ಜಿಲ್ಲೆ

ಕನಕದಾಸರ ಜಯಂತೋತ್ಸವ: ಎಂ. ಆರ್. ಡೊಳ್ಳಿನ ರವರಿಗೆ ಸನ್ಮಾನ ಸಮಾರಂಭ.

Gadag - Shivanand Hiremath
: ಕನಕಾಮೃತ ವಿವಿಧೋದ್ದೇಶ ಸೇವಾ ಸಂಸ್ಥೆ ಗದಗ ಹಾಗೂ ಶ್ರೀ ಕರಿಯಮ್ಮದೇವಿ ಮಹಿಳಾ ಮಂಡಳ ಗದಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ನಡೆದ  ವಿಶ್ವಮಾನವ ಮಹಾತ್ಮ ಕನಕದಾಸರ 537 ನೇ ಜಯಂತೋತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ವಿದ್ಯಾದಾನ ಸಮಿತಿಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ರುಪ್ಸಾ ಕರ್ನಾಟಕ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಕರ್ನಾಟಕ ಅವರು ಕೊಡಮಾಡುವ 2024-25ನೇ ಸಾಲಿನ ರಾಜ್ಯಮಟ್ಟದ ವಿದ್ಯಾರತ್ನ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ  ಮುಖ್ಯೋಪಾಧ್ಯಾಯರಾದ ಶ್ರೀ ಎಂ. ಆರ್. ಡೊಳ್ಳಿನ ರವರಿಗೆ ಮಹಾತ್ಮ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಸನ್ಮಾನ ಸಮಾರಂಭದಲ್ಲಿ ಪ.ಪೂ. ಶ್ರೀ ಬಸವರಾಜ ದೇವರು ಮಹಾಸ್ವಾಮಿಗಳು ಧಾರವಾಡ, ಪ್ರೊ. ಎಂ. ಎನ್. ಕಾಮನಹಳ್ಳಿ, ಡಾ. ನಿಂಗಪ್ಪ ಮುದೇನೂರ, ಶ್ರೀ ಫಕೀರಪ್ಪ ಹೆಬಸೂರ, ಶ್ರೀ ವಾಸಣ್ಣ ಕುರುಡಗಿ, ಶ್ರೀ ರವಿ ದಂಡಿನ, ಶ್ರೀ ರುದ್ರಣ್ಣ ಗುಳಗುಳಿ, ಶ್ರೀ ಪ್ರಕಾಶ ಕರಿ, ಶ್ರೀಮತಿ ಶ್ವೇತಾ ಬೆನಕನವಾರಿ, ಶ್ರೀಮತಿ ವಿಜಯಲಕ್ಷ್ಮಿ ದಿಂಡೂರ, ಶ್ರೀ ಮುತ್ತಣ್ಣ ಮುಶಿಗೇರಿ, ಶ್ರೀ ವಿ. ವಾಯ್, ಮಕ್ಕಣ್ಣವರ, ಶ್ರೀ ಆರ್. ಬಿ. ಅಂದಪ್ಪನವರ, ಶ್ರೀಮತಿ ರೇಣುಕಾ ಕೇಶರಿ, ಡಾ|| ಜಿ. ಬಿ. ಬೀಡಿನಹಾಳ, ಡಾ. ಎನ್. ಎಂ. ಅಂಬಲಿಯವರ, ಶ್ರೀ ಜಯದೇವ ಮೆಣಸಗಿ, ಶ್ರೀ ಬಿ. ಎಂ. ಯರನಾಳ, ಶ್ರೀ ಡಿ. ಎಸ್. ಅಸುಂಡಿ, ಶ್ರೀ ಸುರೇಶ ಕೊಪ್ಪದ, ಶ್ರೀ ವಾಯ್. ಕೆ. ಪಿಡಗಣ್ಣವರ, ಶ್ರೀ ಅಂದಾನಪ್ಪ ವಡಗೇರಿ, ಡಾ. ನಾಗರಾಜ ವಡೇಗೇರಿ, ಶ್ರೀ ಸಿದ್ದಣ್ಣ ಜಕಬಾಳ, ಶ್ರೀ ಎಸ್. ಎನ್. ವೆಂಕಟಾಪುರ, ಶ್ರೀ ಎಸ್. ಬಿ. ಡೊಣ್ಣಿ, ಶ್ರೀ ವಾಯ್, ಎ. ಗುರಿಕಾರ, ಡಾ. ಎಂ. ಬಿ. ಮಡ್ಡಿ, ಕನಕಾಮೃತ ವಿವಿಧೋದ್ದೇಶ ಸೇವಾ ಸಂಸ್ಥೆಯ ಪದಾಧಿಕಾರಿಗಳು, ಶ್ರೀ ಕರಿಯಮ್ಮದೇವಿ ಮಹಿಳಾ ಮಂಡಳದ ಪದಾಧಿಕಾರಿಗಳು, ಎಲ್ಲಾ ಅತಿಥಿಮಹನೀಯರು, ಸೇವಾ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಹಾಲುಮತ ಸಮಾಜ ಬಾಂಧವರು ಪಾಲ್ಗೊಂಡಿದ್ದರು.