ಜಿಲ್ಲೆ

ಪಕ್ಷಿಗಳನ್ನು ದತ್ತು ಪಡೆದು ದೇವೇಗೌಡರ ಜನ್ಮದಿನಾಚರಣೆ

Gadag - Shivanand Hiremath

ಗದಗ: ಮಾಜಿ ಪ್ರಧಾನಿ, ಜೆಡಿಎಸ್​ ಪಕ್ಷದ ವರಿಷ್ಠ ಎಚ್​. ಡಿ. ದೇವೇಗೌಡ ಅವರ ಜನ್ಮ ದಿನಾಚರಣೆಯನ್ನು ಬಿಂಕದಕಟ್ಟಿಯ ಮೃಗಾಲಯದಲ್ಲಿ ಆಚರಿಸಲಾಯಿತು. ಎಚ್​. ಡಿ. ದೇವೇಗೌಡ ಅವರ 93ನೇಯ ಜನ್ಮದಿನಾಚರಣೆಯನ್ನು ಪಕ್ಷಿಗಳನ್ನು ದತ್ತು ಪಡೆಯುವುದರ ಮೂಲಕ ಜೆಡಿಎಸ್​ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಮತ್ತು ಕಾರ್ಯಕರ್ಯತರು ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೆಂಕನಗೌಡ ಗೋವಿಂದಗೌಡ್ರ, ಛಲಕ್ಕೆ, ರಾಜಕೀಯ ಚಾಣಾಕ್ಷತನಕ್ಕೆ, ಹೆಸರಾದ, ಮಾಜಿ ಪ್ರಧಾನಿಗಳು, ಜೆಡಿಎಸ್​ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಹೋರಾಟಗಾರ ಹಾಗೂ ರೈತರ ಹಿತಚಂತಕ ಎಚ್​. ಡಿ. ದೇವೇಗೌಡ ಅವರು ಯುವಕರಿಗೆ ಮಾದರಿಯಾಗಿದ್ದಾರೆ. ದೇವೇಗೌಡರ ಜೀವನ ಅನುಕರಣಿಯವಾಗಿದೆ. ಅವರ ಅಧಿಕಾರದ ಕಾಲದಲ್ಲಿ ರೈತರಿಗೆ ನೀರಾವರಿ ಯೋಜನೆಗಳು, ಮಹಿಳಾ ಮೀಸಲಾತಿ, ಅಲ್ಪಸಂಖ್ಯಾತರಿಗೆ ಮೀಸಲಾತಿ, ಹೀಗೆ ಹತ್ತು ಹಲವು ಯೋಜನೆಗಳನ್ನು ಸಾಮಾಜಿಕ ಕಳಕಳಿ ಉಳ್ಳ ಯೋಜನೆಗಳನ್ನು ಜಾರಿ ಮಾಡಿದ್ದರು ಎಂದರು.

ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಸ್ನೇಹ ಕೊಪ್ಪಳ, ಎಂ. ಎಸ್​ ಪರ್ವತಗೌಡ್ರ, ಬಸವರಾಜ ಅಪ್ಪಣ್ಣವರ, ಪ್ರುಲ್​ ಪುನೇಕರ, ಜೋಸೆಫ್​ ಉದೋಜಿ, ಸಂತೋಷ ಪಾಟೀಲ ಇತರರು ಉಪಸ್ಥಿತಿ ಇದ್ದರು.