ಜಿಲ್ಲೆ

ತೋಂಟದಾಯ೯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನದ ಹ್ಯಾಕಥಾನ್

Gadag - Shivanand Hiremath

Gadag: ತೋಂಟದಾಯ೯ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್‌ ಸಾಯನ್ಸ್‌ ಮತ್ತು ಕಂಪ್ಯೂಟರ್‌ ಸಾಯನ್ಸ್‌ ಡಿಜೈನ್‌ ವಿಭಾಗದ ಸಹಯೋಗದಲ್ಲಿ ಎರಡು ದಿನದ ಹ್ಯಾಕಥಾನ್‌ -೨೦೨೫ ಕಾಯ೯ಕ್ರಮ ಜರುಗಿತು. ರಾಜ್ಯದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳಿಂದ ಸುಮಾರು ೮೬ ತಂಡಗಳು ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದವು. ಕಾಯ೯ಕ್ರಮವನ್ನು ಬೆಂಗಳೂರಿನ ಶೆಲ್‌ ಕಂಪನಿಯ ನುರಿತ ಇಂಜನಿಯರ್‌ ಆದ ಶ್ರೀ ಆದಿತ್ಯ ನರೇಂದ್ರ ಅವರು ಉದ್ಘಾಟಿಸಿದರು. ಉದ್ಘಾಟನಾ ಪರವಾದ ನುಡಿಯಲ್ಲಿ ಅವರು ವಿದ್ಯಾಥಿ೯ಗಳನ್ನು ಹುರುದುಂಬಿಸುತ್ತ ಡೇಟಾ ಸಾಯನ್ಸ್‌, ಆಟಿ೯ಫಿಶಿಯಲ್‌ ಇಂಟಲಿಜೆನ್ಸಿ,  ಮಷಿನ್‌ ಲನಿಂ೯ಗ್‌ ಮತ್ತು ಸ್ಟ್ಯಾಟಿಸ್ಟಿಕ್‌ ಕಮೆಂಡಿಂಗ್‌ ಈ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ವಿದ್ಯಾಥಿ೯ಗಳು ಹೊಂದಬೇಕೆಂದು ಸಲಹೆ ನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ಇನ್ನಿಬ್ಬರು ಪ್ರೊ. ಚಂದ್ರಶೇಖರ ಕುರಿ, ಪ್ರೊ. ಪದ್ಮನಾಭ .ಬಿ ಮಾತನಾಡುತ್ತ ಹ್ಯಾಕಥಾನ್-‌೨೦೨೫ಕ್ಕೆ ಬೇಕಾದ ತಾಂತ್ರಿಕ ಸಲಹೆಗಳನ್ನು ನೀಡಿ, ವಿದ್ಯಾಥಿ೯ಗಳಿಗೆ ನೀಡಿದ ಕಾಯ೯ಕ್ಕೆ ಪೂರಕವಾದ ಅಂಶವನ್ನು ಚಚಿ೯ಸಿದರು.

      ಕೌಶಲ್ಯ ಅಭಿವೃದ್ಧಿ ಘಟಕ ಸಂಯೋಜಕರಾದ ಪ್ರೊ. ಪ್ರಸನ್ನ ನಾಡಗೌಡರ ವಿದ್ಯಾಥಿ೯ಗಳನ್ನು ಉದ್ದೇಶಿಸಿ ಮಾತನಾಡುತ್ತ ನಮ್ಮ ದೇಶದ ಅಭಿವೃದ್ಧಿಗೆ ಪೂರಕವಾದ ಪ್ರಯತ್ನಗಳನ್ನು ಸತತ ಅಭ್ಯಾಸಿಗಳಾಗಿ ವಿದ್ಯಾಥಿ೯ಗಳು ಮಾಡಬೇಕು ಎಂದು ನುಡಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲರಾದ ಡಾ. ಜಿ.ಡಿ.ರೇವಣಕರ್‌ ವಹಿಸಿದ್ದರು. ಪ್ರತಿ ವಿಭಾಗದಲ್ಲಿ ಮೂರು ಬಹುಮಾನಗಳನ್ನು ನೀಡಲಾಯಿತು. ಎರಡೂ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ ಬಡಿಗೇರ ಮತ್ತು ಪ್ರೊ. ವಿಜಯಕುಮಾರ ಎಸ್.‌ ಎಮ್.‌ ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾಥಿ೯ ಪ್ರತಿನಿಧಿಗಳಾದ ಜಯದೀಪ, ಋತಿಕಾ ಮತ್ತ ಸಹನಾ ಆಯೋಜನೆ ಮಾಡಿದ್ದರು. ಸಿಬ್ಬಂದಿ ಸಂಯೋಜಕರಾದ ಪ್ರೊ. ಆದೋಕ್ಷಜ ಕುಲಕಣಿ೯, ಪ್ರೊ. ನಾಗರಾಜ ತೇಲಕರ್‌ ಮತ್ತು ಪ್ರೇಮಾ ಯಲ್ಲೂರ ಅವರೂ ಉಪಸ್ಥಿತರಿದ್ದರು.