ವಿಜಯವಾಣಿ ಸುದ್ದಿಜಾಲ ಗದಗ
ಅಂಕಗಳ ಆಧಾರಿತ ಶಿಣ ವ್ಯವಸ್ಥೆಗೆ ಜೋತು ಬೀಳದೆ, ಪ್ರಬುದ್ಧ ಶಿಣ ಪಡೆದು ಪ್ರತಿಭಾನ್ವಿತರಾಗಬೇಕು. ಪಠ್ಯದ ಜೊತೆಗೆ ಪಠ್ಯೆತೇತರ ಚಟುವಟಿಕೆಗಳು ಪೂರಕವಾಗಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯಕ ವಾಗುತ್ತದೆ ಎಂದು ಜೆ.ಟಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್. ಬಿ ಹಾವೇರಿ ಹೇಳಿದರು.
ತೊಂಟದಾರ್ಯ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ಸಾಂಸತಿ ಹಬ್ಬ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಅವರು, ಸಾಂಸತಿಕ ಉಡುಗೆ ತೊಡಿಗೆಗಳು ವಿವಿಧತೆಯಲ್ಲಿ ಏಕತೆಯನ್ನು, ಐಕ್ಯತೆಯನ್ನು ಸಾರುವುದರ ಜೊತೆಗೆ ಸಂಭ್ರಮಿಸುವಂತೆ ಮಾಡುತ್ತೇವೆ. ವಿದ್ಯಾಥಿರ್ಗಳಿಗೆ ಈ ಮೂಲಕ ನಮ್ಮ ನೆಲದ ಸೊಬಗನ್ನು ಬಿತ್ತುವ ಕೆಲಸ ಆಗಬೇಕಿದೆ. ವೈವಿಧ್ಯಮಯ ಆಹಾರ ಸಹಜವಾಗಿ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಉಂಟು ಮಾಡುವ ಸಾಮರ್ಥ್ಯ ಹೊಂದಿದೆ. ನಮ್ಮ ಮಣ್ಣಿನ ಬೆಳೆಗಳಲ್ಲಿ ಅಂತಹ ಶಕ್ತಿ ಇದೆ ಎಮದರು.
ಪ್ರೊ. ಪಿ. ಜಿ ಪಾಟೀಲ ಮಾತನಾಡಿ, ಆರೋಗ್ಯಕರ ಆಹಾರ ಸೇವಿಸಿ ಸಹಜ ಬದುಕನ್ನು ಸಾಗಿಸಬೇಕು. ಜೀವನವನ್ನು ಕಲಾತ್ಮಕವಾಗಿ ಬದುಕಿ ಮೌಲ್ಯಗೊಳಿಸಬೇಖು. ಇಂದಿನ ಪೀಳಿಗೆಯ ವಿದ್ಯಾಥಿರ್ಗಳು ಪ್ರಾಚಿನ ಉಡುಗೆ ತೊಡಿಗೆ, ಆಚಾರ ವಿಚಾರ ಪರಂಪರೆಯ ನಿಜವಾದ ವಾರಸುದಾರರು ಆಗಿದ್ದಾರೆ. ಅದನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮುಖ್ಯ ವಾಹಿನಿಗಳಾಬೇಕು ಎಮದರು.
ಎಸ್. ಪಿ. ಸಂಶಿಮಠ, ಪ್ರೊ. ಜಿ. ಬಿ. ಶಿರ್ಕೆ, ಪ್ರೊ. ನೇತ್ರಾವತಿ ನಾಗಲೋಟಿ, ಮೀನಾ ರಾಜರು, ಅಮೂಲ್ಯ ಹೊಂಬಾಳೆಮಠ ಹಲವರು ಇದ್ದರು.