ಜಿಲ್ಲೆ

ತೋಂಟದಾರ್ಯ ಇಂಜಿನಿಯರಿಂಗ್​ ಕಾಲೇಜಿನಲ್ಲಿ ವಿದ್ಯಾಥಿರ್ಗಳ ಬೀಳ್ಕೊಡುವ ಸಮಾರಂಭ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ತೋಂಟದಾರ್ಯ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಶುಕ್ರವಾರ ಅಂತಿಮ ವರ್ಷದ ವಿದ್ಯಾಥಿರ್ಗಳಿಗೆ ಬೀಳ್ಕೊಡುವ ಸಮಾರಂಭ ವಿಜೃಂಭಣೆಯಿಂದ ಆಚರಿಸಲಾಯಿತು.

ವಿಭಾಗಾಧಿಕಾರಿ ಡಾ. ಈರಣ್ಣಾ ಕೋರಚಗಾಂವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜ್ಞಾನ, ಶಿಸ್ತು ಮತ್ತು ಮೌಲ್ಯಗಳ ಶಕ್ತಿ ನಿಮ್ಮನ್ನು ಜೀವನ ಮಾರ್ಗದಲ್ಲಿ ಯಶಸ್ವಿ ಆಗಿಸುವುದು ಖಚಿತ. ವಿದ್ಯಾಥಿರ್ಗಳು ಮೌಲ್ಯಗಳನ್ನು ಮನವರಿಕೆ ಮಾಡಿಕೊಳ್ಳಬೇಕು. ಭಾರತೀಯ ಪುರಾಣಗಳಲ್ಲಿ ಉಲ್ಲೇಖಿಸಿರುವ ಆದರ್ಶ ವ್ಯಕ್ತಿಗಳಾದ ಸತ್ಯ ಹರಿಶ್ಚಂದ್ರ, ಆರ್ಯಭಟ ಮತ್ತು ಏಕಲವ್ಯನ ಜೀವನ ಕತೆಗಳ ವಿದ್ಯಾಥಿರ್ಗಳು ಓದಿಕೊಳ್ಳಬೇಕು. ಶ್ರದ್ಧೆ, ನಿಷ್ಠೆ ಮತ್ತು ಸಮಾಜ ಸೇವೆಯ ಮಹತ್ವ ಅರಿಯಬೇಕು ಎಂದು ವಿವರಿಸಿದರು. ಸಾಂಸತಿಕ ಕಾರ್ಯಕ್ರಮಗಳು, ನೃತ್ಯ, ಗೀತೆ, ನಾಟಕಗಳ ಮೂಲಕ ವಿದ್ಯಾಥಿರ್ಗಳು ತಮ್ಮ ಪ್ರತಿಭೆಯನ್ನು ಪ್ರದಶಿರ್ಸಿದರು. ಕಾರ್ಯಕ್ರಮದಲ್ಲಿ ವಿದ್ಯಾಥಿರ್ಗಳು ತಮ್ಮ ಕಾಲೇಜು ಜೀವನದ ಸವಿ ನೆನಪುಗಳನ್ನು ಹಂಚಿಕೊಂಡರು.

ಪ್ರೊ. ಸಂತೋಷ ಕುಮಾರ ಜಿ. ಎಂ, ಪ್ರೊ. ಜಗದೀಶ್ವರ ಶಿವನಗುತ್ತಿ, ಡಾ. ಮಲ್ಲಿಕಾರ್ಜುನ ಜಿ. ಡಿ, ಪ್ರೊ. ತೆಹಸೀನ್​ ಶಿಗ್ಲಿ ಇತರರು ಇದ್ದರು.