ಗದಗ: ಕಾಗಿನೆಲೆ ಆಧಿಕೇಶವನ ಕೃಪಾಶೀರ್ವಾದ ಹಾಗೂ ಭಕ್ತ ಮಹಾತ್ಮ ಸಂತ ಕನಕದಾಸರ ಸದಾವಕಾಲ ಸನ್ಮಂಗಲದ ಮಹಾವದಾನಿ ಅಕ್ಷರಯೋಗಿ ಸಮಾಜೋಧಾರ್ಮಿಕ ಸೇವೆಗಾಗಿ ದಾವಣಗೆರೆಯ ವಿಶ್ವವಿದ್ಯಾಲಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಯವರಿಗೆ ಗೌರವ ಡಾಕ್ಟರೇಟ ಪದವಿಯನ್ನು ರಾಜ್ಯಪಾಲರಾದ ಶ್ರೀ. ಥಾವರಚಂದ ಗೆಲ್ಹೋಟ ಅವರು ಇಂದು ಜರುಗಿದ ದಾವಣಗೆರೆ ವಿಶ್ವವಿದ್ಯಾಲಯದ 12 ನೇಯ ಘಟಿಕೋತ್ಸವ ಸಮಾರಂಭದಲ್ಲಿ ನೀಡಿ ಗೌರವಿಸಿದರು. ಉನ್ನತ ಶಿಕ್ಷಣ ಸಚಿವರಾದ ಡಾ. ಎಮ್. ಸಿ. ಸುಧಾಕರ ಹಾಗೂ ಕುಲಪತಿಗಳಾದ ಡಾ. ಬಿ. ಡಿ. ಕುಂಬಾರ ಅವರ ನೇತೃತ್ವದಲ್ಲಿ ಸಾದರಪಡಿಸಿದರು.
ತನ್ನಿಮಿತ್ಯ ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಬಿ.ಎಫ್. ದಂಡಿನರವರು, ಕಾರ್ಯಾಧ್ಯಕ್ಷರಾದ ಶ್ರೀ ರವೀಂದ್ರನಾಥ ಬಿ. ದಂಡಿನರವರು, ಕಾರ್ಯದರ್ಶಿಗಳಾದ ಶ್ರೀಮತಿ. ಶೀಲಾ ರವೀಂದ್ರನಾಥ ದಂಡಿನ ರವರು ಹಾಗೂ ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ. ಶ್ವೇತಾ ಪಿ ಬೆನಕನವಾರಿ ಅವರು ಪ್ರಣಾಮಗಳೊಂದಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಪ್ರಸ್ತುತ ಘಟಕೋತ್ಸವದಲ್ಲಿ ಶ್ರೀ ರವೀಂದ್ರನಾಥ ದಂಡಿನ ಅವರು ಪ್ರಾಚಾರ್ಯರ ಬಳಗದೊಂದಿಗೆ ಡಾ. ಟಿ. ಎನ್. ಗೋಡಿ, ಡಾ. ಎನ್.ಎಮ್. ಅಂಬಲಿಯವರ, ಡಾ. ಜಿ. ಸಿ ಜಂಪಣ್ಣನವರ,ಪ್ರೊ. ಉಮೇಶ ಹಿರೇಮಠ, ಹಾಗೂ ಡಾ. ಡಿ. ಬಿ.ಗವಾನಿಯವರು ಪಾಲ್ಗೊಂಡು ಶ್ರೀಗಳಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೆ ಸನ್ಮಾನಿಸಿ ಗೌರವ ಸಮರ್ಪಿಸಿದರು.