ಜೀವಶಾಸ್ತ್ರ ವಿಷಯದ ಪುನಃಶ್ಚೇತನ ಕಾರ್ಯಗಾರ
Gadag: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ವಿಧಾನಪರಿಷತ್ತು ಸದಸ್ಯರು ಹಾಗೂ ಜಿಲ್ಲಾ ಜೀವಶಾಸ್ತ್ರ ವೇದಿಕೆಯ ಸಂಸ್ಥಾಪನ ಅಧ್ಯಕ್ಷರಾದ ಶ್ರೀ ಎಸ್ ವಿ ಸಂಕನೂರ ಇವರು ಭಾಗವಹಿಸಿದ್ದರು 2025 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜೀವಶಾಸ್ತ್ರ ವಿಷಯದಲ್ಲಿ ನೂರರಷ್ಟು ಫಲಿತಾಂಶವನ್ನು ತಂದುಕೊಟ್ಟ ಉಪನ್ಯಾಸಕರಾದ ಶ್ರೀ ಪ್ರಭಣ್ಣಾ ಬನಕಾರ ಮುರಾರ್ಜಿ ದೇಸಾಯಿ ಪ ಪೂರ್ವ ಕಾಲೇಜು ಮಲ್ಲಸಮುದ್ರ. ವಿಜಯಕುಮಾರ್ ಸನ್ಮಾರ್ಗ ಪದವಿಪೂರ್ವ ಕಾಲೇಜು ಗದಗ. ಪವನ್ ಕುಮಾರ ಶೇಠ ಮೈ ಮೆ ಪ ಪೂ ಕಾಲೇಜ್ ಗದಗ್ .ರವಿ ಕುಂಬಾರ ಏ ಬಿ ಆರ್ ಪ ಪೂ ಕ ಅಬ್ಬಿಗೇರಿ .ಯಶೋಧ ಲಮಾಣಿ ಸರ್ಕಾರಿ ಪ ಪು ಲಕ್ಷ್ಮೇಶ್ವರ. ಪಿಸಿ ಪಾಟೀಲ್ ಹಾಗೂ ಎಸ್ ಆರ್ ಹಿರೇಗೌಡರ್ ಕೆಎಲ್ಇ ಪ ಪೂ ಕಾಲೇಜು ಗದಗ
ಇವರನ್ನು ಸನ್ಮಾನಿಸಿದರು. ಪ್ರತಿಯೊಬ್ಬ ಉಪನ್ಯಾಸಕರು ಸಂಪನ್ಮೂಲ ವ್ಯಕ್ತಿಯಾಗಿರಬೇಕು ಮಕ್ಕಳ ಮಟ್ಟಕ್ಕೆ ಇಳಿದು ಬೋಧನೆಯನ್ನು ಮಾಡಬೇಕು ಹಾಗೂ ಯಾವುದೇ ಉಪನ್ಯಾಸಕರು ಪೂರ್ವ ತಯಾರಿ ಇಲ್ಲದೆ ಕೊಠಡಿಯ ಒಳಗೆ ಹೋಗಕೂಡದು ಹಾಗೂ ಪ್ರತಿವರ್ಷ ಒಂದೇ ರೀತಿಯಾಗಿರತಕ್ಕಂತಹ ಪಾಠ ಟಿಪ್ಪಣಿಯನ್ನು ನೀಡಬಾರದು ಮಕ್ಕಳಿಗೆ ಸ್ವತಂತ್ರವಾಗಿ ಪಾಠ ಟಿಪ್ಪಣಿಯನ್ನು ಮಾಡಿಕೊಳ್ಳುವುದನ್ನು ಕಲಿಸಿ ಕೊಡಬೇಕು. ಎಂಬ ಕಿವಿ ಮಾತನ್ನ ಹೇಳಿದರು. ಹಾಗೂ ನಾನು ಉಪನ್ಯಾಸಕರ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಲ್ಲವನಾಗಿದ್ದು ಯಾವಾಗಲೂ ನಿಮ್ಮ ಸಹಾಯಕ್ಕೆ ನಾನು ಸಿದ್ಧನಾಗಿರುತ್ತೇನೆ ಎಂದು ಹೇಳಿದರು ಜಿಲ್ಲೆಯ ಜೀವಶಾಸ್ತ್ರ ವೇದಿಕೆಗೆ ಯಾವಾಗಲೂ ನನ್ನ ಸಹಾಯ ಇರುತ್ತದೆ ಎಂದರು