ಜಿಲ್ಲೆ

ತೋಂಟದಾರ್ಯ ಮಠದಲ್ಲಿ ವನಮಹೋತ್ಸವ ಮತ್ತು ಫ. ಗು. ಹಳಕಟ್ಟಿಯವರ ಜಯಂತಿ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ನಗರದ ತೋಂಟದಾರ್ಯ ಮಠದಲ್ಲಿ ವನಮಹೋತ್ಸವ ಮತ್ತು ಫ. ಗು. ಹಳಕಟ್ಟಿ ಅವರ ಜಯಂತಿ ಆಚರಿಸಲಾಯಿತು.

ಡಾ. ಗಿರಿಜಾ ಹಸಬಿ ಉಪನ್ಯಾಸ ನೀಡಿ ಮಾತನಾಡಿ, 12 ನೇ ಶತಮಾನದಲ್ಲಿ ಊರ್ಜಿತವಾಗಿದ್ದ ವಚನ ಸಾಹಿತ್ಯವು ಹಲವು ಸಮಾನತೆಯ ವಿರೋಽಗಳಿಂದ ಶರಣರ ಕಗ್ಗೊಲೆ ಮತ್ತು ವಚನ ಸಾಹಿತ್ಯವನ್ನು ಸುಡುವಂತಹ ದುಷ್ಕೃತಗಳಿಂದ ರಕ್ಷಿಸಲು ವಚನಗಳ ಕಟ್ಟುಗಳನ್ನು ಹೊತ್ತು ಶರಣರು ಉಳವಿಯತ್ತ ನಡೆದರು. ಆಗ ವಚನಗಳು ಹಲವರ ಮನೆಗಳಲ್ಲಿ, ಮಠಗಳಲ್ಲಿ ಉಳಿದವು. ನೂರಾರು ವರ್ಷಗಳ ನಂತರ ಫ. ಗು. ಹಳಕಟ್ಟಿಯವರಂತ ಶ್ರೀಮಂತ ವ್ಯಕ್ತಿಯ ಭಗೀರಥ ಪ್ರಯತ್ನದಿಂದ ಅನರ್ಘ್ಯ ರತ್ನದಂತಹ ವಚನ ಸಾಹಿತ್ಯದ ಸಂಗ್ರಹಣೆ, ಪ್ರಕಟಣೆ ಮತ್ತು ಪ್ರಸಾರದಿಂದ ಈ ಸಾಹಿತ್ಯವು ಬೆಳಕಿಗೆ ಬಂದಿತು. ಹಳಕಟ್ಟಿಯವರು ಧಾರವಾಡದಲ್ಲಿ ಜನಿಸಿದರು. ಎಲ್‌ಎಲ್‌ಬಿ ವಿದ್ಯಾಭ್ಯಾಸ ಮಾಡಿ ವಕೀಲರಾದರು. ಹಾಗೆ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದರು. ಈ ಸಂದರ್ಭದಲ್ಲಿ ಮನೆಯೊಂದರಲ್ಲಿ ತಾಳೆಗರಿಯ ವಚನ ಕಟ್ಟುಗಳನ್ನು ಕಂಡು ಪ್ರಭಾವಿತರಾಗಿ ಬಿಟ್ಟು ಬಿಡದೇ ಓದಿದರು. ಅವುಗಳ ಅರ್ಥ ಅಣರ್ಘ್ಯ ರತ್ನಗಳಂತೆ ಕಂಡಿತು. ಆಗಿನಿಂದ ವಕೀಲ ವೃತಿಯಲ್ಲಿ ಆಸಕ್ತಿ ಕಡಿಮೆ ಆಗಿ ವಚನ ಸಂಗ್ರಹಣೆ, ಪ್ರಕಟಣೆ, ಪ್ರಸಾರಗಳೇ ಇವರ ವೃತ್ತಿಯಾಯಿತು. ಇವರಿಂದ ವಚನ ಸಾಹಿತ್ಯದ ಮೇಲೆ ಬೆಳಕು ಬಿದ್ದಿತು ಎಂದರು.

ಅಕ್ಕಮಹಾದೇವಿ ಕೇಂದ್ರದ ಅಧ್ಯಕ್ಷೆ ಶಾಂತಾ ತುಪ್ಪದ ಮಾತನಾಡಿ, ಹಳಕಟ್ಟಿ ಅವರು ಕನ್ನಡ ನಾಡು ನುಡಿಯ ಅಭಿಮಾನಿ ಆಗಿದ್ದರು. ವಚನ ಸಾಹಿತ್ಯದಲ್ಲಿ ಅದಮ್ಯ ಆಸಕ್ತಿ ಹೊಂದಿದ್ದರಿAದಲೇ ವಚನಗಳ ಸಂಶೋಧನೆ, ಸಂಗ್ರಹಣೆಯಿAದ ಕರ್ನಾಟಕದ ಆಧ್ಯಾತ್ಮಿಕ ಮತ್ತು ಸಾಹಿತ್ಯದ ಪರಂಪರೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಕರ್ನಾಟಕ ಸರ್ಕಾರ ಫ. ಗು. ಹಳಕಟ್ಟಿಯವರ ಗೌರವಾರ್ಥ ಇವರ ಜನ್ಮದಿನವನ್ನು ಕರ್ನಾಟಕದಾದ್ಯಂತ ವಚನ ಸಂರP್ಷÀಣಾ ದಿನ ಎಂದು ಆಚರಿಸುತ್ತದೆ ಎಂದು ತಿಳಿಸಿದರು.

ಜಯಶ್ರೀ ಉಗಲಾಟದ, ಶ್ರೀದೇವಿ ಶೆಟ್ಟರ, ಅಕ್ಕಮಹಾದೇವಿ ಚಟ್ಟಿ, ರತ್ನಕ್ಕ ಪಾಟೀಲ, ವಿಶಾಲಾಕ್ಷಿ ಕುರಗೋಡ, ಜಯಾ ಹಳ್ಳಿಕೇರಿ, ಉಮಾ ಕವಳಿಕಾಯಿ, ಸುಗ್ಗಲಾ ಎಳಮಲಿ, ಪುಷ್ಪಾ ಬಂಡಾರಿ, ಮಾಧುರಿ ಮಾಳೇಕೊಪ್ಪ, ವಿದ್ಯಾ ಗಂಜಿಹಾಳ, ಶಶಿಕಲಾ ಮಾಲಿಪಾಟೀಲ, ಸಂಗೀತಾ ಪಟ್ಟಣಶೆಟ್ಟಿ, ರತ್ನಾ ದಾಸರ, ಶಾರದಾ ಸಜ್ಜನರ, ಸುಶೀಲಾ ಕೋಟಿ, ವಿಜಯಲಕ್ಷಿ÷್ಮ ಚಿತ್ತಂಗಿ, ಸುಜಾತಾ ಇತರರು ಇದ್ದರು.