ಜಿಲ್ಲೆ

ಮಠದ ಜಾತ್ರಾ ಮಳಿಗೆಗೆ ಅನಗತ್ಯ ವಿರೋಧ

Gadag - Shivanand Hiremath

ತೋಂಟದಾರ್ಯ ಮಠದಿಂದ ಬಂದ ಕರೆಗೆ ವಿರೋಧ

ವಿಜಯವಾಣಿ ಸುದ್ದಿಜಾಲ ಗದಗ

ತೋಂಟದಾರ್ಯ ಮಠದ ಜಾತ್ರೆ ವಿಶೇಷ ಆಗಿದ್ದು, ಸಾವಿರಾರು ವರ್ಷಗಳಿಂದ ಈ ಜಾತ್ರೆ ಮಾಡಿಕೊಂಡು ಬರಲಾಗಿದೆ. ಆದರೆ ಜಾತ್ರೆಯಲ್ಲಿ ತಾತ್ಕಾಲಿಕ ಮಳಿಗೆ ಹಾಕುವುದನ್ನು ಅನಗತ್ಯವಾಗಿ ಶ್ರೀರಾಮಸೇನೆ ಮುಖಂಡ ರಾಜು ಖಾನಪ್ಪನ್ನವರ ವಿರೋಧಿಸಿ, ಮಠದ ಶ್ರೀಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತೊಂಟದಾರ್ಯ ಮಠದ ಜಾತ್ರಾ ಸಮಿತಿ ಅಧ್ಯಕ್ಷ ದನೇಶ ದೇಸಾಯಿ ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಠದ ಆಸ್ತಿ ಆಗಿರುವ ಮುಂಭಾಗದ ರಸ್ತೆಯಲ್ಲಿ ಜಾತ್ರೆ ಸಮಯದಲ್ಲಿ ತಾತ್ಕಾಲಿಕವಾಗಿ ಮಳಿಗೆ ಹಾಕುವುದನ್ನು ಗುತ್ತಿಗೆ ನೀಡುತ್ತೇವೆ. ಆದರೆ, ಮಳಿಗೆಗಳನ್ನು ಕೇವಲ ಅನ್ಯಧಮಿರ್ಯರಿಗೆ ಮಾತ್ರ ನೀಡಲಾಗುತ್ತಿದೆ ಎಂದು ಆರೋಪಿಸಿ ರಾಜು ಖಾನಪ್ಪನ್ನವರ ಅವರು ಮೇ. 26 ಗದಗ ಬಂದ ಕರೆ ನೀಡಿದ್ದಾರೆ. ಶ್ರೀಮಠವು ಸಾರ್ವಜನಿಕ ಉದ್ದೇಶಕ್ಕಾಗಿ ಮಳಿಗೆ ಗುತ್ತಿಗೆ ನೀಡುತ್ತಿದೆ. ಈ ಬಂದ ಕರೆಯನ್ನು ಮಠ ವಿರೋಧಿಸುತ್ತದೆ ಮತ್ತು ರಾಜು ಖಾನಪ್ಪನ್ನರ ಮೇಲೆ ಪೊಲೀಸ್​ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ತೋಂಟದಾರ್ಯ ಮಠದಿಂದ ಸಮಾಜಿಕಿ ಕಾರ್ಯಕ್ಕೆ ಮತ್ತು ಸಾರ್ವಜಿಕ ಉದ್ದೇಶಕ್ಕಾಗಿ ನೂರಾರು ಏಕರೆಯನ್ನು ನೀಡಲಾಗಿದೆ. ನಗರದ ಕೇಂದ್ರಭಾಗದಲ್ಲಿ ಮಠದ ಮಾಲೀಕತ್ವದ ಆಸ್ತಿ ಇದ್ದರೂ ಸಹ ಸಾರ್ವಜನಿಕ ಉದ್ದೇಶಕ್ಕೆ ಬಳಸುತ್ತಿರುವ ಜಮೀನಿನ ಮೇಲೆ ನಮ್ಮ ಹಕ್ಕು ಪ್ರತಿಪಾಧಿಸುತ್ತಿಲ್ಲ. ಸಮಾಜಕ್ಕೆ ಅನೇಕ ಕೊಡಿಗೆ ನೀಡುತ್ತಿರುವ ಮಠದ ಮೇಲೆ ಕೇವಲ 40 ದಿನ ಜಾತ್ರಾ ಮಳಿಗೆ ಗುತ್ತಿಗೆ ನೀಡಿದ್ದನ್ನು ವಿರೋಧಿಸು ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಮಠದ ಮೇಲೆ ಮತ್ತು ಮಠದ ಶ್ರೀಗಳ ಮೇಲೆ ಅನಗತ್ಯ ಆರೋಪ ಮಾಡಿದರೆ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದರು.

ಮಠದ ಮುಂಭಾಗದಲ್ಲಿ ರಸ್ತೆಯನ್ನು ಸಾರ್ವಜನಿಕರು ಬಳಸುತ್ತಿದ್ದಾರೆ. ಸಣ್ಣಪುಟ್ಟ ಮಳಿಗೆ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಂದ ನಾವು ಬಾಡಿಗೆ ಪಡೆದಿಲ್ಲ. ಆದರೆ, ಕೇವಲ 40 ದಿನ ಬಾಡಿಗೆ ನೀಡಿದ್ದನ್ನು ವಿರೋಧಿಸುತ್ತಿದ್ದಾರೆ. ಮೇ. 26 ರಂದು ನೀಡಿದ್ದ ಬಂದ ಕರೆಗೆ ಮಠವು ವಿರೋಧಿಸುತ್ತದೆ ಮತ್ತು ಪೊಲೀಸ್​ ಇಲಾಖೆ ಬಂದ ಕೆರೆಗೆ ಅವಕಾಶ ನಿಡಬಾರದು ಎಂದರು.

ಎಸ್​. ಎಸ್​. ಪಟ್ಟಣಶೆಟ್ಟಿ, ಚಂದ್ರು ತಡಸದ, ಐ.ಬಿ ಬೆನಕೊಪ್ಪ, ವಿದ್ಯಾದರ ದೊಡ್ಡಮನಿ. ಕೊಟ್ರೇಶ ಪಟ್ಟಣಶೆಟ್ಟಿ, ಚಂದ್ರು ಚವ್ಹಾಣ, ಕೃಷ್ಣ ಪರಾಪುರೆ ಇತರರು ಇದ್ದರು.