್ಲಬ್ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ ಮಾತನಾಡಿ ಬಾಹ್ಯಾಕಾಶ ದಿನಾಚರಣೆಯ ಈ ಸಂದರ್ಭದಲ್ಲಿ ಮಕ್ಕಳು ವೈಜ್ಞಾನಿಕವಾಗಿ ಪ್ರಯೋಗಾತ್ಮಕವಾಗಿ ವಿಜ್ಞಾನವನ್ನು ಅಭ್ಯಾಸಿಸಬೇಕು. ವಚನಕಾರರು ಪ್ರಕೃತಿಯಲ್ಲಿ ಪರಮಾತ್ಮನನ್ನು ಕಾಣುವವರು. ಸಮಾಜವು ವ್ಯಕ್ತಿಗಳ ಸಮೂಹವಾಗಿದೆ. ಇಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆ. ವಚನಗಳು ಸಕಲ ಜೀವಾತ್ಮರ ಒಳಿತನ್ನೇ ಬಯಸುವುದು. ಶರಣರ ಕಾಯಕ ಮತ್ತು ದಾಸೋಹ ಪ್ರಜ್ಞೆ ಬಹುದೊಡ್ಡ ವಿಜ್ಞಾನವಾಗಿದೆ. ಇದು ಎಲ್ಲ ಕಾಲದ ಜನರಿಗೆ ಶರಣರು ನೀಡಿದ ಮಹತ್ವದ ಸಂದೇಶ. ಮಕ್ಕಳು ಡಿಜಿಟಲೀಕರಣವನ್ನು ಅಳವಡಿಸಿಕೊಂಡು ಓದಿನಲ್ಲಿ ಮುನ್ನಡೆಯಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಲಬ್‌ನ ಮಾಜಿ ಅಧ್ಯಕ್ಷ ಅಶ್ವಥ ಸುಲಾಖೆ ಓದು ಒಂದು ತಪಸ್ಸು. ಮಕ್ಕಳು ಓದುವ ವಯಸ್ಸಿನಲ್ಲಿ ಪ್ರಚಲಿತ ಸಮಸ್ಯೆಗಳ ಕುರಿತು ವಿಷಯವನ್ನು ತಿಳಿದು ಅಧ್ಯಯನಗೈಯ್ಯಬೇಕು. ಶರಣೆ ಅಕ್ಕಮಹಾದೇವಿಯ ವಚನಗಳಲ್ಲಿ ವ್ಯಕ್ತಿಗತ ಶುದ್ಧಿಯ ನಿಯಮಗಳನ್ನು ಬಿಂಬಿಸಿದ್ದಾರೆ. ಮಕ್ಕಳು ಶರಣರ ವಚನಗಳಲ್ಲಿ ಇರುವ ವೈಜ್ಞಾನಿಕತೆಯನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಪ್ರಗತಿ ಸಾಧಿಸಬೇಕು ಎಂದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಅಧ್ಯಕ್ಷ ರಮೇಶ ಶಿಗ್ಲಿ ಮಾತನಾಡಿ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆಯು ಶ್ರಾವಣ ಮಾಸದ ಅಂಗವಾಗಿ ಶಾಲೆಗಳಲ್ಲಿ ಶರಣರ ವಚನಗಳ ಕುರಿತು ಉಪನ್ಯಾಸ ಏರ್ಪಡಿಸಿ ಮಕ್ಕಳಿಗೆ ಸಿಹಿ ಭೋಜನ ನೀಡುವುದರೊಂದಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಗದಗ ಬೆಟಗೇರಿ ಲಯನ್ಸ್ ಕ್ಲಬ್ ವಹಿಸಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಎಂ.ಎಲ್.ಹೊಸಳ್ಳಿ ವಹಿಸಿ ಮಾತನಾಡಿ ವೈಜ್ಞಾನಿಕವಾಗಿ ಮಕ್ಕಳು ಬೆಳೆಯಬೇಕಾದ ಅವಶ್ಯಕತೆ ಇಂದು ಬಹಳಷ್ಟಿದೆ. ಅದಕ್ಕೆ ಪೂರಕವಾಗಿ ಬೋಧನೆಯಲ್ಲಿ ಪ್ರಯೋಗಗಳನ್ನು ಮಾಡುವುದರ ಮೂಲಕ ಕಲಿಕೆಯನ್ನು ಯಶಸ್ವಿಗೊಳಿಸಲಾಗುತ್ತಿದೆ. ಲಯನ್ಸ್ ಕ್ಲಬ್‌ನವರು ಶಾಲೆಗೆ ಆಗಮಿಸಿ ಮಕ್ಕಳಿಗೆ ಬಾಹ್ಯಾಕಾಶ ಕುರಿತು ತಿಳುವಳಿಕೆ ನೀಡಿದ್ದು ಅಭಿನಂದನೀಯ ಎಂದರು.

ವೇದಿಕೆಯ ಮೇಲೆ ಕ್ಲಬ್‌ನ ಖಜಾಂಚಿ ರೇಣುಕಪ್ರಸಾದ ಹಿರೇಮಠ, ವಿರೇಶ ಪಟ್ಟಣಶೆಟ್ಟಿ, ನಿತೀಶ್ ಸಾಲಿ, ಲಯನ್ಸ್ ಕ್ಲಬ್‌ನ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ಸುರೇಖಾ ಮಲ್ಲಾಡದ, ಮಾಜಿ ಅಧ್ಯಕ್ಷೆ ಅನುರಾಧಾ ಸಾಲಿ, ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮುಂತಾದವರು ಉಪಸ್ಥಿತರಿದ್ದರು.

ಮಕ್ಕಳಿಂದ ಸಾಮೂಹಿಕ ಪ್ರಾರ್ಥನೆ ಜರುಗಿತು. ವಿದ್ಯಾ ಕಾಡಸಿದ್ಧೇಶ್ವರಮಠ ಸ್ವಾಗತಿಸಿದರು. ಸನ್ಮತಿ ಕಟ್ಟಿ ಬಾಹ್ಯಾಕಾಶ ದಿನಾಚರಣೆಯ ಕುರಿತು ಮಕ್ಕಳಿಗೆ ವಿವರಿಸಿದರು. ಆರ್.ಎಸ್.ರಾಜೋಳಿ ನಿರೂಪಿಸಿ ವಂದಿಸಿದರು. ಸಾವಿತ್ರಿ ಬಿಜವಾಡ, ರಾಧಿಕಾ ಮುಳ್ಳಾಳ, ವೀಣಾ ನೀಲಗುಂದ ಮುಂತಾದವರಿದ್ದರು.

= = =