ಜಿಲ್ಲೆ

ಫೆ. 3ರಿಂದ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 30ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ: ಶಿವಶಾಂತವೀರ ಶರಣರು

Gadag - Shivanand Hiremath
ಗದಗ : ಮೌನಯೋಗಿ ಚಿಕೇನಕೊಪ್ಪದ  ಚನ್ನವೀರ ಶರಣರ 30 ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಫೆ. 3ರಿಂದ 5ರವರೆಗೆ ಜರುಗಲಿದೆ ಎಂದು ಶಾಂತವೀರ ಶರಣರು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಫೆ. 3 ರಂದು ಬೆಳಗ್ಗೆ 8 ಗಂಟೆಗೆ ಕುಷ್ಟಗಿಯ ಮದ್ದಾನಿ ಹಿರೇಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹಿರೇವಡ್ಡಟ್ಟಿ ಹಿರೇಮಠದ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಫೆ. 4 ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗುವದು. ಜಾತ್ರಾ ಮಹೋತ್ಸವದ ಅಂಗವಾಗಿ ಮಹಾತ್ಮರ ಜೀವನ ದರ್ಶನ ಪ್ರವಚನ, ಮಹಾರಥೋತ್ಸವ, ಲಘು ರಥೋತ್ಸವ, ಜಾನಪದ ಕಲಾಮೇಳ, ಸಾಮೂಹಿಕ ವಿವಾಹಗಳು, ಸುಮಂಗಲೆಯರಿಗೆ ಉಡಿ ತುಂಬುವದು, ತುಲಾಬಾರ, ಧಾರ್ಮಿಕ ಚಿಂತನಾಗೋಷ್ಠಿ ಹಾಗೂ ಶರಣಶ್ರೀ ಪ್ರಶಸ್ತಿ ಪ್ರಧಾನ, ಚನ್ನವೀರ ಶರಣರ ಕರ್ತೃು ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಲಿಂಗದೀಕ್ಷೆ ಅಯ್ಯಾಚಾರ ಜರುಗಲಿದೆ ಎಂದು ಹೇಳಿದರು.
ಫೆ. 4ರಂದು ವಿವಾಹ ಮಹೋತ್ಸವ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಹಿರೇಮಾಗಡಿಯ ಶಿವಮೂರ್ತಿ ಮುರಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಗುಂಡೂರಿನ ಎಸ್. ವಿ. ಪಾಟೀಲ ಅವರಿಗೆ ಶರಣಶ್ರೀ ಪ್ರಶಸ್ತಿ" ಪ್ರದಾನ ಮಾಡಲಾಗುವುದು .ಫೆ. 5 ರಂದು ಸಂಜೆ 5ಗಂಟೆಗೆ "ಕಡುಬಿನ ಕಾಳಗ ಹಾಗೂ ಶರಣರ ಬೆಳ್ಳಿಮೂರ್ತಿ ಉತ್ಸವ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.
ಎ. ಎನ್. ನಾಗರಳ್ಳಿ, ವಿ. ಬಿ. ಪೊಲೀಸಪಾಟೀಲ, ಎಂ. ಬಿ. ಸಿಕ್ಕೆದೇಸಾಯಿ, ವಿ. ಎಸ್. ಹಿರೇಮಠ, ಎಸ್.ಬಿ.ಪಾಟೀಲ, ಎಸ್. ಎಸ್. ಪಾಟೀಲ ಸೇರಿದಂತೆ ಹಲವರು ಇದ್ದರು.