Gadag: ಪ್ರಾಥಮಿಕ ಆರೋಗ್ಯ ಕೇಂದ್ರ ಜಂತಲಿಶಿರೂರಿನ ಜಂತಲಿಶಿರೂರ ಗ್ರಾಮದಲ್ಲಿ ಡೆಂಗ್ಯೂ ವಿರೋದಿ üಮಾಸಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಂತಲಿ ಶಿರೂರ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷರಾದ ರವಿ ದೊಡ್ಡಮನಿಯವರು ಮಾತನಾಡಿ, ಡೆಂಗ್ಯೂ ರೋಗವು ಪ್ರಸಕ್ತ ದಿನಮಾನದಲಿ ್ಲಗಂಭೀರರೋಗವಾಗಿ ಪರಿಣಮಿಸಿದೆ, ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸಾಕಷು ್ಟಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರ ಮೂಲಕಜನರಿಗೆ ಮುಂಜಾಗ್ರತಾ ಕ್ರಮಗಳಕುರಿತು ಅರಿವು ಮೂಡಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಮಾತ್ರ ಡೆಂಗ್ಯೂ ನಿಯಂತ್ರಿಸಲು ಸಾಧ್ಯ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಲ್ಲಿಕಾರ್ಜುನ. ಎಫ್. ಕಲಕಂಬಿಯವರು ಮಾತನಾಡಿ ನೀರಿನ ತಾಣಗಳನ್ನು ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ ಎಂಬ ಘೋಷವಾಕ್ಯದೊಂದಿಗೆ ಈ ಸಾಂಕ್ರಾಮಿಕ ರೋಗವನ್ನು ಎಲ್ಲರೂ ಸೇರಿ ನಿಯಂತ್ರಿಸೋಣ, ಡೆಂಗ್ಯೂರೋಗವು, ಈಡೀಸ್ ಈಜಿಪ್ಟೆöÊ ಎಂಬ ಹಗಲು ಹೊತ್ತಿನಲಿ ್ಲಕಚ್ಚುವ ಸೊಳ್ಳೆಯಿಂದ ಹರಡುತ್ತದೆ. ಈರೋಗದಲಕ್ಷಣಗಳಾದಹೆಚ್ಚಿನಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತುಸಂಧಿನೋವು, ಮತ್ತುವಿಶಿಷ್ಟಚರ್ಮದ ಗುಳ್ಳೆಗಳಅಥವಾದಡಸಲು/ ದದ್ದುಗಳನ್ನುಒಳಗೊಂಡಿರಬಹುದು. ಗುಣಮುಖವಾಗಲು ಸಾಮಾನ್ಯವಾಗಿ ಕಡಿಮೆ ಎಂದರೆ ಎರಡುರಿಂದ ಏಳು ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಅಪರೂಪದ ಸಂದರ್ಭಗಳಲ್ಲಿ ಈ ಒಂದು ಸಣ್ಣ ಪ್ರಮಾಣದ ರೋಗವು ಮಾರಣಾಂತಿಕವಾದ ಡೆಂಗಿ ಹೆಮರಾಜಿಕ್ಜ÷್ವರವಾಗಿ ಪರಿಣಮಿಸಬಹುದು. ಪರಿಣಾಮವಾಗಿ ರಕ್ತಸ್ರಾವ, ರಕ್ತದಕಿರುಬಿಲ್ಲೆಗಳುಕಡಿಮೆಮಟ್ಟಕ್ಕೆಇಳಿಯುಯವುದು ಹಾಗೂರಕ್ತದಪ್ಲಾಸ್ಮಾದಸೋರಿಕೆ, ಅಥವಾ ಡೆಂಗಿಯ ಗಾಬರಿ ಲಕ್ಷಣಗಳಾದ, ಅಪಾಯಕಾರಿ ಕಡಿಮೆ ರಕ್ತದ ಒತ್ತಡಸಂಭವಿಸುತ್ತದೆಎAದರು.
ಕಾರ್ಯಕ್ರಮದ ಕುರಿತು ಪ್ರಯೋಗ ಶಾಲಾತಾಂತ್ರಿಕ ಅಧಿಕಾರಿಗಳಾದ ಅನ್ವರಗೌಡ ಪಾಟೀಲರವರು ಮಾತನಾಡಿ ಸಾರ್ವಜನಿಕರು ಈ ರೋಗವನ್ನು ನಿಯಂತ್ರಿಸಲು ಸಾರ್ವಜನಿಕರು ತಮ್ಮ ಮನೆಯಲ್ಲಿ ಹಾಗೂ ಮನೆಯ ಸುತ್ತಲೂ ಬಿದ್ದಿರುವ ಘನತ್ಯಾಜ್ಯಗಳಲ್ಲಿ ಲಾರ್ವಾಗಳುಇವೆಯೋ ಇಲ್ಲವೋ ಎಂಬುದನ್ನು ಸರಿಯಾಗಿ ಪರಿಶಿಲಿಸಿಕೊಳ್ಳಬೇಕು, ನಂತರ ಅವುಗಳನ್ನು ಸ್ವಚ್ಛಗೊಳಿಸಿ ನೀರು ತುಂಬಿಸಿ, ಸೊಳ್ಳೆಯೂ ಒಳಗೆ ಹೋಗದ ಹಾಗೆ ನೀರಿನ ತಾಣದ ಮೇಲೆ ಬಟ್ಟೆ ಅಥವಾ ಮುಚ್ಚಳವನ್ನು ಮುಚ್ಚಬೇಕು ಎಂದರು.
ಶಾಲಾ ಶಿಕ್ಷಕರೂ ಸಹಶಾಲೆಯ ಆವರಣದಲ್ಲಿ ಬಿದ್ದಿರುವ ಘನತ್ಯಾಜ್ಯಗಳನ್ನು ಗ್ರಾ.ಪಂ.ಯಗಮನಕ್ಕೆ ತಂದು ಘನತ್ಯಾಜ್ಯಗಳ ವಿಲೇವಾರಿಮಾಡಿಸಬೆಕು ಮತ್ತು ಶಾಲಾ ಪ್ರಾರ್ಥನಾಸಮಯದಲ್ಲಿ ಮಕ್ಕಳಿಗೆ ಡೆಂಗ್ಯೂ ಕುರಿತು ಮುಂಜಾಗ್ರತಾ ಕ್ರಮಗಳನ್ನು ತಿಳಿಸಬೇಕು ಎಂದರು. ಸುಲಭ ವಿಧಾನಗಳಾದ ಬೇವಿನ ಸೊಪ್ಪಿನಹೊಗೆಯನ್ನು ಹಗಲು ಹೊತ್ತಿನಲ್ಲಿ ಹಾಕುವದು, ಮಲಗುವಾಗ ಸೊಳ್ಳೆಯ ಪರದೆಗಳನ್ನು ಬಳಸುವದು, ಮೈತುಂಬಾ ಬಟ್ಟೆಗಳನ್ನು ತೊಡುವದು, ಮನೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳುವದು, ಮನೆಯಲ್ಲಿ ನೀರುಂಬಿದ ತಾಣಗಳಾದ ಡ್ರಮ್ಮು, ಸಿಮೆಂಟ್ ತೊಟ್ಟಿ, ಕಲ್ಲಿನ ಬಾನಿಗಳನ್ನು ಸೊಳ್ಳೆಗಳು ಒಳಹೋಗದಂತೆ ಮುಚ್ಚಬೇಕು, ಮನೆಯ ಮುಂದೆ ಇರುವನಲ್ಲಿ ನೀರಿನ ಗುಂಡಿಗಲಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. .
ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಿವಕುಮಾರ ಗುರಿಕಾರವರು ಮಾತನಾಡಿ, ಈ ರೋಗವನ್ನು ತಡೆಗಟ್ಟಲು ನಮ್ಮ ಇಲಾಖೆಯು ಗ್ರಾಮದಲ್ಲಿರುವ ಆಶಾಕಾರ್ಯಕರ್ತೆಯರು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಮೂಲಕ ಪ್ರತಿದಿನ ಲಾರ್ವಾಸಮೀಕ್ಷೆಮಾಡಿ,ಲಾರ್ವಾ ಕಂಡುಬAದ ತಾಣಗಳನ್ನು ನಾಶಪಡಿಸುತ್ತಿದ್ದಾರೆ. ಗ್ರಾಮ ಪಂಚಾಯ್ತಿಯಿAದಲೂ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಮನವಿ ಮಾಡಿಕೊಳ್ಳಲಾಗಿದ್ದು ಕ್ರಿಮಿನಾಶಕವನ್ನು ಕೊಳಚೆ ಪ್ರದೇಶಗಳಲ್ಲಿ ಈಗಾಗಲೇ ಸಿಂಪಡಿಸಲಾಗಿದೆಮತು ್ತಅಗತ್ಯಬಿದ್ದರೆ ಮತ್ತೊಮ್ಮೆ ಕ್ರಿಮಿನಾಶಕ ಸಿಂಪಡಿಸಲಾಗುವದು ಎಂದರು.
ಕಾರ್ಯಕ್ರಮದಲ್ಲಿ ಜಂತಲಿಶಿರೂರ ಗ್ರಾಮಪಂಚಾಯ್ತಿಯ ಅಧ್ಯಕ್ಷರಾದ ಶ್ರೀಮತಿ ಜೈತುನಬಿಬಳ್ಳಾರಿಯವರು, ಗ್ರಾ.ಪಂ.ಯಸದಸ್ಯರಾದ ಯಲ್ಲಪ್ಪಹೊಂಬಳರವರು, ಶಾಲಾ ಶಿಕ್ಷಕರಾದ ಎಸ್. ಎಮ್. ಮರಿಗೌಡರವರು, ಶ್ರೀಕಾಂತ ಗೌರಿಪುರವರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾದ ಶ್ರೀಮತಿಮಮ್ತಾಜ್ ಚಿಂತಗುAಟಿಯವರು,ಅAಗನವಾಡಿಕಾರ್ಯಕರ್ತೆಯರು, ಗ್ರಾಮಪಂಚಾಯ್ತಿಯ ನೀರು ಸರಬರಾಜು ಮಾಡುವವರು, ಆಶಾ ಕಾರ್ಯಕರ್ತೆಯರು, ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು.