ಗದಗ: ನಗರದ ಉಸಗಿನಗಟ್ಟಿ ಗಂಜೀಬಸವೇಶ್ವರ 63ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜಗಜ್ಯೋತಿ ಬಸವೇಶ್ವರ ಹಾಗೂ ಏಕೋರಾಮಾರಾಧ್ಯರ ಜಯಂತ್ಯೋತ್ಸವ ಸಮಾರಂಭ ಏ.26ರಿಂದ ಮೇ 1ರವರೆಗೆ ನಡೆಯಲಿದೆ ಎಂದು ಗಂಜೀ ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿ ಕೋಶಾಧ್ಯಕ್ಷ ಶಂಕರ ಕರಬಿಷ್ಟಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ.26ರಂದು ಬೆಳಿಗ್ಗೆ 8.30ಕ್ಕೆ ನಂದಿ ಧ್ವಜಾರೋಹಣ ನಡೆಯಲಿದೆ. ತೋಟಗಾರಿಕೆ ಇಲಾಖೆ ನಿವೃತ್ತ ಅಧಿಕಾರಿ ಸುರೇಶ ಕುಂಬಾರ ಧ್ವಜಾರೋಹಣ ಮಾಡುವರು. ಶಿದ್ರಾಮಪ್ಪ ಹುಂಬಿ ಅವರ ಮನೆಯಿಂದ ತೇರಿನ ಕಳಸದ ಮೆರವಣಿಗೆಯೊಂದಿಗೆ ಕಳಸಾರೋಹಣ ಮಾಡಲಾಗುತ್ತದೆ. ಬಿಜೆಪಿ ಮುಖಂಡ ಎಂ.ಎಸ್.ಕರಿಗೌಡ್ರ ಭಾಗವಹಿಸುವರು. ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಉಪಸ್ಥಿತಿ ಇರುವ ಎಂದರು.
ಏ.27ರಂದು ಬೆಳಿಗ್ಗೆ 10ಕ್ಕೆ ರೋಟರಿ ಕ್ಲಬ್ ವತಿಯಿಂದ ಉಚಿತ ದಂತ ಹಾಗೂ ನೇತ್ರ ತಪಾಸಣೆ ಶಿಬಿರವನ್ನು ನಗರದ ಉಸಗಿನಗಟ್ಟಿ ಓಣಿಯಲ್ಲಿರುವ ಕಾಳಿಕಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಏ.28ರಂದು ಸಂಜೆ 7.30ಕ್ಕೆ ಬಸವ ಮಂಟಪದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನರಗುಂದ ಸಿದ್ದೇಶ್ವರ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಶಾಬಾದಿಮಠ ಅಧ್ಯಕ್ಷತೆ ವಹಿಸುವರು. ಏ.29ರಂದು ಸಂಜೆ 7.30ಕ್ಕೆ ಬಸವ ಮಂಟಪದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೂದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಏ.30ರಂದು ಬೆಳಗ್ಗೆ 8ಕ್ಕೆ ಮಹಾರುದ್ರಾಭಿಷೇಕ ನಂತರ ಜಗಜ್ಯೋತಿ ಬಸವೇಶ್ವರ ಹಾಗೂ ಜಗದ್ಗುರು ಏಕೋರಾಮಾರಾಧ್ಯರ ಭಾವಚಿತ್ರಗಳ ಮತ್ತು ನೂರಾರು ಜೋಡಿ ಎತ್ತುಗಳ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ ಗಂಜೀ ಬಸವೇಶ್ವರ ಮಹಾರಥೋತ್ಸವ ನಡೆಯಲಿದೆ. ಮೇ 1ರಂದು ಬೆಳಗ್ಗೆ 11ಕ್ಕೆ ಸರ್ಫರಾಜ್ ಉಮಚಗಿ ಅವರ ಹೊಲದಲ್ಲಿ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಶಾಂತ ಶಾಬಾದಿಮಠ, ಸೋಮಣ್ಣ ಪುರದ, ಪ್ರಶಾಂತ, ಸಿದ್ಧಲಿಂಗೇಶ ಸಂಗನಾಳ, ಸಿದ್ದಲಿಂಗೇಶ ಗಾಣಿಗೇರ, ಪರಪ್ಪ ಕಮತರ, ಪ್ರಭು ಬಂಡಿ, ಗುರುಶಾಂತಗೌಡ್ರ ಮರಿಗೌಡ್ರ, ಮಂಜುನಾಥ ಲಕ್ಕುಂಡಿ, ಫಕೀರಗೌಡ ಇತರರು ಇದ್ದರು.