ಜಿಲ್ಲೆ

ಕಾಂಗ್ರೆಸ್ಸ ಅಧಿಕಾರಕ್ಕೆ ಬಂದ ಮೇಲೆ ಸಾವಿನ ಸರಣಿ: ಗೋವಿಂದಗೌಡ್ರ

Gadag - Shivanand Hiremath

ಗದಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾವಿನ ಸರಣಿ ಎಲ್ಲ ವರ್ಗಗಳಲ್ಲಿ ಮುನ್ನಡೆದಿದೆ. ಈ ಸರಕಾರ ಬಂದಮೇಲೆ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ, ಸರ್ಕಾರಿ ನೌಕರರ ಆತ್ಮಹತ್ಯೆಗಳಾಗಿವೆ, ಬಾಣಂತಿಯರ ಸಾವಿನ ಸರಣಿ ಮುಂದುವರೆದಿದೆ, ಗುತ್ತಿಗೆದಾರರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದು ಈಗ ಮತ್ತೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಲು ಪರವಾನಿಗೆ ನೀಡುವಂತೆ ಮನವಿ ಸಲ್ಲಿಸಿರುವುದು ರಾಜ್ಯ ಸರ್ಕಾರದ ಹಣಕಾಸು ತಿಥಿ-ಗತಿಗೆ ಹಿಡಿದ ಕೈಗನ್ನಡಿಯಾಗಿದೆ. ಇಷ್ಟೆಲ್ಲಾ ಅನಾಹುತಗಳಾದರೂ ಯಾವೊಬ್ಬ ಮಂತ್ರಿಯೂ ಕೂಡ ಸ್ವ-ಇಚ್ಛೆಯಿಂದ ರಾಜೀನಾಮೆ ಕೊಡಲು ಮುಂದೆ ಬರದಿರುವುದು ನಾಚಿಕೆಗೇಡಿನ ಸಂಗತಿ ಎಂದು ಜೆಡಿಎಸ್ ರಾಜ್ಯದ ಪಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಸರಕಾರದ ನಾಚಿಕೆಗೇಡಿನ ಧೋರಣೆಯನ್ನು ತೀವ್ರವಾಗಿ ಖಂಡಿಸಿರುತ್ತಾರೆ ಈಶ್ವರಪ್ಪನವರ ರಾಜೀನಾಮೆ ಕೇಳಿದ ಇದೆ ಪ್ರಿಯಾಂಕ ಖರ್ಗೆ ಅವರು ಅವಾಗ ಹಿತೋಪದೇಶ ಮಾಡುತ್ತಿದ್ದರು ಈಗ ಅವರ ಸರದಿ ಬಂದಾಗ ನುಡಿಚಿಕೊಳ್ಳಲು ಹಲವಾರು ದಾರಿಗಳನ್ನು ಹುಡುಕುತ್ತಿದ್ದಾರೆ. ಬಾಣಂತಿಯರ ಹಾಗೂ ನವಜಾತ ಶಿಶುಗಳ ಸರಣಿ ಮರಣ ಮುರುಗಂಗಾ ನಡೆದರೂ ಕೂಡ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೇಕಾದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರೆ ಹೋರ್ತು ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಮುಂದಾಗಲಿಲ್ಲ. ವಾಲ್ಮೀಕಿ ನಿಗಮದ ಹಗರಣದಲ್ಲಿ ಅಧಿಕಾರಿಗಳನ್ನೇ ದೋಷಿ ಮಾಡಲು ಯತ್ನಿಸಿ ಸೋತು ಕೊನೆಗೆ ಸಚಿವರು ಒತ್ತಡಕ್ಕೆ ಮಣಿದು ರಾಜೀನಾಮೆ ಕೊಟ್ಟರು ಹೊರತು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ. ಮೂಡ ಹಗರಣದಲ್ಲಿಯೂ ಕೂಡ ಇದೆ ಪರಂಪರೆಯನ್ನು ಮುಂದುವರಿಸಿಕೊಂಡು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದರಲ್ಲಿ ಈ ಸರ್ಕಾರ ಕಾಲ ಹರಣ ಮಾಡುತ್ತಿದೆ. ರಾಜ್ಯಾದ್ಯಂತ ಕೊಲೆ ಸೂಲಿಗೆ ದರೋಡೆಗಳು ನಿತ್ಯದ ಮಾತಾಗಿಬಿಟ್ಟಿವೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಸರಕಾರ ಹಾಗೂ ಗ್ರಹ ಮಂತ್ರಿಗಳು ಕೇವಲ ದೋಷಯಾಗಿರುವ ಮಂತ್ರಿಗಳನ್ನು ಸಮರ್ಥಿಸಿಕೊಳ್ಳುವುದರಲ್ಲಿ ತಮ್ಮ ಕಾಲಹರಣ ಮಾಡುತ್ತಿದ್ದಾರೆ. ಈ ಸರಕಾರದಲ್ಲಿರುವ ಎಲ್ಲರೂ ನಾಚಿಕೆ, ಮಾನ, ಮರ್ಯಾದೆಯನ್ನು ಎಲ್ಲವನ್ನು ಬಿಟ್ಟು ದೋಷಿತ ಆರೋಪಿತ ಸಚಿವರನ್ನು ಸಮರ್ಥಿಸಿಕೊಳ್ಳುತ್ತಿರುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಇದು ಜನ ವಿರೋಧಿ ಹಾಗೂ ಮೂರು ಬಿಟ್ಟ ಸರಕಾರ ಆಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯಾ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ತೀವ್ರವಾಗಿ ರಾಜ್ಯ ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿದ್ದಾರೆ