ಜಿಲ್ಲೆ

ಕರಕುಶಲ ಪ್ರದರ್ಶನ ಮತ್ತು ತರಬೇತಿಯ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ

Gadag - Shivanand Hiremath

ಗದಗ: ತೋಂಟದಾರ್ಯ ವಿದ್ಯಾಪಿಠದ ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಸೆ.11 ರಿಂದ 13ರ ವರೆಗೆ ಕರಕುಶಲ ಪ್ರದರ್ಶನ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಭ್ಯಥಿರ್ಗಳಿಗೆ ಶನಿವಾರ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಅಮರೇಶ ಅಂಗಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಥಿಗಳು ಭವಿಷ್ಯದಲ್ಲಿ ಸ್ವಯಂ ಉದ್ಯೋಗ ಮಾಡಲು ಬೇಕಾದ ಉತ್ತಮ ಜ್ಞಾನ ಮತ್ತು ತರಬೇತಿ ದೊರೆಯುವ ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಎಂ. ಎಂ. ಬುರಡಿ, ರಾಜೇಶ್ವರಿ ಕೆ.ಎಂ., ಪಾರ್ವತಿ ತಳವಾರ, ಸುಮಾ ಗುಡದಳ್ಳಿ, ಮೈಲಾರಪ್ಪ ಗಂಗಾಧರ, ಶಿವರಾಮ ನಾಯಕ, ಪೃತ್ವಿರಾಜ ವಾಲ್ಮಿಕಿ, ಸಂತೋಷ ನಾಯಕ, ಆನಂದ ದೇಸಾಯಿಪಟ್ಟಿ ಇತರರು ಇದ್ದರು.