ಜಿಲ್ಲೆ

ಮಕ್ಕಳಿಗೆ ಮೌಲ್ಯ ಶಿಕ್ಷಣ ಕಡ್ಡಾಯವಾಗಲಿ- ಬಿಕೆ ಜಯಂತಿ

Gadag - Shivanand Hiremath

Gadag: ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣವನ್ನು ಪಠ್ಯವಾಗಿ ಕಡ್ಡಾಯಗೊಳಿಸಬೇಕಾದ ಅಗತ್ಯವಿದೆ ಎಂದು ಗದುಗಿನ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾದ ಬಿ ಕೆ ಜಯಂತಿ ಅಕ್ಕನವರು ಅಭಿಪ್ರಾಯಪಟ್ಟರು.

ನಗರದ ಎಸ್ ಎಂ ಕೃಷ್ಣ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಶಿಕ್ಷಣದಲ್ಲಿ ವಿಜ್ಞಾನ, ಗಣಿತ, ಭಾಷೆ ಮುಂತಾದ ಪಠ್ಯ ಇದ್ದರೂ ಕೂಡಾ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮನಸ್ಸು ಅರಳಿಸುವ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾದ ಅಂಶ ಸಿಗದೆ ತೀವ್ರ ಒತ್ತಡ ಎದುರಿಸುವಂತಾಗಿದೆ, ಈ ಹಿನ್ನಲೆಯಲ್ಲಿ ಮೌಲ್ಯ ಮತ್ತು ಯೋಗ ಶಿಕ್ಷಣವನ್ನು ಪಠ್ಯವಾಗಿಸುವ ಮಹತ್ತರ ನಿರ್ಧಾರವನ್ನು ಶಿಕ್ಷಣ ಇಲಾಖೆ ಮಾಡಬೇಕಾಗಿದೆ ಎಂದು ಅವರು ಒತ್ತಾಯಿಸಿದರು.

ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮುಂದು ಒರೆಯತ್ತಿರುವ ಈ ಕಾಲದಲ್ಲಿ ಧೈರ್ಯ, ಸಾಹಸ, ಆತ್ಮ ಶಕ್ತಿ ಹೆಚ್ಚಿಸಲು ರಾಜಯೋಗ ಪೂರಕವಾಗಿ ಕೆಲಸ ಮಾಡುತ್ತದೆ ಈಶ್ವರೀಯ ವಿಶ್ವ ವಿದ್ಯಾಲಯ ಈ ನಿಟ್ಟಿನಲ್ಲಿ ಶಿಕ್ಷಣ ಪ್ರಸಾರ ಮಾಡುತ್ತ ಬಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಕೆ ರೇಖಾ ಮತ್ತು ಬಿಕೆ ಜೋಶ್ನಾ ಅವರಿಂದ ಈಶ್ವರೀಯ ವಿಶ್ವ ವಿದ್ಯಾಲಯ ವತಿಯಿಂದ ಹೊರ ತಂದಿರುವ ಕಿರು ಕ್ಯಾಲೆಂಡರ್ ಗಳನ್ನು ಮಕ್ಕಳಿಗೆ ಮತ್ತು ಶಾಲೆಯ ಶಿಕ್ಷಕ ಸಿಬ್ಬಂದಿಯವರಿಗೆ ವಿತರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಜಗದೀಶ್ ಶೀಲವಂತ, ಶರಣಪ್ಪ ಸರ್, ಚಾಮರಾಜ ಹುಡೇದ,ಡಾ.ಗಣೇಶ ಸುಲ್ತಾನಪುರ ಮುಂತಾದವರು ಉಪಸ್ಥಿತರಿದ್ದರು. ಕನಕೆ ಸರ್ ಸರ್ವರಿಗೂ ಸ್ವಾಗತ ಕೋರಿದರು. ಕೊನೆಗೆ ವಿಜಯಲಕ್ಷ್ಮಿ ಪಾಟೀಲ ಟೀಚರ್ ವಂದಿಸಿದರು.

ಈ ದಿನದಂದು ಬೆಳಿಗ್ಗೆ ಗದುಗಿನ ಬಸವೇಶ್ವರ ನಗರದಲ್ಲಿನ ಈಶ್ವರೀಯ ವಿಶ್ವ ವಿದ್ಯಾಲಯದ ಸಭಾಂಗಣದಲ್ಲಿ ಹೆಣ್ಣು ಮಕ್ಕಳಿಂದ ದೀಪಾರಾಧನೆಯ ಮೂಲಕ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಲಾಯಿತು. ಜೊತೆಜೊತೆಗೆ ಮಕ್ಕಳಿಗೆ ಮೌಲ್ಯ ಶಿಕ್ಷಣವನ್ನು ನೀಡಿ ಸನ್ಮಾನಿಸಲಾಯಿತು.